ನವದೆಹಲಿ: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ದೇಶ ನಿಂತಿರುವ ಬೆನ್ನಲ್ಲೆ ಮಧ್ಯಂತರ ಬಜೆಟ್ ಮಂಡಿರುವ ಮೋದಿ ಸರ್ಕಾರದ ಘೋಷಣೆಗಳಿಗೆ ಭಾರತೀಯರು ಮನಸೋತಿದ್ದು, ಇದು ಪ್ರತಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಆದರೆ, ಪ್ರತಿಪಕ್ಷವಾಗಿ ಬಜೆಟನ್ನು ವಿರೋಧಿಸಲೇಬೇಕು ಎಂಬ ರಾಜಕೀಯ ದ್ವೇಷದ ಭ್ರಮೆಯಲ್ಲಿ ತೇಲುತ್ತಿರುವ ಕಾಂಗ್ರೆಸ್, ತನ್ನ ಅಧಿಕೃತ ಟ್ವಿಟರ್’ನಲ್ಲಿ ತಾನೇ ಮಾಡಿರುವ ಆ ಒಂದು ಟ್ವೀಟ್’ನಿಂದಾಗಿ ಮರ್ಯಾದೆ ಕಳೆದುಕೊಂಡಿದೆ.
ಇಂದು ಮಂಡಿಸಲಾದ ಬಜೆಟ್’ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸ್ಥಾಪನೆಯನ್ನು ಘೋಷಣೆ ಮಾಡಿದ್ದು, ಇದರ ಅಡಿಯಲ್ಲಿ ರೈತರಿಗೆ ವಾರ್ಷಿಕ 6000 ರೂ. ಸಹಾಯಧನ ನೀಡಲಾಗುವುದು ಎಂದಿದೆ.
ಈ ವಿಚಾರವನ್ನೆ ಪ್ರಮುಖವನ್ನಾಗಿಸಿದ ಕಾಂಗ್ರೆಸ್, ವರ್ಷಕ್ಕೆ 6000 ರೂ. ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ರಿಯಾಲಿಟಿ ಅಂದರೆ ತಿಂಗಳಿಗೆ 500 ರೂ. ಮಾತ್ರ ರೈತರಿಗೆ ದೊರೆಯಲಿದೆ ಎಂದು ಒಂದು ಟ್ವಿಟಲ್ಲಿ ಹೇಳಿದೆ. ಅದೇ ಇನ್ನೊಂದು ಟ್ವೀಟ್ ನಲ್ಲಿ ವರ್ಷಕ್ಕೆ ಆರು ಸಾವಿರವೋ, ತಿಂಗಳಿಗೆ 500 ರೂ.ಗಳೋ ಅಥವಾ ದಿನಕ್ಕೆ 17 ರೂ.ಗಳೋ ಎಂದು ಪ್ರಶ್ನಿಸುವ ಮೂಲಕ ನಗೆಪಾಟಲಿಗೆ ಈಡಾಗಿದೆ.
ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್’ನಿಂದ ಇದು ಪ್ರಕಟಗೊಂಡಿದ್ದು, ಈ ರೀತಿ ಇಲ್ಲದ ತಪ್ಪನ್ನು ಹುಡುಕುವುದು ಹಾಗೂ ತಪ್ಪು ಹೇಳಬೇಕು ಎಂಬ ಕಾರಣಕ್ಕಾಗಿ ಸರಿಯಾಗಿ ತಿಳಿದುಕೊಳ್ಳದೇ ಟ್ವೀಟ್ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ಹಾಗೂ ಅಪಹಾಸ್ಯಕ್ಕೆ ಕಾರಣವಾಗಿದೆ.
ದೊಡ್ಡ ಲೆಕ್ಕಾಚಾರದ ಮೋಸವನ್ನು ತೋರಿಸುತ್ತೇವೆ ಎಂದು ಕ್ಷುಲ್ಲಕ ಅರ್ಥವಿಲ್ಲದ ವಿಚಾರವನ್ನು ಟ್ವೀಟ್ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಆದರೆ, ಇಷ್ಟಾದರೂ ಆ ಟ್ವಿಟನ್ನು ಡಿಲೀಟ್ ಮಾಡುವ ಗೋಜಿಗೆ ಕಾಂಗ್ರೆಸ್ ಹೋಗಿಲ್ಲ…
Discussion about this post