ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಒಂದು ವರ್ಷದಲ್ಲಿ 365 ದಿನಗಳೂ ಸಮಾಜದ ಮಧ್ಯೆಯೇ ಇದ್ದು, 365 ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್, ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲ, ಇಡೀ ರೋಟರಿ ಜಿಲ್ಲಾ 3182ಕ್ಕೂ ಹಾಗೂ ದಕ್ಷಿಣ ಭಾರತ ರೋಟರಿ ಝೋನ್–7ಕ್ಕೂ ಹೆಮ್ಮೆಯ ಕ್ಲಬ್ ಆಗಿದೆ” ಎಂದು ರೋಟರಿ ಇಂಟರ್‌ನ್ಯಾಷನಲ್ ಝೋನ್–7ರ ಪಬ್ಲಿಕ್ ಇಮೇಜ್ ಕೋ-ಆರ್ಡಿನೇಟರ್ PDG ಮೇಜರ್ ಡೋನರ್ ರೊಟೇರಿಯನ್ ಪ್ರಕಾಶ್ ಕಾರಂತ್ ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ವತಿಯಿಂದ ಹಮ್ಮಿಕೊಂಡಿದ್ದ “ಧನ್ಯೋಸ್ಮಿ” ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ, ರೈತರ ಅಭಿವೃದ್ಧಿ, ಯುವಜನ ತರಬೇತಿ, ಸಾರ್ವಜನಿಕ ಚಿತ್ರಣ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಕ್ಲಬ್ ಕೈಗೊಂಡಿರುವ ಸೇವಾ ಚಟುವಟಿಕೆಗಳು ರೋಟರಿಯ ನಿಜವಾದ ಧ್ಯೇಯವನ್ನು ಸಾಕಾರಗೊಳಿಸಿವೆ ಎಂದರು.
365 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸಿ, 365 ಯೋಜನೆಗಳನ್ನು ಪೂರ್ಣಗೊಳಿಸಿರುವುದು ಅತ್ಯಂತ ಅಪರೂಪದ ಸಾಧನೆಯಾಗಿದ್ದು, ಈ ಸೇವಾ ಪಯಣ ಇಡೀ ರೋಟರಿ ವಲಯಕ್ಕೆ ಪ್ರೇರಣೆಯಾಗಲಿದೆ. ಸಮಾಜಕ್ಕೆ ಸಲ್ಲಿಸಿದ ಈ ಸೇವೆಯೇ ನಿಜವಾದ “ಧನ್ಯೋಸ್ಮಿ” ಎಂದು ಅವರು ಹೇಳಿದರು.
Also read: ಗ್ರಾಹಕರ ಶೋಷಣೆ ತಡೆಯಲು ಕಾನೂನು ತಿಳುವಳಿಕೆ ಅಗತ್ಯ: ಸೋಮಶೇಖರ್
ಈ ಸೇವಾ ಪಯಣದ ಹಿಂದಿನ ಪ್ರಮುಖ ಶಕ್ತಿಯಾಗಿರುವ ಯುವ ನಾಯಕ ಹಾಗೂ ಕ್ಲಬ್ ಅಧ್ಯಕ್ಷ ರೊಟೇರಿಯನ್ ಹರ್ಷ ಭಾಸ್ಕರ್ ಕಾಮತ್ ಅವರ ಯೋಜನಾ ಸಾಮರ್ಥ್ಯ, ನಾಯಕತ್ವ ಮತ್ತು ಸೇವಾ ಬದ್ಧತೆಯನ್ನು ಅವರು ವಿಶೇಷವಾಗಿ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಅವರು “ಗೋವರ್ಷ” ಯೋಜನೆಯ ಸ್ಮರಣಿಕೆಯನ್ನು ಅನಾವರಣಗೊಳಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಮಹಿಳೆಯರಿಗೆ ಗೋವುಗಳನ್ನು ವಿತರಿಸುವ ಮೂಲಕ ಆತ್ಮನಿರ್ಭರ ಬದುಕು ರೂಪಿಸುವ ವಿಶಿಷ್ಟ ಯೋಜನೆಯನ್ನು ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಈ ಯೋಜನೆ ಜಿಲ್ಲೆಯ ಇತರೆ ಸಂಘ-ಸಂಸ್ಥೆಗಳಿಗೂ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಅನಂತ್ ರಾಮಯ್ಯ ಮಾತನಾಡಿ, ಈ ವರ್ಷ ರೋಟರಿ ಕ್ಲಬ್ ಮಿಡ್‌ಟೌನ್ ಯುವಕರು ಹಾಗೂ ಯುವತಿಯರಿಗೆ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಅತ್ಯಂತ ವ್ಯಾಪಕವಾಗಿ ಆಯೋಜಿಸಿದ್ದು, ನೂರಾರು ಯುವಜನರಿಗೆ ಉದ್ಯೋಗಮುಖಿ ಅವಕಾಶಗಳನ್ನು ಕಲ್ಪಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಧ್ಯಕ್ಷ ಹರ್ಷ ಭಾಸ್ಕರ್ ಕಾಮತ್ ಅವರ ದೂರದೃಷ್ಟಿಯ ಯೋಜನೆಗಳು ಕ್ಲಬ್‌ನ ಯಶಸ್ಸಿಗೆ ಪ್ರಮುಖ ಕಾರಣವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ರೊಟೇರಿಯನ್ ಹರ್ಷ ಭಾಸ್ಕರ್ ಕಾಮತ್ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ರೊಟೇರಿಯನ್ ಆರ್.ಎನ್. ಮಂಜುನಾಥ್, ಅನ್ನ್ಸ್ ಅಧ್ಯಕ್ಷೆ ಪವಿತ್ರಾ ಕಾಮತ್, ಪ್ರೀತಿ ದೀಪಕ್ ಸಾರಥಿ, ಉದಯ್ ಪೇಟೆ ಸೇರಿದಂತೆ ಪಾಸ್ಟ್ ಪ್ರೆಸಿಡೆಂಟ್ಸ್, ಬೋರ್ಡ್ ಸದಸ್ಯರು, ಅನ್ನ್ಸ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷದ ಸೇವಾ ಪಯಣದ ಅವಲೋಕನ, ವಿವಿಧ ಯೋಜನೆಗಳ ಸ್ಮರಣಿಕೆ ಬಿಡುಗಡೆ ಹಾಗೂ ಸೇವೆಯಲ್ಲಿ ತೊಡಗಿದ್ದ ಸದಸ್ಯರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








