ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಸಾಲು ಸಾಲಾಗಿ ವರದಿಯಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಖಡತ್ ಸಂದೇಶ ರವಾನಿಸಿದ್ದಾರೆ.
ಸೀಗೆಹಟ್ಟಿಯಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಸುಟ್ಟು ಆಟೋ-ಬೈಕ್ ಸುಟ್ಟು ಕರಕಲಾದ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸೀಗೆಹಟ್ಟಿಯಲ್ಲಿ ನಡೆದಿರುವ ಹೇಯ ಕೃತ್ಯ. ಇದು ಮಾತ್ರವಲ್ಲ ಇತ್ತೀಚೆಗೆ ನಗರದಲ್ಲಿ ಭೀಕರ ಕೊಲೆ ನಡೆದಿದೆ, ದರೋಡೆಗಳು ನಡೆದ ಪ್ರಕರಣ ವರದಿಯಾಗಿದೆ. ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದಕ್ಕೆ ಜಿಲ್ಲಾ ಪೊಲೀಸರ ವೈಫಲ್ಯವೇ ಕಾರಣ. ಹೀಗಾಗಿ, ತತಕ್ಷಣವೇ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡು ಅಪರಾಧ ಕೃತ್ಯಗಳಿಗೆ ಇತಿಶ್ರೀ ಹಾಡಬೇಕು. ಇಲ್ಲದೇ ಹೋದಲ್ಲಿ ಎಸ್’ಪಿಯವರನ್ನು ವರ್ಗಾವಣೆ ಮಾಡಿಸಿ, ಸರಿಯಾದ ಅಧಿಕಾರಿಗಳನ್ನು ಹಾಕಿಸಿಕೊಳ್ಳಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದರು.
Get In Touch With Us info@kalpa.news Whatsapp: 9481252093
















