ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಅಭಿನಯಿಸಿದ ರಾಬರ್ಟ್ ಸಿನಿಮಾ ನನ್ನ ಜೀವನದ ಮಹತ್ವದ ತಿರುವು ಎಂದು ನಟಿ ಆಶಾ ಭಟ್ ಸಂತಸ ವ್ಯಕ್ತಪಡಿಸಿದರು.
ಚಿತ್ರದ ಪ್ರಮೋಷನ್’ಗಾಗಿ ಶಿವಮೊಗ್ಗ ಹಾಗೂ ಭದ್ರಾವತಿಗೆ ಆಗಮಿಸಿರುವ ಅವರು ಭಾರತ್ ಸಿನಿಮಾಸ್’ಗೆ ಭೇಟಿ ನೀಡಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಮೊದಲು ಬಾಲಿವುಡ್’ನ ಜಂಗ್ಲಿ ಚಿತ್ರದಲ್ಲಿ ನಾನು ನಟಿಸಿದ್ದರೂ ಕನ್ನಡದ ರಾಬರ್ಟ್ ಸಿನಿಮಾ ಮಾತ್ರ ನನ್ನ ಜೀವನದ ಮಹತ್ವದ ತಿರುವು ಆಗಿದೆ. ದರ್ಶನ್ ಜೊತೆಯಲ್ಲಿ ಅಭಿನಯಿಸಿರುವುದು ನನ್ನ ಅದೃಷ್ಠ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post