No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ ವಿದ್ಯಾನಗರದಲ್ಲಿ ಭಾರೀ ಕಳ್ಳತನ | ನಗದು ಸೇರಿ ₹1.42 ಕೋಟಿ ಮೌಲ್ಯದ ವಸ್ತು ದೋಚಿದ ಕಳ್ಳ

kalpa News by kalpa News
August 30, 2026
in ಶಿವಮೊಗ್ಗ
0
Shivamogga Theft Rs 1.42 Crore Gold Cash Stolen Crime News
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 

ಶಿವಮೊಗ್ಗ (Shivamogga) ನಗರದ ವಿದ್ಯಾನಗರ 4ನೇ ಅಡ್ಡರಸ್ತೆಯಲ್ಲಿ ಪಿಡಿಒ ಕುಟುಂಬ ವಾಸವಿದ್ದ ಬಾಡಿಗೆ ಮನೆಯಲ್ಲಿ ಭರ್ಜರಿ ಕಳ್ಳತನ (Theft) ನಡೆದಿದ್ದು, 943 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, ₹86 ಸಾವಿರ ನಗದು, 15 ಕೈಗಡಿಯಾರಗಳು ಹಾಗೂ ದೇವರ ಮೂರ್ತಿ ಸೇರಿದಂತೆ ಒಟ್ಟು ₹1,42,29,900 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ವಿದ್ಯಾನಗರ ನಿವಾಸಿ ಹಾಗೂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನಟರಾಜ್ ಕೆ.ಎನ್. (55) ಅವರು ನೀಡಿದ ದೂರಿನ ಆಧಾರದ ಮೇಲೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆಲಸಕ್ಕೆ ತೆರಳಿದ್ದ ವೇಳೆ ಕಳ್ಳತನ

ದೂರುದಾರ ನಟರಾಜ್ ಕೆ.ಎನ್. ಹಾಗೂ ಅವರ ಪತ್ನಿ ಇಬ್ಬರೂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದಂಪತಿ ತಮ್ಮ ಕುಟುಂಬದೊಂದಿಗೆ ವಿದ್ಯಾನಗರದ 4ನೇ ಅಡ್ಡರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.CM D.K. Shivakumar Speech On Gruhalakshmi

ಆಗಸ್ಟ್ 28ರಂದು ಬೆಳಗ್ಗೆ ಸುಮಾರು 11.15ರ ವೇಳೆಗೆ ನಟರಾಜ್ ಹಾಗೂ ಅವರ ಪತ್ನಿ ಕರ್ತವ್ಯಕ್ಕೆಂದು ಮನೆಯನ್ನು ಬೀಗ ಹಾಕಿ ಹೊರಗೆ ತೆರಳಿದ್ದರು. ಸಂಜೆ ವೇಳೆ ಅವರ ಪುತ್ರಿ ವೈಷವಿ ಅವರು ದೂರವಾಣಿ ಮೂಲಕ ಕರೆ ಮಾಡಿ, ಮನೆಯಲ್ಲಿ ಕಳ್ಳತನವಾಗಿರುವುದಾಗಿ ತಿಳಿಸಿದ್ದಾರೆ.

ಮಾಹಿತಿ ತಿಳಿದ ತಕ್ಷಣ ದಂಪತಿ ಮನೆಗೆ ಮರಳಿ ಪರಿಶೀಲಿಸಿದಾಗ, ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಯಾರೋ ಮುರಿದು ಒಳಗೆ ಪ್ರವೇಶಿಸಿರುವುದು ಕಂಡುಬಂದಿದೆ. ಬಳಿಕ ಬೆಡ್‌ರೂಮ್‌ನಲ್ಲಿದ್ದ ಗಾಡ್ರೇಜ್ ಬೀರುವನ್ನು ಒಡೆದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

943 ಗ್ರಾಂ ಚಿನ್ನಾಭರಣ ಕಳವು

ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವಿಧ ಬಗೆಯ ಒಟ್ಟು 943 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿರುವುದಾಗಿ ಉಲ್ಲೇಖಿಸಲಾಗಿದೆ. ಕಳುವಾದ ಚಿನ್ನಾಭರಣಗಳಲ್ಲಿ ಚಿನ್ನದ ಸರಗಳು, ನೆಕ್ಲೇಸ್‌ಗಳು, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ಹ್ಯಾಂಗಿಂಗ್ಸ್, ಪೆಂಡೆಂಟ್ ಹೊಂದಿರುವ ಸರ, ಲಕ್ಷ್ಮಿ ತಾಳಿ, ಚಿನ್ನದ ಗೊಂಬೆಗಳು ಹಾಗೂ ಚಿನ್ನದ ಗಟ್ಟಿ ಸೇರಿದಂತೆ ವಿವಿಧ ವಸ್ತುಗಳು ಸೇರಿವೆ.PES Shivamogga

ಪೊಲೀಸ್ ದಾಖಲೆಯಲ್ಲಿರುವ ವಿವರಗಳ ಪ್ರಕಾರ, ಕಳುವಾದ ಚಿನ್ನಾಭರಣಗಳ ಪೈಕಿ ಪ್ರಮುಖವಾಗಿ:

  • 110 ಗ್ರಾಂ ತೂಕದ ಎರಡು ಉದ್ದನೆಯ ಚಿನ್ನದ ಸರಗಳು
  • 69 ಗ್ರಾಂ ತೂಕದ ಮೂರು ಚಿನ್ನದ ನೆಕ್ಲೇಸ್‌ಗಳು
  • 240 ಗ್ರಾಂ ತೂಕದ ಆರು ಚಿನ್ನದ ಬಳೆಗಳು
  • 12 ಗ್ರಾಂ ತೂಕದ ಒಂದು ಜೋಡಿ ಚಿನ್ನದ ಕಿವಿಯೋಲೆ
  • 120 ಗ್ರಾಂ ತೂಕದ ಹ್ಯಾಂಗಿಂಗ್ಸ್ ಹಾಗೂ ಕಿವಿಯೋಲೆಗಳ ಸೆಟ್
  • 40 ಗ್ರಾಂ ತೂಕದ ಎಂಟು ಚಿನ್ನದ ಉಂಗುರಗಳು
  • 16 ಗ್ರಾಂ ತೂಕದ ಐದು ಚಿನ್ನದ ಉಂಗುರಗಳು
  • 30 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳು
  • 75 ಗ್ರಾಂ ತೂಕದ ಐದು ಚಿನ್ನದ ಸರಗಳು
  • 60 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು
  • 18 ಗ್ರಾಂ ತೂಕದ ಮೂರು ಚಿನ್ನದ ಬಳೆಗಳು
  • ಪೆಂಡೆಂಟ್ ಹೊಂದಿರುವ 50 ಗ್ರಾಂ ಚಿನ್ನದ ಸರ
  • 15 ಗ್ರಾಂ ಚಿನ್ನದ ಮೂರು ಗೊಂಬೆಗಳು ಹಾಗೂ ಒಂದು ಲಕ್ಷ್ಮಿ ತಾಳಿ
  • 10 ಗ್ರಾಂ ತೂಕದ ಒಂದು ಚಿನ್ನದ ಗಟ್ಟಿ
  • 78 ಗ್ರಾಂ ತೂಕದ ಐದು ಚಿನ್ನದ ಸರಗಳು

ಸೇರಿದಂತೆ ವಿವಿಧ ಚಿನ್ನಾಭರಣಗಳು ಕಳುವಾಗಿವೆ.

Also Read>> ಮೈಸೂರು | ದಸರಾ ಗಜಪಡೆ ವೀಕ್ಷಣೆಗೆ ಇನ್ಮುಂದೆ ಟಿಕೆಟ್ ಇಲ್ಲ; ₹100, ₹50 ಶುಲ್ಕ ರದ್ದು

Shivamogga : ಬೆಳ್ಳಿ, ನಗದು, ವಾಚ್‌ಗಳೂ ಕಳ್ಳತನ

ಚಿನ್ನಾಭರಣಗಳ ಜೊತೆಗೆ 500 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ₹86,000 ನಗದು ಹಾಗೂ ಸುಮಾರು ₹1.50 ಲಕ್ಷ ಮೌಲ್ಯದ 15 ಕೈಗಡಿಯಾರಗಳು ಕಳುವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ₹2,500 ಮೌಲ್ಯದ ವೆಂಕಟೇಶ್ವರ ದೇವರ ಮೂರ್ತಿಯನ್ನೂ ಕಳ್ಳರು ಕೊಂಡೊಯ್ದಿದ್ದಾರೆ ಎಂದು ಪೊಲೀಸರು ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ದಾಖಲೆಯ ಪ್ರಕಾರ ಕಳುವಾದ ಎಲ್ಲಾ ವಸ್ತುಗಳ ಒಟ್ಟು ಅಂದಾಜು ಮೌಲ್ಯ ₹1,42,29,900 ಆಗಿದೆ.

ಸಿಸಿಟಿವಿಯಲ್ಲಿ ಕಳ್ಳನ ಚಲನವಲನ ಸೆರೆ

ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳನ ಚಲನವಲನಗಳು ಸೆರೆಯಾಗಿವೆ ಎಂದು ತಿಳಿದುಬಂದಿದೆ. ಕಳ್ಳನು ಮನೆಗೆ ಪ್ರವೇಶಿಸಿ ಕಳ್ಳತನ ನಡೆಸಿ ತೆರಳಿರುವ ದೃಶ್ಯಗಳು ಪೊಲೀಸರ ತನಿಖೆಗೆ ಪ್ರಮುಖ ಸುಳಿವಾಗುವ ಸಾಧ್ಯತೆಯಿದೆ.

ಘಟನೆ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಳ್ಳತನದಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕಳುವಾದ ಚಿನ್ನಾಭರಣ, ನಗದು ಹಾಗೂ ಇತರ ವಸ್ತುಗಳನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kumadvathi College ShikariuraKalpa News Advertising DisclaimerKalahamsa Infotech private limited

Tags: Crime NewsPolice NewsShimogaShivamoggaTheftಕಳ್ಳತನಚಿನ್ನಾಭರಣಶಿವಮೊಗ್ಗ
Share259Tweet162Send
Aniruddha Vasishta S R

Aniruddha Vasishta S R

Editor-in-Chief

Previous Post

ಮೈಸೂರು | ದಸರಾ ಗಜಪಡೆ ವೀಕ್ಷಣೆಗೆ ಇನ್ಮುಂದೆ ಟಿಕೆಟ್ ಇಲ್ಲ; ₹100, ₹50 ಶುಲ್ಕ ರದ್ದು

Next Post

2028ರ ಚುನಾವಣೆಗೆ ಈಶ್ವರಪ್ಪ ಕುಟುಂಬ ಸಜ್ಜು! ಶಿವಮೊಗ್ಗ ನಗರದಿಂದ ಶೇ.100 ಖಚಿತ

kalpa News

kalpa News

Next Post
Shivamogga KS Eshwarppa or Son To Contest In 2028 Election

2028ರ ಚುನಾವಣೆಗೆ ಈಶ್ವರಪ್ಪ ಕುಟುಂಬ ಸಜ್ಜು! ಶಿವಮೊಗ್ಗ ನಗರದಿಂದ ಶೇ.100 ಖಚಿತ

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL