ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಹಾಗೂ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಜ.22ರಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಶಿವಮೊಗ್ಗ ಜಿಲ್ಲಾಮಟ್ಟದ ಎನ್‌ಪಿಎಸ್ ನೌಕರರ ಸಮಾವೇಶ ಮತ್ತು ಓಟ್ ಫಾರ್ ಒಪಿಎಸ್ ಅಭಿಯಾನ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ರಾಘವೇಂದ್ರ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎನ್‌ಪಿಎಸ್ ಯೋಜನೆಯನ್ನು ವಿರೋಧಿಸಿ 2014 ರ ಏಪ್ರಿಲ್ 1 ರಂದು ಕಪ್ಪು ಪಟ್ಟಿ ಧರಿಸುವ ಮೂಲಕ ಆರಂಭವಾದ ಹೋರಾಟ ಪೋಸ್ಟ್ ಕಾರ್ಡ್ ಅಭಿಯಾನ, ಬೆಂಗಳೂರಿನ ಫ್ರೀಡಂ ಪಾರ್ಕ್ ಚಲೋ, ರಕ್ತಕೊಟ್ಟೆವು ಪಿಂಚಣಿ ಬಿಡೆವು, ಪಾರ್ಲಿಮೆಂಟ್ ಚಲೋ, ಬೆಳಗಾವಿ ಚಲೋ ಸೇರಿದಂತೆ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಎನ್‌ಪಿಎಸ್ ಜಾರಿಯಾಗಿ 16 ವರ್ಷ ಕಳೆದಿದೆ. ದಿನ ಕಳೆದಂತೆ ನೌಕರರು ನಿರಾಸೆಗೊಳ್ಳುವ ಸಾಧ್ಯತೆಯಿದೆ. ಸರ್ಕಾರಿ ನೌಕರರ ಸಂಧ್ಯಾ ಕಾಲದ ಸಾಮಾಜಿಕ, ಆರ್ಥಿಕ ಭದ್ರತೆಯ ಪ್ರಶ್ನೆಗಳೊಂದಿಗೆ ಗೌರವ ಹಾಗೂ ಘನತೆಯ ಪ್ರಶ್ನೆಯೂ ಆಗಿದೆ. ನಮ್ಮ ಹೋರಾಟಕ್ಕೆ ಸರ್ಕಾರಿ ನೌಕರರ ವಿವಿಧ ಸಂಘಟನೆಗಳು ಸಹ ಬೆಂಬಲವಾಗಿ ನಿಂತಿವೆ. ಡಿ.19 ರಿಂದ ಜ.1ರ ವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಮಾಡು ಇಲ್ಲವೆ ಮಡಿ’ ಅನಿರ್ಧಿಷ್ಟ ಹೋರಾಟವು ನಿರ್ದಿಷ್ಟ ಫಲಗಳನ್ನು ಒದಗಿಸಿದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಶಿವಪ್ಪ ನಾಯಕ ವೃತ್ತದಲ್ಲಿರುವ ಶಿವಪ್ಪ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರೊಂದಿಗೆ ಬೈಕ್ ಹಾಗೂ ಪಾದಯಾತ್ರೆಯ ಜಾಗೃತಿ ಜಾಥವು ಆರಂಭಗೊಂಡು ಕರ್ನಾಟಕ ಸಂಘ, ಶಿವಮೂರ್ತಿ ವೃತ್ತ, ಉಷಾ ನರ್ಸಿಂಗ್ ಹೋಮ್ ವೃತ್ತದ ಮೂಲಕ ಫ್ರೀಡಂಪಾರ್ಕ್ ತಲುಪಲಿದೆ. ಸಮಾವೇಶದಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲಾ ಸರ್ಕಾರಿ ನೌಕರರು ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ವಿವಿಧ ತಾಲ್ಲೂಕಿನ ಅಧ್ಯಕ್ಷರಾದ ಎಸ್.ಪ್ರಭಾಕರ್, ಮಾಲತೇಶ್, ಎ.ರಂಗನಾಥ್, ಡಾ.ರಜನಿಕಾಂತ್, ಡಾ.ಹಾಲಮ್ಮ ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post