ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಪ್ರತಿಷ್ಠಿತ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ (PESITM), ಇತ್ತೀಚೆಗೆ ನಡೆದ ಕ್ಯಾಂಪಸ್ ನೇಮಕಾತಿ ಹಾಗೂ ಫಿನಾಕಲ್ ಸರ್ಟಿಫಿಕೇಶನ್ನ ಭಾಗವಾಗಿ, ಇನ್ಫೋಸಿಸ್ನ Infosys ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎಡ್ಜ್ವರ್ವ್ ಸಿಸ್ಟಮ್ನೊಂದಿಗೆ ಒಡಂಬಡಿಕೆ (MoU)ಗೆ ಸಹಿ ಹಾಕಿದೆ.
ಪಿಇಎಸ್ ಟ್ರಸ್ಟ್ ನ ಸಿಇಓ ಉಮಾದೇವಿ ಮತ್ತು ಮುಖ್ಯ ಸಂಯೋಜಕ ಆಡಳಿತಾಧಿಕಾರಿ ಡಾ. ನಾಗರಾಜ ಅವರ ಉಪಸ್ಥಿತಿಯಲ್ಲಿ, ಎಡ್ಜ್ವರ್ವ್ ಸಂಸ್ಥೆಯ ಸಹ ಉಪಾಧ್ಯಕ್ಷ ರಾಜೇಶ್ವರ ರಾವ್ ಮತ್ತು ಪಿಇಎಸ್ಐಟಿಎಂನ ಪ್ರಾಂಶುಪಾಲರಾದ ಡಾ. ಬಿ. ಎನ್. ಯುವರಾಜು ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಎಡ್ಜ್ವರ್ವ್ ಸಂಸ್ಥೆಯ ಕಲಿಕಾ ಮುಖ್ಯಸ್ಥ ವಿ .ಆರ್. ಕಾರ್ತಿಕ್ ಮತ್ತು ಪಿಇಎಸ್ ಟ್ರಸ್ಟ್ನ ಕೆರಿಯರ್ ಡೆವಲಪ್ಮೆಂಟ್ ಸೆಂಟರ್ ನ ಮುಖ್ಯಸ್ಥ ಡಾ. ಟಿ. ಎಂ. ಪ್ರಸನ್ನ ಕುಮಾರ್ ಅವರು ಈ ಕಾರ್ಯಕ್ರಮದ ಭಾಗವಾಗಿದ್ದರು.
ಈ ಒಪ್ಪಂದದ ಅಡಿಯಲ್ಲಿ ಎಡ್ಜ್ವರ್ವ್ ಸಂಸ್ಥೆಯು, PESITMನ, 5ನೇ ಸೆಮಿಸ್ಟರ್ ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತದೆ. 6 ಮತ್ತು 7ನೇ ಸೆಮಿಸ್ಟರ್ನಲ್ಲಿ ಫುಲ್ ಸ್ಟಾಕ್ ಡೆವಲಪ್ಮೆಂಟ್ ಬಗ್ಗೆ ಅವರಿಗೆ ತರಬೇತಿ ನೀಡುತ್ತದೆ. 8ನೇ ಸೆಮಿಸ್ಟರ್ನಲ್ಲಿ ಈ ವಿದ್ಯಾರ್ಥಿಗಳು, ಫಿನಾಕಲ್ ಪ್ರಾಡಕ್ಟ್ನಲ್ಲಿ 6 ತಿಂಗಳ ಮಟ್ಟಿಗೆ ಇಂಟರ್ನ್ ಆಗಿ ಎಡ್ಜ್ವರ್ವ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ, ನಂತರ ಅದೇ ಕಂಪನಿಯಲ್ಲಿ ಕೆಲಸವನ್ನು ಮುಂದುವರೆಸುತ್ತಾರೆ.
ಒಡಂಬಡಿಕೆ (MoU)ಯ ನಂತರ, PESITM ಕ್ಯಾಂಪಸ್ನಲ್ಲಿ ಕಂಪನಿಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು, ಈ ಸಂದರ್ಭದಲ್ಲಿ ರಾಜೇಶ್ವರ್ ರಾವ್ ಮತ್ತು ವಿ. ಆರ್. ಕಾರ್ತಿಕ್ ಅವರು, ಈ ಅದ್ಭುತ ಅವಕಾಶದ ಕುರಿತು PESITM ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಈ ಹೈಯರ್-ಟ್ರೇನ್-ಡಿಪ್ಲೋಯ್ ಮಾದರಿಯ ಮೂಲಕ, ಪಿಇಎಸ್ ಮತ್ತೊಂದು ಮೈಲಿಗಲ್ಲನ್ನು ತಲುಪಲಿದೆ ಎಂದು ಪಿಇಎಸ್ ಟ್ರಸ್ಟ್ ನ ಸಿಇಒ ಉಮಾದೇವಿ ಅವರು ಪ್ರಸ್ತಾಪಿಸಿದರು ಮತ್ತು PESITM ಈ ಪ್ರಯತ್ನಕ್ಕೆ ಸಂಪೂರ್ಣವಾಗಿ ಬದ್ಧವಾಗಿರುತ್ತದೆ ಎಂದು ಎಡ್ಜ್ವರ್ವ್ ಗೆ ಭರವಸೆ ನೀಡಿದರು.
Also read: ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ಶರಾವತಿ ನದಿ ದಡ ಒತ್ತುವರಿ: ಕೆಆರ್ಎಸ್ ಆರೋಪ
ಉದ್ಯೋಗ ಮಾರುಕಟ್ಟೆಯ ಈ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ, PESITM ನ ವಿದ್ಯಾರ್ಥಿಗಳು ತಮ್ಮ 5ನೇ ಸೆಮಿಸ್ಟರ್ನಲ್ಲಿಯೇ, ಅತ್ಯಂತ ಪ್ರತಿಷ್ಠಿತ ಐಟಿ ಕಂಪನಿಯಾದ ಇನ್ಫೋಸಿಸ್ನಿಂದ ಆಫರ್ ಲೆಟರ್ಗಳನ್ನು ಪಡೆಯುವ ಅದೃಷ್ಟವನ್ನು ಹೊಂದಿದ್ದಾರೆ ಎಂದು ಮುಖ್ಯ ಸಂಯೋಜಕ ಆಡಳಿತಾಧಿಕಾರಿ, ಡಾ.ನಾಗರಾಜ ಆರ್, ಅವರು ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.
PESITM ನ ಪ್ರಾಂಶುಪಾಲರಾದ, ಡಾ. ಬಿ ಎನ್. ಯುವರಾಜು ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳು, PESITM ಬಗ್ಗೆ ಹೆಮ್ಮೆಪಡಬೇಕು ಹಾಗೂ ಸಂಸ್ಥೆಯ ನಿಜವಾದ ರಾಯಭಾರಿಗಳಾಗಬೇಕು ಎಂದು ತಿಳಿಸಿದರು.
ಪಿಇಎಸ್ ಟ್ರಸ್ಟ್, ಕೆರಿಯರ್ ಡೆವಲಪ್ಮೆಂಟ್ ಸೆಂಟರ್(CDC) ನ ಮುಖ್ಯಸ್ಥ ಡಾ. ಪ್ರಸನ್ನ ಕುಮಾರ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲು PES-CDC ಸಂಪೂರ್ಣವಾಗಿ ಸಜ್ಜಾಗಿದೆ ಮತ್ತು ಈ ಸಹಯೋಗದ ಮೂಲಕ ಅನೇಕ ಪಿಇಎಸ್ಐಟಿಎಂ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ದೊರಕುತ್ತದೆ ಎಂದು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post