ಕಲ್ಪ ಮೀಡಿಯಾ ಹೌಸ್ | ಸೊರಬ |
ಮುಂದಿನ ನಾಗರಿಕ ಸಮಾಜದ ನೇತೃತ್ವವನ್ನು ವಹಿಸಿಕೊಳ್ಳುವ ಇಂದಿನ ಮಕ್ಕಳು ಜೀವನದಲ್ಲಿ ಶಿಸ್ತು ಮತ್ತು ಸೌಮ್ಯತೆಯನ್ನ ಅಳವಡಿಸಿಕೊಂಡರೆ ಮುಂದಿನ ದೇಶದ ಪ್ರಬುದ್ಧ ಪ್ರಜೆಗಳಾಗುವುದಲ್ಲದೆ ಸದೃಢ ನೇತಾರರಾಗುತ್ತಾರೆ ಎಂದು ಮುರಾರ್ಜಿ ದೇಸಾಯಿ ವಸತಿ ಶಾಲೆ ಕೆಳದಿ ಯ ಪ್ರಾಂಶುಪಾಲೆ ಹೆಚ್ ರತ್ನಮ್ಮ ಅಭಿಪ್ರಾಯಪಟ್ಟರು.
ತಾಲೂಕಿನ ಸಮೀಪದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಮಕ್ಕಳು ಭವಿಷ್ಯ ಭಾರತದ ನಿರ್ಮಾಣದಲ್ಲಿ ಹಲವು ಸ್ತರದಲ್ಲಿ ಭಾಗವಹಿಸಬೇಕಾಗುತ್ತದೆ. ಇಂಜಿನಿಯರ್ ಆಗಿ ವೈದ್ಯರಾಗಿ, ಉದ್ದಿಮೆಗಾರರಾಗಿ, ರೈತರಾಗಿ, ರಾಜಕಾರಣಿಗಳಾಗಿ, ವಿಜ್ಞಾನಿಗಳಾಗಿ, ಕಲಾವಿದರಾಗಿ, ಕ್ರೀಡಾಪಟುಗಳಾಗಿ, ಸೈನಿಕರಾಗಿ ಯಾವುದೇ ವೃತ್ತಿಯಲ್ಲಿದ್ದರೂ ಸಹ ಪ್ರಾಮಾಣಿಕತೆ ಮತ್ತು ಶಿಸ್ತುಬದ್ಧವಾದ ಜೀವನ ಶೈಲಿ ಅಳವಡಿಸಿಕೊಂಡಾಗ ಸದೃಢ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಶಿಕ್ಷಕ ಧರ್ಮರಾಜ್ ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ಧೆಯಿಂದ ಕಲಿಕೆಯಲ್ಲಿ ಪಾಲ್ಗೊಂಡಾಗ ತಂದೆ ತಾಯಿಗಳಿಗೆ ಮತ್ತು ಕಲಿಸಿದ ಶಾಲೆಗೆ ಉತ್ತಮ ಹೆಸರು ತಂದುಕೊಡಲು ಸಾಧ್ಯ ಎಂದರು,
ಶಾಲಾ ಸಂಸತ್ತಿನ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ಪದಾಧಿಕಾರಿಗಳಾದ ಸುಷ್ಮಾ, ಪ್ರೀತಂ ಪಾಟೀಲ್, ನೇಸರ, ಪ್ರಥಮ್ ಸೇರಿದಂತೆ ಮೊದಲಾದವರಿದ್ದರು.
ಶಾಲಾ ಸಂಸತ್ತಿನ ಪದಾಧಿಕಾರಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರಾದ ಶ್ರೀನಿವಾಸ್ ಮೂರ್ತಿ ಪ್ರಾರ್ಥಿಸಿದರು. ಶಿಕ್ಷಕಿ ಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕಿರಾದ ಗೀತಾಂಜಲಿ ಎಂ ಎಚ್ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ರೂಪಕಗಳು ಹಾಗೂ ಜಾನಪದ ನೃತ್ಯಗಳ ಅಂತಹ ಕಾರ್ಯಕ್ರಮಗಳು ನೆರವೇರಿದವು.
ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಜೆ ಸಾವಿತ್ರಿ ಮತ್ತು ಕೆ ವಿನೋದ ಗುರುರಾಜ್, ನಿಲಯ ಪಾಲಕ ಟಿ ವೈ ವಿನಯ್ ,ರೂಪ ಆನಂದ್ ಸೇರಿದಂತೆ ಬೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post