ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾವು ದೇಶದಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆ ಮತ್ತು ಯಶಸ್ಸನ್ನು ಕಂಡಿದ್ದರೂ ನಮ್ಮ ಎಲ್ಲಾ ನಾಗರಿಕರ ಯೋಗಕ್ಷೇಮದ ನಡುವೆ ಸ್ವಾತಂತ್ರ್ಯದ ಬಗ್ಗೆ ನಮ್ಮ ಬದ್ಧತೆಯನ್ನು ಘೋಷಿಸಲು ಗಣರಾಜ್ಯೋತ್ಸವ ಒಂದು ಮಾಧ್ಯಮವಾಗಿದೆ ಎಂದು ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಎಸ್. ಸುರೇಶ್ ಅಭಿಪ್ರಾಯಪಟ್ಟರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಡಿಕೆಲ ಸುಬ್ಬಯ್ಯ ಪ್ರತಿಷ್ಠಾನದ ಅಧ್ಯಕ್ಷ ಟಿ.ಸುಬ್ಬರಾಮಯ್ಯನವರು ಧ್ವಜಾರೋಹಣ ನೇರವೇರಿಸಿದರು. ನಂತರ ಗಣರಾಜ್ಯೋತ್ಸವದ ವಿಶೇಷತೆ ಬಗ್ಗೆ ಡಾ. ಬಿ.ಎಸ್. ಸುರೇಶ್ ಮಾತನಾಡಿದರು.
ನಮ್ಮ ರಾಷ್ಟ್ರವು ಸ್ವತಂತ್ರ ಗಣರಾಜ್ಯವಾದ ಐತಿಹಾಸಿಕ, ಚಳುವಳಿಗಳ ನೆನಪಿಗಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಭಾರತಕ್ಕೆ 1947 ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ದೇಶವು ತನ್ನದೇ ಆದ ಸಂವಿಧಾನವನ್ನು ಹೊಂದಿರಲಿಲ್ಲ. ಹಲವು ಚರ್ಚೆಯ ನಂತರ, ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ತಿದ್ದುಪಡಿ ಕರಡು ಸಮಿತಿಯು ಭಾರತೀಯ ಸಂವಿಧಾನದ ಕರಡನ್ನು ಸಲ್ಲಿಸಿತು. ಇದನ್ನು 26 ನವೆಂಬರ್ 1949ರಂದು ಅಂಗೀಕರಿಸಲಾಯಿತು ಮತ್ತು 26 ಜನವರಿ 1950 ರಂದು ಅಧಿಕೃತವಾಗಿ ಜಾರಿಗೆ ತರಲಾಯಿತು ಎಂದು ಹೇಳಿದರು.
ಜನವರಿ 26 ಅನ್ನು ಗಣರಾಜ್ಯೋತ್ಸವದ ದಿನಾಂಕವನ್ನಾಗಿ ಆಯ್ಕೆ ಮಾಡಲಾಯಿತು ಏಕೆಂದರೆ, 1930ರಲ್ಲಿ ಪೂರ್ಣ ಸ್ವರಾಜ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಭಾರತೀಯ ಸ್ವಾತಂತ್ರ್ಯದ ಘೋಷಣೆ ಮಾಡಲಾಗಿತ್ತು. ಭಾರತದ ಸಂವಿಧಾನವು ಜಾತಿ, ಮತ, ಧರ್ಮ, ಲಿಂಗ ಮತ್ತು ಭಾಷೆಯ ಭೇದವಿಲ್ಲದೆ ಎಲ್ಲಾ ನಾಗರಿಕರಿಗೆ ಸಮಾನತೆಯ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಿದೆ. ನಾವು ದೇಶದಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆ ಮತ್ತು ಯಶಸ್ಸನ್ನು ಕಂಡಿದ್ದರೂ ನಮ್ಮ ನಾಗರಿಕರ ಎಲ್ಲಾ ಯೋಗಕ್ಷೇಮದ ನಡುವೆ ಸ್ವಾತಂತ್ರ್ಯದ ಯೋಗಕ್ಷೇಮದ ಬಗ್ಗೆ ನಮ್ಮ ಬದ್ಧತೆಯನ್ನು ಘೋಷಿಸಲು ಇದು ಒಂದು ಸಮೀಕರಣವಾಗಿದೆ ಎಂದು ಹೇಳಿದರು.
ಬಡತನ, ಉದ್ಯೋಗ, ಮಾಲಿನ್ಯದಂತಹ ಅನೇಕ ಕಷ್ಟಗಳನ್ನು ನಾವು ಇನ್ನೂ ಹೊಂದಿದ್ದೇವೆ ಮತ್ತು ಕಳೆದ ಎರಡು-ಮೂರು ವರ್ಷಗಳಿಂದ ನಾವು ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದೇವೆ. ಈ ಸವಾಲುಗಳನ್ನು ಎದುರಿಸುವುದು ನಮ್ಮ ಕರ್ತವ್ಯ ಮತ್ತು ಇವುಗಳಿಂದ ಬಲವಾಗಿ ಹೊರಬರುವುದು ನಮ್ಮ ಜವಾಬ್ಧಾರಿಯಾಗಿದೆ. ನಾವು ಉತ್ತಮ ಹಂತಕ್ಕೆ ಬೆಳೆಯುತ್ತೇವೆ ಎಂದು ಪರಸ್ಪರ ಭರವಸೆ ನೀಡುವುದರಿಂದಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನಮ್ಮ ರಾಷ್ಟ್ರವನ್ನು ಉತ್ತಮ ಸ್ಥಾನಕ್ಕೆ ತರಲು ನಾವು ನೀಡುವ ಕೊಡುಗೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಸಿ.ಎಮ್. ಸಿದ್ಧಲಿಂಗಪ್ಪ, ಸಂಸ್ಥೆಯ ಮುಖ್ಯಸ್ಥ ಎಸ್. ವಿಶ್ವನಾಥ್, ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಬಿ.ಪಿ. ಸುರೇಶ್, ಕೀಲು ಮೂಳೆ ವಿಭಾಗ ಮುಖ್ಯಸ್ಥ ಹರೀಶ್ ಪೈ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥರಾದ ಡಾ. ಅಶ್ವಿನಿ ಪೈ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post