ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಭಾಗದಲ್ಲಿ ವರುಣನ ಕೃಪೆ ಮುಂದುವರೆದಿದ್ದು, ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ವಾಡಿಕೆಗಿಂತಲೂ ಈ ಬಾರಿ ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲಿನ ಅಣೆಕಟ್ಟೆಗಳು ಇನ್ನೂ ಬರಿದಾಗಿದೆ.
ಎಲ್ಲಿ, ಎಷ್ಟು ಮಳೆಯಾಗಿದೆ?
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 82.30 ಮಿಮಿ ಮಳೆಯಾಗಿದ್ದು, ಸರಾಸರಿ 11.76 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮಿ ಇದ್ದು, ಇದುವರೆಗೆ ಸರಾಸರಿ 44.57 ಮಿಮಿ ಮಳೆ ದಾಖಲಾಗಿದೆ.
Also read: ಕಾಸಿಗಾಗಿ ಪೋಸ್ಟಿಂಗ್ ದಾಖಲೆ ಕೊಟ್ಟರೆ ಆರೋಪಿತ ಸಚಿವರನ್ನು ವಜಾ ಮಾಡುತ್ತೀರಾ? ಹೆಚ್‌ಡಿಕೆ ಪ್ರಶ್ನೆ
ಶಿವಮೊಗ್ಗ 2.20 ಮಿಮಿ., ಭದ್ರಾವತಿ 6.40 ಮಿಮಿ., ತೀರ್ಥಹಳ್ಳಿ 17.20 ಮಿಮಿ., ಸಾಗರ 33.60 ಮಿಮಿ., ಶಿಕಾರಿಪುರ 02.00 ಮಿಮಿ., ಸೊರಬ 6.00 ಮಿಮಿ. ಹಾಗೂ ಹೊಸನಗರ 14.90 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‍ಗಳಲ್ಲಿ
ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1741.70 (ಇಂದಿನ ಮಟ್ಟ), 5371.00 (ಒಳಹರಿವು), 11434.0 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1759.05. ಭದ್ರಾ: 186 (ಗರಿಷ್ಠ), 136.10 (ಇಂದಿನ ಮಟ್ಟ), 59.00 (ಒಳಹರಿವು), 209.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 155.70. ತುಂಗಾ: 588.24 (ಗರಿಷ್ಠ), 586.78 (ಇಂದಿನ ಮಟ್ಟ), 3556.00 (ಒಳಹರಿವು), 50.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24. ಮಾಣಿ: 595 (ಎಂಎಸ್‍ಎಲ್‍ಗಳಲ್ಲಿ), 570.62 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 775 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 571.88 (ಎಂಎಸ್‍ಎಲ್‍ಗಳಲ್ಲಿ).
ಪಿಕ್‍ಅಪ್
563.88 (ಎಂಎಸ್‍ಎಲ್‍ಗಳಲ್ಲಿ), 561.60 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 351 (ಒಳಹರಿವು), 402.00(ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.36 (ಎಂಎಸ್‍ಎಲ್‍ಗಳಲ್ಲಿ).. ಚಕ್ರ: 580.57 (ಎಂ.ಎಸ್.ಎಲ್‍ಗಳಲ್ಲಿ), 564.40 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 411.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 572.60 (ಎಂಎಸ್‍ಎಲ್‍ಗಳಲ್ಲಿ). ಸಾವೆಹಕ್ಲು: 583.70 (ಗರಿಷ್ಠ ಎಂಎಸ್‍ಎಲ್‍ಗಳಲ್ಲಿ), 572.28 (ಇಂದಿನ ಮಟ್ಟ ಎಂ.ಎಸ್.ಎಲ್‍ನಲ್ಲಿ), 395.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್‍ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.72 (ಎಂಎಸ್‍ಎಲ್‍ಗಳಲ್ಲಿ).


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















