ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಹ್ಯಾದ್ರಿ ಕಾಲೇಜು ಮುಂಭಾಗ ಪರಿಶೀಲನೆಗೆ ಅಡ್ಡ ಹಾಕಿದ ಟ್ರಾಫಿಕ್ ಪೊಲೀಸ್’ಗೆ ಡಿಕ್ಕಿ ಹೊಡೆದು, ಬಾನೆಟ್ ಮೇಲೆ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಮಾಧ್ಯಮಗಳಿಗೆ ವಾಟ್ಸಪ್ ಸಂದೇಶದ ಮೂಲಕ ಮಾಹಿತಿ ರವಾನಿಸಿದ್ದಾರೆ.
Also read: ಶಿವಮೊಗ್ಗ-ಭದ್ರಾವತಿ | ಹೆದ್ದಾರಿಯಲ್ಲಿ ಭೀಕರ ಅಪಘಾತ | ಇಬ್ಬರು ಯುವಕರು ಸಾವು, ಓರ್ವ ಗಂಭೀರ
ಕಾರು ಚಲಾಯಿಸುತ್ತಿದ್ದ ಭದ್ರಾವತಿ ಮೂಲದ ಕೇಬಲ್ ಆಪರೇಟರ್’ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?
ನಿನ್ನೆ ದಿನ ಮಧ್ಯಾಹ್ನ ಸಹ್ಯಾದ್ರಿ ಕಾಲೇಜು ಬಳಿ ಭದ್ರಾವತಿ ಕಡೆಯಿಂದ ಬಂದಿದ್ದ ಕಿಯಾ ಸಾನೆಟ್ ಕಾರನ್ನು ಟ್ರಾಫಿಕ್ ಪೊಲೀಸ್ ಪ್ರಭುರಾಜ್ ಅಡ್ಡ ಹಾಕಿದ್ದರು. ಈ ವೇಳೆ ಕಾರು ನಿಲ್ಲಿಸದ ಚಾಲಕ ಪೇದೆಯನ್ನು ಕಾರು ಚಲಾಯಿಸುತ್ತಲೇ ತಳ್ಳುವ ಪ್ರಯತ್ನ ಮಾಡಿದ್ದ. ಈ ವೇಳೆ ಟ್ರಾಫಿಕ್ ಪೇದೆ ಕಾರಿನ ಬ್ಯಾನೆಟ್ ಮೇಲೆ ಬಿದ್ದಿದ್ದಾರೆ. ಆದಾಗ್ಯು ಚಾಲಕ ಕಾರು ನಿಲ್ಲಿಸಲಿಲ್ಲ. ಕಾರಿನ ವೇಗ ಹೆಚ್ಚಿಸಿ ಸುಮಾರು ನೂರು ಮೀಟರ್ ದೂರದವರೆಗೂ ಬ್ಯಾನೆಟ್ ಮೇಲೆ ಟ್ರಾಫಿಕ್ ಪೇದೆಯನ್ನು ಹೊತ್ತೊಯ್ದಿದ್ದ. ಅದೃಷ್ಟಕ್ಕೆ ಪ್ರಭುರಾಜ್ ಕಾರಿನಿಂದ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದರು. ಅಷ್ಟರಲ್ಲಿ ಅಲ್ಲಿ ಸೇರಿದ್ದ ವಾಹನ ಸವಾರರು ಕಾರನ್ನು ಅಡ್ಡಗಟ್ಟಿದ್ದರು. ಈ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post