ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಅವ್ಯವಸ್ಥಿತ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಜನರು ಮಾತ್ರವಲ್ಲ, ಜಾನುವಾರುಗಳು ಕೂಡ ತೊಂದರೆಗೆ ಸಿಲುಕುವಂತಾಗಿದೆ.

ಗುರುವಾರ ರಾತ್ರಿ ಜೈಲ್ ರಸ್ತೆಯಲ್ಲಿ ಗುಂಡಿಯೊಂದಕ್ಕೆ ಬೈಕ್ ಸವಾರ ಬಿದ್ದ ಬೆನ್ನಲ್ಲೇ, ಶುಕ್ರವಾರ ಮಧ್ಯಾಹ್ನ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕದ ಗಾಂಧಿನಗರ ಮುಖ್ಯ ರಸ್ತೆಯಲ್ಲಿನ ಚರಂಡಿಯಲ್ಲಿ ಆಕಳ ಕರುವೊಂದು ಸಿಲುಕಿ ಬಿದ್ದು, ತೀವ್ರ ಸಂಕಷ್ಟ ಅನುಭವಿಸಿದ ಘಟನೆ ನಡೆಯಿತು.

ತಕ್ಷಣವೇ ಸಾರ್ವಜನಿಕರು ಚರಂಡಿಯಲ್ಲಿ ಸಿಲುಕಿದ್ದ ಆಕಳ ಕರುವನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ‘ರಸ್ತೆಯ ಎರಡು ಬದಿ ಬಾಕ್ಸ್ ಡ್ರೈನೇಜ್ ಕಾಮಗಾರಿ ನಡೆಸಲಾಗಿದೆ. ಆದರೆ ಹಲವೆಡೆ ಮೇಲೆ ಹಾಕಲಾಗಿರುವ ಸ್ಲ್ಯಾಬ್ ಗಳು ಕಿತ್ತು ಹೋಗಿವೆ. ಇದರಿಂದ ಜನ-ಜಾನುವಾರುಗಳು ಚರಂಡಿ ಬೀಳುವಂತಾಗಿದೆ. ತಕ್ಷಣವೇ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳುವಂತೆ’ ಸ್ಥಳೀಯರು ಆಗ್ರಹಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















