ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೆ ಎಂಜಿನ್ ಹಾಗೂ ಬೋಗಿಗಳ ನಡುವಿನ ಸಂಪರ್ಕ ತಪ್ಪಿದ ಪರಿಣಾಮ, ಬೋಗಿಗಳನ್ನೇ ಬಿಟ್ಟು ಎಂಜಿನ್ ಮುಂದಕ್ಕೆ ಚಲಿಸಿದ ಘಟನೆ ಭದ್ರಾವತಿ ತಾಲೂಕು ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಸಮೀಪದ ಬಿಳಕಿ ಪ್ರದೇಶದ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು, ಬಿಳಕಿ ಸಮೀಪ ಏಕಾಏಕಿ ರೈಲ್ವೆ ಎಂಜಿನ್ ಬೋಗಿಗಳ ಬಿಟ್ಟು ಮುಂದಕ್ಕೆ ಚಲಿಸಿದೆ. ತಕ್ಷಣ ಎಚ್ಚೆತ್ತ ಲೋಕೋ ಪೈಲೆಟ್ ಕೊಂಚ ದೂರ ಕ್ರಮಿಸಿದ ನಂತರ ಎಂಜಿನ್ ನನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಕೆಲ ಸಮಯ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದು, ನಂತರ ರೈಲು ಭದ್ರಾವತಿಯತ್ತ ಪ್ರಯಾಣ ಬೆಳೆಸಿತು.










Discussion about this post