ಹೊಸನಗರ ತಾಲ್ಲೂಕಿನ ರಾಮಚಂದ್ರಪುರದಲ್ಲಿ ಮಠದ Ramachandrapura Mutt ವತಿಯಿಂದ ನಿರ್ಮಿಸಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಶರಾವತಿ ನದಿಯನ್ನೇ ನುಂಗಿದೆ ಎಂದು ಕೆ.ಆರ್.ಎಸ್. (ಕರ್ನಾಟಕ ರಾಷ್ಟ್ರ ಸಮಿತಿ) ಆರೋಪಿಸಿದೆ.
ಇಂದು ಮೀಡಿಯಾ ಹೌಸ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯಕರ್ತ ಮಂಜುನಾಥ ಹಿರೇಚೌಟಿ ರಾಮಚಂದ್ರ ಗ್ರಾಮದಲ್ಲಿ ಚಂದ್ರಮೌಳೇಶ್ವರ ದೇವಸ್ಥಾನ ಪಕ್ಕ ಹಾಗೂ ಗೋಶಾಲೆ ಪಕ್ಕದಲ್ಲಿ ಶರಾವತಿ ನದಿಯಿಂದ ಕುಸಿಯುತ್ತಿರುವ ಜಾಗಕ್ಕೆ ಸುಮಾರು 4.9 ಕೋಟಿ ವೆಚ್ಚದಲ್ಲಿ ತಡೆಗೋಡೆ ಕಾಮಗಾರಿ ನಡೆದಿದೆ. ಆದರೆ ಈ ತಡೆಗೋಡೆ ಶರಾವತಿ ನದಿಯ ಅರ್ಧಭಾಗವನ್ನೇ ಆವರಿಸಿಕೊಂಡಿದೆ. ಸಂಪೂರ್ಣವಾಗಿ ನದಿ ದಡವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿದರು.
ತಡೆಗೋಡೆ ನಿರ್ಮಾಣದ ಜೊತೆಗೆ ದೇವಸ್ಥಾನದ ಸಮೀಪವೇ ಇರುವ ಕೆರೆಗೆ ಪುಷ್ಕರಣಿ ನಿರ್ಮಾಣ ಮಾಡಲು ಹಾಗೂ ದೇವಸ್ಥಾನ ಆವರಣದ ಮುಂದುವರೆಗೆ ಅಭಿವೃದ್ಧಿ ಕಾಮಗಾರಿಗಾಗಿ 3.5 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಒಟ್ಟು 8.40ಕೋಟಿ ಹಣವನ್ನು ಇದಕ್ಕಾಗಿ ಬಳಸಲಾಗಿದೆ. ಈ ಎಲ್ಲಾ ಹಣವು ಜನರ ತೆರಿಗೆ ಹಣವೇ ಆಗಿದೆ. ಇದು ಸಂಪೂರ್ಣ ಪೋಲ್‍ಯಾಗಿದೆ ಅಲ್ಲದೇ ಎಲ್ಲಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರರವರೇ MPRaghavendra ಈ ಎರಡು ಕಾಮಗಾರಿಗಳನ್ನು ನಿರ್ವಹಿಸುವಂತೆ ನೀರಾವತಿ ನಿಗಮಕ್ಕೆ ಪತ್ರ ಬರೆದಿದ್ದಾರೆ. ಮತ್ತು ನಿರ್ಮಿತಿ ಕೇಂದ್ರದಿಂದಲೇ ಅನುಷ್ಠಾನ ಮಾಡುವಂತೆ ಕೋರಿದ್ದಾರೆ. ಮಠದ ಉಸ್ತುವಾರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಳಿಗೆ ಅನುಕೂಲ ಮಾಡಿಕೊಡಲೆಂದೇ ಸಂಸದರು ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದರು.
ಈ ಎರಡು ಕಾಮಗಾರಿಗಳು ನದಿಯ ಪಾತ್ರವನ್ನೇ ಬದಲಾಯಿಸಿದೆ. ನದಿಯನ್ನೇ ನುಂಗಿಯಾಕಿದೆ ಈ ಎರಡು ಕಾಮಗಾರಿಗಳನ್ನು ಮಾಡುವಾಗ ಅರಣ್ಯ ಇಲಾಖೆಯ ಅಥವಾ ಗ್ರಾಮಪಂಚಾಯಿತಿಯ, ಪರಿಸರ ಇಲಾಖೆಯ ಅನುಮತಿಯನ್ನು ಪಡೆದಿಲ್ಲ. ಯಾವ ಅನುಮತಿಯನ್ನು ಪಡೆಯದೇ ಪೂರ ಪರಿಸರ ಸೂಕ್ಷ್ಮವಲಯದ ಈ ಪ್ರದೇಶದಲ್ಲಿ ಅಕ್ರಮ ಕಾಮಗಾರಿ ಮಾಡಿ ಇಡೀ ಪಶ್ಚಿಮ ಘಟ್ಟದ ಜೀವ ಸಂಕುಲಕ್ಕೆ ಮತ್ತು ಸ್ಥಳೀಯ ನಿವಾಸಿಗಳಿಗೆ ಅಪಾಯ ತಂದಿಟ್ಟಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ದಡಕ್ಕೆ ಸಂಪೂರ್ಣ ಮಣ್ಣು ತುಂಬಿ ಸಮದಟ್ಟು ಮಾಡಿ ನದಿಗೆ ಹರಿದು ಬರುತ್ತಿದ್ದ ಜರಿಯನ್ನೇ ಮುಚ್ಚಿ ನಾಶ ಮಾಡಿದ್ದಾರೆ ಎಂದು ದೂರಿದರು.
ಈಗಾಗಲೇ ಈ ಎರಡು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲಾಗಿದೆ. ಯಾವ ಅನುಮತಿಯೂ ಇಲ್ಲದೇ ಕಾಮಗಾರಿ ಅನುಷ್ಠಾನಕ್ಕೆ ಕಾರಣವಾದ ಐದು ಜನ ಅಧಿಕಾರಿಗಳ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆಗಾಗಿ ಸರ್ಕಾರ ಕೂಡಲೇ ಈ ಘಟನೆಯನ್ನು ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಎಸ್. ನ ಜಿಲ್ಲಾಧ್ಯಕ್ಷ ಪ್ರಭು ಎಸ್ ಕೊಮ್ಮನ್ನಾಳ್ ಆಗ್ರಹಿಸಿದರು.
Discussion about this post