ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಪ್ರತಿಷ್ಠಿತ ವಿಕಾಸ ವಿದ್ಯಾ ಸಮಿತಿಯ ಆರು ವಿದ್ಯಾರ್ಥಿಗಳು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದ ಎಸ್. ವಿದ್ಯಾ, ಎನ್.ಜಿ. ಸಾತ್ವಿಕ್, ಜಿ.ಎಸ್. ಇಂದೂಧರ್, ಎಸ್.ಆರ್. ಚಿನ್ಮಯಿ ಹಾಗೂ ವಾಣಿಜ್ಯ ವಿಭಾಗದ ಎಂ.ಆರ್. ರಘುನಂದನ್, ಯು. ಶಮಂತ್ ಅಡಿಗ ಅವರುಗಳು 600ಕ್ಕೆ 600 ಅಂಕ ಗಳಿಸುವ ಮೂಲಕ ಶಾಲೆಗೆ, ಪೋಷಕರಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post