ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬ್ರಾಂಡ್ ಕಂಪನಿಯ ವಸ್ತುಗಳನ್ನು ನಕಲಿ ರೂಪದಲ್ಲಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಶಿವಮೊಗ್ಗ ಡಿವೈಎಸ್ ಪಿ ನೇತೃತ್ವದ ಪೊಲೀಸ್ ತಂಡ ಪತ್ತೆ ಹಚ್ಚಿದೆ.
ಡಿವೈಎಸ್ ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ಕೋಟೆ ಸಿಪಿಐ ಚಂದ್ರಶೇಖರ್ ಅವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ನಕಲಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ನಕಲಿ ಪ್ಯಾರಚೂಟ್ ಎಣ್ಣೆ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಮೇರೆಗೆ ಕಂಪನಿಯ ಸಹಭಾಗಿತ್ವದಲ್ಲಿ ನಗರದ ಗಾಂಧಿಬಜಾರಿನ ಕುಚಲಕ್ಕಿ ಕೇರಿಯಲ್ಲಿರುವ ಅಂಬಿಕಾ ನಾವೆಲ್ಟೀಸ್ ಮೇಲೆ ಇಂದು ಬೆಳಿಗ್ಗೆ ಕೋಟೆ ಪೊಲೀಸರ ತಂಡ ದಾಳಿ ನಡೆಸಿತು. ಈ ಸಂದರ್ಭದಲ್ಲಿ 22 ಲೀಟರ್ ಎಣ್ಣೆ ಬಾಟಲಿಗಳನ್ನು ವಶಕ್ಕೆ ಪಡೆದು, ಅಂಗಡಿ ಮಾಲೀಕ ಮಹೆಂದರ್ ಪುರಿ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post