ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಪ್ರೆಸ್ ಕ್ಲಬ್ ಕೌನ್ಸಿಲ್ ಕಚೇರಿಗೆ ಪತ್ರಕರ್ತ ಮಿತ್ರರೊಬ್ಬರು ಪತ್ರಯೊಂದನ್ನು ಬರೆದಿದ್ದು, ನಟ ದರ್ಶನ್ ಮಾಧ್ಯಮದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಮಾಧ್ಯಮದವರನ್ನು ಸೆಕ್ಯೂರಿಟಿ ಎಂದು ಕರೆದು ಬಾಯಿಗೆ ಬಂದ ಹಾಗೆ ಬೈದಿರುವ ಆಡಿಯೋ ಕ್ಲಿಪ್ ಅನ್ನು ನೋಡಿದರೆ ಮಾಧ್ಯಮದವರು ಯಾರು ಸತ್ಯವಂತರೇ ಇಲ್ಲವೆಂಬಂತೆ ಸಮಾಜಕ್ಕೆ ಬಿಂಬಿಸಲು ಹೊರಟಿರುವ ನಟ ದರ್ಶನ್ ವಿರುದ್ಧ ಪ್ರೆಸ್ ಕ್ಲಬ್ ಕೌನ್ಸಿಲ್ ಕಾನೂನು ಹೋರಾಟ ನಡೆಸಬೇಕೆಂದು ಕೋರಿಕೊಂಡಿದ್ದಾರೆ.
ಪತ್ರ ಕಚೇರಿಗೆ ಬಂದ ತಕ್ಷಣ ಪ್ರೆಸ್ ಕ್ಲಬ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷರಾದ ರಾಘವೇಂದ್ರಾಚಾರ್ ಅವರು ಎಲ್ಲಾ ಪದಾಧಿಕಾರಿಗಳಿಗೆ ಸಭೆ ಕರೆದು ಹಿರಿಯ ಕಾನೂನು ತಜ್ಞರು, ಮಾಧ್ಯಮದವರು ಹಾಗೂ ಪತ್ರಕರ್ತರ ಸಲಹೆಯನ್ನು ಪಡೆಯಲು ಇಚ್ಚಿಸಿದ್ದಾರೆ.
ಪತ್ರಕರ್ತರು ಎಂದರೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವಂತಹ ನಿಷ್ಠಾವಂತರು. ಇಂಥ ಮಾಧ್ಯಮದವರ ವಿರುದ್ಧ ನಟ ದರ್ಶನ್ ಮಾತನಾಡಿರುವ ಹೇಳಿಕೆ ಗಂಭೀರವಾಗಿ ಪರಿಗಣಿಸಿ ಮಾಧ್ಯಮದವರ ವಿರುದ್ಧ ಸಮಾಜಕ್ಕೆ ಧಕ್ಕೆಯಾಗುವಂತಹ ಸಂದೇಶವನ್ನು ನೀಡುತ್ತಿರುವುದು ಮಾಧ್ಯಮಲೋಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯವಾಗಿರುತ್ತದೆ.
ಆದ ಕಾರಣ ಎಲ್ಲಾ ಹಿರಿಯರ ಸಲಹೆಗಳನ್ನು ಪಡೆದು ಕಾನೂನಾತ್ಮಕವಾಗಿ ಹೋರಾಟ ನಡೆಸಲು ಪತ್ರಕರ್ತರ ಹಾಗೂ ಸದಸ್ಯರ ನಿರ್ಣಯವನ್ನು ಪಡೆದು ತೀರ್ಮಾನಿಸಿದ್ದಾರೆ ಎಂದು ಪ್ರೆಸ್ ಕ್ಲಬ್ ಕೌನ್ಸಿಲ್(ರಿ)ನ ಪ್ರಧಾನ ಕಾರ್ಯದರ್ಶಿ ಆಶಾ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post