ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಾಲು ಸಾಲು ಕೊರೋನಾ ಪಾಸಿಟಿವ್ ಪ್ರಕರಣದಿಂದ ಈಗಾಗಲೇ ಬೆಚ್ಚಿಬಿದ್ದಿರುವ ಜಿಲ್ಲೆಯಲ್ಲಿ ಇಂದು ಮತ್ತೆ ಆರು ಹೊಸ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಇಂದು ಪತ್ತೆಯಾದ ಆರು ಪ್ರಕರಣದಲ್ಲಿ ಐವರು ತಮಿಳುನಾಡು ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಶಿವಮೊಗ್ಗದ 21 ವರ್ಷದ ಮಹಿಳಾ ರೋಗಿ ಸಂಖ್ಯೆ 1499, 3 ವರ್ಷದ ಗಂಡು ಮಗು ರೋಗಿ ಸಂಖ್ಯೆ 1500, 3 ವರ್ಷದ ಹೆಣ್ಣು ಮಗು ರೋಗಿ ಸಂಖ್ಯೆ 1501, 56 ವರ್ಷದ ಪುರುಷ ರೋಗಿ ಸಂಖ್ಯೆ 1502, 52 ವರ್ಷದ ಪುರುಷ ರೋಗಿ ಸಂಖ್ಯೆ 1503 ಆಗಿದ್ದು, ಎಲ್ಲರೂ ತಮಿಳುನಾಡಿ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.
ಇನ್ನು, ತೀವ್ರತರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಶಿವಮೊಗ್ಗ 60 ವರ್ಷದ ಮಹಿಳೆಯಲ್ಲೂ ಸಹ ಕೊರೋನಾ ಪಾಸಿಟಿವ್ ಬಂದಿದ್ದು, ಇವರ ಟ್ರಾವೆಲ್ ಹಿಸ್ಟರಿಯನ್ನು ಉಲ್ಲೇಖಿಸಲಾಗಿಲ್ಲ.
Get in Touch With Us info@kalpa.news Whatsapp: 9481252093
















