ಅಮೇಥಿ: ಚುನಾವಣೋತ್ತರ ರಾಜಕೀಯ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಬಲಿಯಾದ ಬಿಜೆಪಿ ನಾಯಕನ ಅಂತಿಮ ಯಾತ್ರೆಗೆ ಸ್ವತಃ ಸ್ಮೃತಿ ಇರಾನಿ ಹೆಗಲುಕೊಟ್ಟರು.
ಹೌದು… ಬಿಜೆಪಿ ನಾಯಕ, ಸ್ಮೃತಿ ಇರಾನಿ ಆಪ್ತ ಸುರೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇಂದು ಅವರ ಅಂತ್ಯಸಂಸ್ಕಾರ ನಡೆಯಿತು. ಇದಕ್ಕೂ ಮುನ್ನ ತಮಗಾಗಿ ದುಡಿದ ವ್ಯಕ್ತಿಯ ಅಂತಿಮ ಯಾತ್ರೆಯಲ್ಲಿ ಸ್ವತಃ ಹೆಗಲುಕೊಟ್ಟ ಸ್ಮೃತಿ ಇರಾನಿ, ತಮ್ಮ ಆಪ್ತನನ್ನು ನೆನೆದು ತೀವ್ರವಾಗಿ ಕಣ್ಣೀರಿಟ್ಟರು.
#WATCH BJP MP from Amethi, Smriti Irani lends a shoulder to mortal remains of Surendra Singh, ex-village head of Barauli, Amethi, who was shot dead last night. pic.twitter.com/jQWV9s2ZwY
— ANI (@ANI) May 26, 2019
ಇರಾನಿ ಸಚಿವೆಯಾದಾಗಿನಿಂದಲೂ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಸಿಂಗ್, ಈ ಚುನಾವಣೆಯಲ್ಲಿ ಬಹಳಷ್ಟು ಮಹತ್ವದ ಪಾತ್ರ ವಹಿಸಿದ್ದರು. ಸ್ಮೃತಿ ಗೆಲುವಿನ ಸಂಭ್ರಮಾಚರಣೆಗೆ ತೆರಳಿ ಮನೆಗೆ ವಾಪಾಸಾಗಿ ಮನೆಯ ಹೊರಗೆ ಮಲಗಿದ್ದ ವೇಳೆ ಬೈಕ್’ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಲಕ್ನೋದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುರೇಂದ್ರ ಸಿಂಗ್ ಕೊನೆಯುಸಿರೆಳೆದಿದ್ದರು.
Smriti Irani, BJP MP from Amethi: I've taken an oath before Surendra Singh ji's (ex-village head Barauli who was shot dead y'day) family, the one who fired & the one who ordered it, even if I have to go SC to get the culprits a death sentence, we will knock the doors of the court pic.twitter.com/eyvEi4mmeU
— ANI UP (@ANINewsUP) May 26, 2019
ಪ್ರಕರಣ ಕುರಿತಂತೆ ಈಗಾಗಲೇ ಉನ್ನತಮಟ್ಟದ ತನಿಖೆ ನಡೆಯುತ್ತಿದ್ದು, ಆರು ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
Discussion about this post