ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿನ್ನದ ಮೇಲೆ ಹೂಡಿಕೆ ಮಾಡಬೇಕೂ ಅಂತಿದ್ದೀರಾ? ಇದನ್ನು ದೀರ್ಘಕಾಲೀನ ಉಳಿತಾಯವಾಗಿಸುವುದು ಹೇಗೆ ಅಂತ ಗೊತ್ತಾ ನಿಮಗೆ? ನಿಮ್ಮ ಪ್ರೀತಿಪಾತ್ರರಿಗೆ ಬಂಗಾರದಾಭರಣ ಉಡುಗೊರೆ ಕೊಡಬೇಕಾ? ಬೆಳ್ಳಿಯ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಯಾವ ರೀತಿ ಸಿದ್ಧತೆ ಮಾಡಬೇಕೂ ಅಂತಿದಿರಾ? ಅಮೂಲ್ಯರತ್ನಗಳು ಭವಿಷ್ಯವನ್ನು ಭದ್ರ ಪಡಿಸುವುದು ಹೇಗೆ ಗೊತ್ತಾ?
ಇಂತಹ ಪ್ರಶ್ನೆಗಳು ನಿಮ್ಮಲ್ಲಿ ಇರುತ್ತವೆ ಎಂಬುದನ್ನು ಅರಿತಿರುವ ರೇಡಿಯೋ ಶಿವಮೊಗ್ಗ ರೂಪಿಸಿದೆ ನೂತನ ಸರಣಿ ಕಾರ್ಯಕ್ರಮ ಚಿನ್ನ ಬೆಳ್ಳಿ ಜ್ಞಾನ, ಇದು ಮೈತ್ರಿ ಮೈ ಜ್ಯುವೆಲ್ #MYTHRI My Jewels ಅಭಿಯಾನ. ಜೂನ್ 12ರಿಂದ ಪ್ರತಿ ಬುಧವಾರ ಬೆಳಗ್ಗೆ 9:30ಕ್ಕೆ ರೇಡಿಯೋದಲ್ಲಿ ಪ್ರಸಾರವಾಗಲಿದೆ. ಆರ್ ಜೆ ಅರ್ಪಿತಾ ಇದನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ ಚಿನ್ನ, ಬೆಳ್ಳಿ, ವಜ್ರ ಹಾಗೂ ಅಮೂಲ್ಯ ರತ್ನಗಳ ಗಣಿಗಾರಿಕೆ ಮೊದಲಾಗಿ ಈ ಬಗ್ಗೆ ಆಮೂಲಾಗ್ರ ಮಾಹಿತಿ ದೊರೆಯಲಿದೆ.
Also read: ರಾಜ್ಯದಲ್ಲಿ ತುಘಲಕ್ ಯುಗ ಮತ್ತೆ ಆರಂಭವಾದಂತಿದೆ | ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹಾ ಹೊಂದಿದ್ದು, ಅದನ್ನು ಗೂಗಲ್ ಪ್ಲೇಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ( ಮೊ: 72591 76279) ಸಂಪರ್ಕಿಸಬಹುದು ಎಂದು ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post