ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ RSS ಕಾರ್ಯಾಲಯ ಮಧುಕೃಪಾದಲ್ಲಿ Madhukrupa ಮೊದಲ ಬಾರಿಗೆ ಆಯೋಜಿಸಲಾಗಿದ್ದ ಗಣೇಶೋತ್ಸವ ಸಂಪನ್ನಗೊಂಡಿತು.
ಈ ಗಣೇಶನ ವಿಶೇಷವೆಂದರೆ ಗಣೇಶ ಮೂರ್ತಿಯನ್ನು Lord Ganesha Idol ಪರಿಸರ ಸಂರಕ್ಷಣೆಯನ್ನು ಸಂಪೂರ್ಣವಾಗಿ ಗಮನದಲ್ಲಿ ಇಟ್ಟುಕೊಂಡು ಕೇವಲ ಮಣ್ಣಿನಿಂದ ತಯಾರಿಸಲಾಗಿದೆ. ಯಾವುದೇ ಕೃತಕ ಬಣ್ಣಗಳ ಬಳಕೆಯನ್ನು ಮಾಡದೆ ಇಲ್ಲಿನ ಗಣೇಶನನ್ನು ಸಮಾಜವು ಅನುಕರಣೀಯವಾಗಿ ತೆಗೆದುಕೊಳ್ಳಲು ಪ್ರೇರೇಪಿಸಲಾಗಿತ್ತು.
ಕಾರ್ಯಾಲಯದ ಸುತ್ತ ಮುತ್ತಲಿನ ಬಂಧುಗಳಿಗೆ, ಮಧುಕೃಪಾ ಸುತ್ತಮುತ್ತಲಿನ ಪಂಚವಟಿ ಕಾಲೋನಿಯ ಎಲ್ಲಾ ಮಾತಾ ಭಗಿನಿಯರಿಂದ ರಂಗೋಲಿ ಸ್ಪರ್ಧೆ, ಬೆಳಿಗ್ಗೆ ಗಣಹೋಮ, ಸಂಜೆ ನೂರಾರು ಮಾತೆಯರಿಂದ ಭಜನೆ, ಅನೇಕ ಬಂಧುಗಳ ಮನೆಯಿಂದ ತಂದ ನೈವೇದ್ಯವನ್ನು ಗಣಪತಿಗೆ ಅರ್ಪಿಸಿ ಎಲ್ಲರಿಗೂ ಸಮರ್ಪಿಸಲಾಯಿತು.
ನಿನ್ನೆ ಸಂಜೆ ವೈಭವದ ರಾಜಬೀದಿ ಉತ್ಸವ ಪಂಚವಟಿ ಕಾಲೋನಿಯ ಮಧುಕೃಪಾದಿಂದ ಹೊರಟು ಗೌಡ ಸಾರಸ್ವತ ಕಲ್ಯಾಣ ಮಂದಿರ ರಸ್ತೆ, ಹಳೇ ತೀರ್ಥಹಳ್ಳಿ ರಸ್ತೆ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ಮಾರ್ಗವಾಗಿ ಸಾಗಿ ತುಂಗಾ ನದಿಯ ಭೀಮನ ಮಡುವಿನಲ್ಲಿ ವಿಸರ್ಜಿಸಲಾಯಿತು.
ಕೇರಳದ ಸುಪ್ರಸಿದ್ದ ಚೆಂಡೆ ವಾದ್ಯಗಳೊಂದಿಗೆ ಶ್ರೀ ಗಣೇಶನ ರಾಜಬೀದಿ ಉತ್ಸವ ಕಂಗೊಳಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಮುಖರು, ಹಿಂದೂ ಸಮಾಜವನ್ನು ಸಂಘಟಿಸಿ, ಸಮಾಜವನ್ನು ಸಾಮರಸ್ಯ ದೆಡೆಗೆ ಕೊಂಡೊಯ್ಯಲು ಗಣೇಶ ಉತ್ಸವ ಸಹಕಾರಿಯಾಗಿದೆ. ಶಿವಮೊಗ್ಗದಲ್ಲಿ ಹಿಂದೂ ಸಮಾಜದ ಸಂಘಟನೆಯ ಕೇಂದ್ರಬಿಂದು ಆಗಿರುವ ಮಧುಕೃಪಾ ಹಿಂದೂ ಸಮಾಜದ ಸಾಮರಸ್ಯ ಕೇಂದ್ರವಾಗಬೇಕು ಎಂಬ ಆಶಯದೊಂದಿಗೆ ಈ ವರ್ಷದ ಗಣೇಶೋತ್ಸವ ಪ್ರಮುಖ ಪಾತ್ರ ವಹಿಸಿದೆ. ಇನ್ನು ಮುಂದೆ ಇದನ್ನು ಶಿವಮೊಗ್ಗದ ಸಾಮರಸ್ಯ ಗಣಪತಿ ಎಂದು ತಿಳಿಸಿದರು.
ರಾಜಬೀದಿ ಉತ್ಸವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಕಾರ್ಯವಾಹರಾದ ಪಟ್ಟಾಭಿರಾಮ, ನಗರ ಸಂಘಚಾಲಕರಾದ ಲೋಕೇಶ್ವರ ಕಾಳೆ, ವಿಭಾಗ ಕಾರ್ಯವಾಹರಾದ ಗಿರೀಶ್, ಅನೇಕ ಸಂಘದ ಕಾರ್ಯಕರ್ತರು, ಪರಿವಾರದ ಕಾರ್ಯಕರ್ತರು, ಹಿಂದೂ ಭಾಂದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post