ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಮಿತ್ರೆ – ಕಾಸ್ಮೋ ಕ್ಲಬ್ ಮಹಿಳಾ ಘಟಕದ ವತಿಯಿಂದ ಕಾಸ್ಮೋ ಕ್ಲಬ್ ನ ಶುಭಾಂಗಣದಲ್ಲಿ ಸಾಂಸ್ಕೃತಿಕ ಸಮ್ಮಿಲನ ಶಿವಮೊಗ್ಗದ ಖ್ಯಾತ ಮಹಿಳಾ ಕಲಾವಿದರ ಭಾಗವಹಿಸುವಿಕೆಯಿಂದ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಾಂಸ್ಕೃತಿಕ ಕ್ಷೇತ್ರದ ಈ ಎಲ್ಲಾ ಸಾಧಕಿಯರು ತಮ್ಮ ವೀಣಾವಾದನ, ಹಾಡು ಮತ್ತು ನೃತ್ಯದ ಮೂಲಕ ವೈವಿದ್ಯಮಯ ಕಾರ್ಯಕ್ರಮ ನೀಡಿ ಕಾಸ್ಮೋ ಕ್ಲಬ್’ನ ಮತ್ತು ಮಿತ್ರೆ ಘಟಕದ ಸದಸ್ಯರನ್ನು ಭಾವ, ವೀಣಾ, ನೃತ್ಯ ಲೋಕದಲ್ಲಿ ತೇಲಿಸಿ, ತನ್ಮಯತೆ ಮೂಡಿಸಿದರು. ವೀಣೆ, ನೃತ್ಯ, ಸಂಗೀತ, ಯಕ್ಷ ಕ್ಷೇತ್ರದಲ್ಲಿ ತೊಡಿಸಿಕೊಂಡು ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಯಿತು.
ಶಿವಮೊಗ್ಗದ ಖ್ಯಾತ ವೀಣಾ ವಾದಕರಾದ ರಾಮನ್ ಸಿಸ್ಟರ್ಸ್ ಎಂದೇ ಖ್ಯಾತರಾದ ವಿದುಷಿ ಮಂಗಳಾರಮನ್ ಮತ್ತು ವಿದ್ಯಾ ಅಶೋಕ್, ಮಗ ಆದಿತ್ಯ, ಮತ್ತೋರ್ವ ಖ್ಯಾತ ವೀಣಾ ವಾದಕರಾದ ವಿದುಷಿ ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶುಭಾ, ಸಹಚೇತನ ನಾಟ್ಯಾಲಯದ ಖ್ಯಾತ ನೃತ್ಯಗುರುಳಾದ ಸಹನಾ ಚೇತನ್, ಪುಷ್ಪ ಪರ್ಫಾರ್ಮಿಗ್ ನಾಟ್ಯಾಲಯದ ಗುರುಗಳಾದ ಪುಷ್ಪ ಕೃಷ್ಣಮೂರ್ತಿ, ಮಯೂರಿ ನೃತ್ಯ ಕೇಂದ್ರದ ಗುರು ಶ್ವೇತಾ ಅನಿಲ್, ಖ್ಯಾತ ಕರೋಕೆ ಗಾಯಕಿ ವಾಣಿ ಶಂಕರ್, ಖ್ಯಾತ ಯಕ್ಷಗಾನ ಕಲಾವಿದರಾದ ಕಿರಣ್ ಪೈ ಇವರುಗಳ ಸಾಧನೆಯನ್ನು ಪರಿಚಯಿಸಿ ಗೌರವಿಸಲಾಯಿತು.
Also read: ಫೆ.27 | ಮಲವಗೊಪ್ಪ ಗ್ರಾಮ ಹಾಗೂ ತಾಲ್ಲೂಕು ಬಂದ್ | ಕಾರಣವೇನು?
ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಘಟಕದ ಪ್ರಪ್ರಥಮ ವೈಶಿಷ್ಟ ಪೂರ್ಣವಾದ ಈ ಕಾರ್ಯಕ್ರಮವು ಕ್ಲಬ್ ಆಧ್ಯಕ್ಷರಾದ ಎಸ್. ದತ್ತಾತ್ರಿ ಮತ್ತು ಕಾರ್ಯಕಾರಿ ಸಮಿತಿಯವರ ಸಹಕಾರದಲ್ಲಿ ಆಯೋಜಿಸಲಾಗಿತ್ತು.
ಉಪಾಧ್ಯಕ್ಷೆ ಸುನಿತಾ ಅರುಣ್, ಕಾರ್ಯದರ್ಶಿ ದೀಪಾ ಶ್ರೀನಿವಾಸ್, ಖಜಾಂಚಿ ವೀಣಾ ಹರ್ಷ, ಸದಸ್ಯರಾದ ವಾಣಿ ಶಂಕರ್, ಮನು ಪ್ರೀತಮ್, ಲತಾ ಶಂಕರ್ ಇದ್ದರು.
ಕಾಸ್ಮೋ ಕ್ಲಬ್ ಉಪಾಧ್ಯಕ್ಷರಾದ ರಮೇಶ್ ಬಾಬು, ಖಜಾಂಚಿ ಎನ್. ಮಂಜುನಾಥ್, ಕಾರ್ಯದರ್ಶಿ ಡಿ.ಟಿ. ಶ್ರೀನಿವಾಸ್ ಹಾಗೂ ನಿರ್ದೇಶಕರುಗಳಾದ ಕೆ.ಟಿ. ಶ್ರೀನಿವಾಸ್, ಶಂಕರ್, ಅರುಣ್ ಕುಮಾರ್, ಡಾ. ಹರ್ಷ ಹಾಗೂ ಕಾಸ್ಮೋ ಕ್ಲಬ್’ನ ಸದಸ್ಯರುಗಳು ಮತ್ತು ಮಿತ್ರೆ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post