ಕಲ್ಪ ಮೀಡಿಯಾ ಹೌಸ್ | ಸೊರಬ |
ಜಡೆ ಸಂಸ್ಥಾನ ಮಠಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದೆ. ನಾಡಿನ ಉದ್ದಗಲಕ್ಕೂ ಶ್ರೀ ಮಠ ಖ್ಯಾತಿ ಪಡೆದಿದೆ. ಇಲ್ಲಿನ ನಿರ್ವಿಕಲ್ಪ ಸಮಾಧಿಯಲ್ಲಿ ಸಿದ್ಧವೃಷಭೇಂದ್ರರು ಎಚ್ಚರವಾಗಿದ್ದಾರೆ ಎಂಬುವುದಕ್ಕೆ ಇದರ ಖ್ಯಾತಿಯೆ ಸಾಕ್ಷಿಯಾಗಿದೆ ಎಂದು ಕೋಡಿಮಠದ #Kodi Mutt ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದರು.
ತಾಲ್ಲೂಕು ಜಡೆ ಮಠದ ಶ್ರೀ ಸಿದ್ಧವೃಷಭೇಂದ್ರರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಮ್ಮೇಳನ ಉದ್ಧೇಶಿಸಿ ಮಾತನಾಡಿದರು.
Also read: ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ: ಹೈಕೋರ್ಟ್’ಗೆ ರಾಜ್ಯ ಸರ್ಕಾರ ಹೇಳಿಕೆ
ಕೋಡಿಮಠಕ್ಕೂ ಜಡೆ ಸಂಸ್ಥಾನಮಠಕ್ಕೂ ಸಂಬಂಧವಿದೆ. ಈ ಮಠದಾವರಣದಲ್ಲಿ ಸಿದ್ಧವೃಷಭೇಂದ್ರ ಶ್ರೀಗಳ ಕತೃ ಗದ್ದುಗೆಯ ಮರು ನಿರ್ಮಾಣದ ವೇಳೆ ಗೋಚರಿಸಿರುವ ಸಮಾಧಿಯಲ್ಲಿ ಹಲವು ವಿಶೇಷತೆಗಳು ಕಂಡು ಬಂದಿದ್ದು ಮೂಲ ಗದ್ದುಗೆಗೆ ಚ್ಯುತಿ ಬಾರದಂತೆ ಕಾಮಗಾರಿ ಮುಂದುವರೆಸಲು ತಿಳಿಸಲಾಗಿತ್ತು, ಕಾರ್ಯ ಪ್ರಗತಿಯಲ್ಲಿದ್ದು, ಮುಂದೆ ಇನ್ನಷ್ಟು ಭಕ್ತಿ, ಶ್ರದ್ಧಾಕೇಂದ್ರವಾಗಿ ಈ ಮಠ ಪ್ರಜ್ವಲಿಸಲಿದೆ ಎಂದರು.
ರಾಜ್ಯದ ಹಲವು ಮಠಮಾನ್ಯಗಳ ಅಭಿವೃದ್ಧಿಗೆ ಮುಂದಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರರನ್ನ ಈ ವೇಳೆ ಅವರು ಸ್ಮರಿಸಿದರು.
Also read: ಮತೀಯ ಸಂಘಟನೆಗಳಿಂದ ಮಕ್ಕಳಲ್ಲಿ ವಿಷಬೀಜ ಬಿತ್ತುವ ಕಾರ್ಯ: ಸಂಸದ ರಾಘವೇಂದ್ರ ಕಿಡಿ
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಶ್ರೀಗಳು ಪ್ರಾಸ್ತಾವಿಕ ಮಾತನಾಡಿ, ಕತೃಗದ್ದುಗೆ ಪುನರುಜ್ಜೀವನ, ಸೊರಬದಲ್ಲಿನ ಕಲ್ಯಾಣಮಂಟಪದ ನಿರ್ಮಾಣಕ್ಕೆ ನೆರವಾದ ದಾನಿಗಳನ್ನು ಸ್ಮರಿಸಿದರು.
ಧರ್ಮಸಭೆಯಲ್ಲಿ ಆನಂದಪುರ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ಮೂಡಿ ವಿರಕ್ತ ಮಠದ ಸದಾಶಿವ ಶ್ರೀಗಳು, ತೊಗರ್ಸಿ ಮಳೆ ಹಿರೇಮಠದ ಮಹಂತ ದೇಶಿಕೇಂದ್ರ ಶ್ರೀಗಳೂ, ಗುತ್ತಲದ ಪ್ರಭುಸ್ವಾಮಿ, ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚೆನ್ನವೀರಪ್ಪ, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ, ಪುರಸಭೆ ಅಧ್ಯಕ್ಷ ವೀರೇಶಮೇಸ್ತ್ರಿ, ಎಪಿಎಂಸಿ ಅಧ್ಯಕ್ಷ ದಯಾನಂದಗೌಡ, ಇನ್ನೂ ಅನೇಕರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post