ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-23 |
ನಮ್ಮ ಭಾರತದಲ್ಲಿ ಪ್ರತಿಯೊಬ್ಬರೂ ಪ್ರತಿಭಾವಂತರು. ಪ್ರತಿ ಕುಲದಲ್ಲೂ ಒಂದೊಂದು ಕೆಲಸ ಇರುತ್ತಿತ್ತು. ಒಬ್ಬರಿಗಿಂತ ಇನ್ನೊಬ್ಬರು ಪ್ರತಿಭೆಯಲ್ಲಿ ಏನೂ ಕಮ್ಮಿ ಇರಲಿಲ್ಲ. ಕುಲಗಳಿಗೆ ಸಂಬಂಧಪಟ್ಟಂತೆ ಇರುವ ಕಸುಬುಗಳಿಗೆ #Occupation ಕುಲ ಕಸುಬುಗಳೆಂದು ಕರೆಯುತ್ತಾರೆ.
ಉದಾಹರಣೆಗೆ: ಅಗಸ, ಅಕ್ಕಸಾಲಿಗ, ಕಮ್ಮಾರ, ಚಮ್ಮಾರ, ದರ್ಜಿ, ಜ್ಯೋತಿಷ್ಯ, ಪೌರೋಹಿತ್ಯ, ಅಗ್ನಿಹೋತ್ರ, ಕುಂಬಾರ, ಬಳೆಗಾರ, ನೇಕಾರರು, ಮುಂತಾದವರು.
ವಂಶಪಾರಂಪರ್ಯವಾಗಿ ಬರುತ್ತಿದ್ದ ಕಾರಣ ಆ ಕುಲಸುಬುಗಳು ಮುಂದುವರೆಯುತ್ತಿದ್ದವು. ಆ ಕೆಲಸ ಮಾಡ್ದಿದ್ದರೆ ಅವರಿಗೆ ಆ ಜಾತಿಯಿಂದ ಬಹಿಷ್ಕಾರ ಹಾಕುತ್ತಿದ್ದರು. ಹಾಗಾಗಿ ಆ ಹೆದರಿಕೆಯಿಂದಲೂ ಈ ಕೆಲಸ ಮುಂದುವರೆಯುತ್ತಿತ್ತು.
Also Read>> ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ
ಹಿಂದೆ ಒಂದು ಹಳ್ಳಿ ಎಂದರೆ ಅಲ್ಲಿ ವಾಸ ಮಾಡುವ ಜನರ ಜೊತೆಗೆ ಕುಂಬಾರ, ಅಗಸ, ಬುಟ್ಟಿ ಮಾಡುವವರು, ಕಮ್ಮಾರ, ಅಕ್ಕಸಾಲಿಗ, ನೇಕಾರ ಮತ್ತು ಮುಂತಾದವರು ವಾಸಿಸುತ್ತಿದ್ದರು.
ಅವರಿಗೆ ಏನಾದರು ವ್ಯಾಪಾರವಾಗುತ್ತಿರಲಿಲ್ಲ ಎಂದರೆ ಅವರು ಬೇರೆ ಹಳ್ಳಿ ಅಥವಾ ಊರಿಗೆ ಹೋಗುತ್ತಿರಲಿಲ್ಲ. ಏಕೆಂದರೆ ಆ ಹಳ್ಳಿಯಲ್ಲಿ ಒಂದು ಶುಭ ಅಥವಾ ಅಶುಭ ಕಾರ್ಯಕ್ರಮ ನಡೆದರೆ ಇವರೆಲ್ಲರೂ ಸಹಾಯಕ್ಕೆ ಬೇಕು.
ಈಗ ಆ ಹಳ್ಳಿಯಲ್ಲಿ ಒಂದು ಮದುವೆ ನಡೆಯುತ್ತಿದ್ದರೆ, ಚಪ್ಪರ ಹಾಕಲು ಬುಟ್ಟಿ ಹೆಣೆಯುವವರು, ಅಡಿಗೆಯ ಪಾತ್ರೆಗಳನ್ನು ತಯಾರಿಸಲು ಕಮ್ಮಾರ ಅಥವಾ ಕುಂಬಾರ, ಹೊಸ ಬಟ್ಟೆಗಳನ್ನು ನೇಯಲು ನೇಕಾರ, ಬಂಗಾರದ ಒಡವೆ ಮಾಡಿಸಲು ಅಕ್ಕಸಾಲಿಗ ಮತ್ತು ಮುಂತಾದವರು ಸಹಾಯಕ್ಕೆ ಬಂದು ಅವರ ವ್ಯಾಪಾರವನ್ನು ಮಾಡುತ್ತಿದ್ದರು.
ಇದರ ಪ್ರತಿಯಾಗಿ ಆ ಮನೆಯ/ಹಳ್ಳಿಯ ಹಿರಿಯರೆಲ್ಲರು ಈಗಿನ ತರಹ ಆ ವಸ್ತುವಿಗೆ ಪ್ರತಿಯಾಗಿ ದುಡ್ಡನ್ನು ಕೊಡುತ್ತಿರಲಿಲ್ಲ. ಅವರ ಮನೆಗಳಲ್ಲಿ ಇರುವಂತಹ ಧಾನ್ಯಗಳನ್ನು ಕೊಟ್ಟು ಅವರನ್ನು ಸಂತೋಷ ಪಡಿಸುತ್ತಿದ್ದರು. ನಂತರ ಎರಡು-ಮೂರು ತಿಂಗಳಿಗೊಮ್ಮೆ ಬರುವ ಬಳೆಗಾರರು, ಕರಡಿ ಕುಣಿಸುವವರು, ಗಂಗೆ ಎತ್ತು, ದೊಂಬರಾಟ, ಪಾತ್ರದವರು, ಜೋಕುಮಾರ ಹೇಳಿಕೆ, ಕಣಿ ಹೇಳುವವರಿಗೂ ಇದೇ ರೀತಿ ಸತ್ಕಾರ ಮಾಡಿತ್ತಿದ್ದರು. ಒಟ್ಟಿನಲ್ಲಿ ಸಹಕಾರ ಸಹಬಾಳ್ವೆಯ ಜೀವನ ಅಂದು ಸಹಜವಾಗಿತ್ತು.ನಂತರ ಪಟ್ಟಣಗಳು ಬೆಳೆಯಲು ಪ್ರಾರಂಭವಾಯಿತು. ನಗರೀಕರಣವಾದಂತೆಲ್ಲ ಓದಲೆಂದು ಬರುತ್ತಿದ್ದವರು, ದುಡಿಯಲು, ಹಣ ಸಂಪಾದನೆಗಾಗಿ ಬರಲು ಶುರು ಮಾಡಿದರು.
ಹೀಗೆ ಹಳ್ಳಿಗಳಲ್ಲಿರುವವರು ಪಟ್ಟಣಗಳಿಗೆ ಬರಲು ಶುರು ಮಾಡಿದರು ಇದು ಬೆಳೆಯುತ್ತಲೇ ಹೋಯ್ತು. ಇಲ್ಲಿ ಅವರ ಕಸುಬುಗಳಿಗೆ ಕಷ್ಟವಾದರೂ ತಮ್ಮ ಕಸುಬುಗಳನ್ನು ಬಿಡದೆ ಕುಲಕಸುಬುಗಳನ್ನು ನಡೆಸುವವರು ಹಳ್ಳಿಯಿಂದ ಪಟ್ಟಣ ಪಟ್ಟಣ ಸುತ್ತುತ್ತಿದ್ದರು.
Also Read>> ಫೆ.8 | ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಂದ ಯಕ್ಷಗಾನ ಪ್ರಸಂಗ
ಸುಮಾರು 1991ರ ವರೆಗೂ ಹೀಗೆ ನಡೆಯುತ್ತಿತ್ತು. ಯಾವಾಗ 1991ರಲ್ಲಿ ಸರ್ಕಾರ ಜಾಗತೀಕರಣವನ್ನು ಜಾರಿಗೆ ತಂದಿತೋ ಆಗ ಈ ಕುಲಕಸುಬುನ್ನು ನಡೆಸುವವರಿಗೆ ಕೆಲಸ ಹೋಯಿತು.(ಜಾಗತೀಕರಣ ಎಂದರೆ ನಾವು ಬೇರೆ ದೇಶಕ್ಕೆ ಹೋಗಿ ಅಥವಾ ಬೇರೆಯವರು ನಮ್ಮ ದೇಶಕ್ಕೆ ಬಂದು ಮಾರುವುದು). ಏಕೆಂದರೆ ಬೇರೆ ದೇಶಗಳಿಂದ ವ್ಯಾಪಾರ ಮಾಡಲು ಬೇರೆ ಜನರು ಬರುತ್ತರೆ. ಆದರೆ ನಾವು ಬೇರೆ ದೇಶಕ್ಕೆ ಹೋಗಿ ಮಾರುವುದಿಲ್ಲ. ಅವರು ಹಲವಾರು ದೇಶಗಳಲ್ಲಿ ಅದೇ ವಸ್ತುಗಳನ್ನು ಮಾರುತ್ತಿರುತ್ತಾರೆ. ಹಾಗಾಗಿ ಅವರು ಇಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ನಮ್ಮ ದೇಶದ ಸಂಸ್ಥೆಗಳು ಬೇರೆ ದೇಶಕ್ಕೆ ಹೋಗಿ ಮಾರುವುದು ಕಡಿಮೆ. ಆದ್ದರಿಂದ ಅವರು ಹೆಚ್ಚು ಬೆಲೆಯಲ್ಲಿ ವ್ಯಾಪಾರ ಮಾಡುತ್ತಾರೆ.ಉದಾಹರಣೆಗೆ ಬಾಟಾ `ಸಂಸ್ಥೆ ನಮ್ಮ ದೇಶದ್ದಲ್ಲ. ಅದು 70 ದೇಶಗಳಲ್ಲಿ ಮಾರುತ್ತಿದ್ದರು. ಆದರೆ ಖಾದಿಮ್’ ಸಂಸ್ಥೆ ನಮ್ಮ ದೇಶದ್ದಾಗಿದ್ದು, ಕೇವಲ ಭಾರತದ 23 ಜಿಲ್ಲೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಮಾರಿತ್ತಿದೆ. ಹಾಗಾಗಿ ಬಾಟಾ’ದವರು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಆದ್ದರಿಂದ ಎಲ್ಲರೂ ಬಾಟಾ’ ಸಂಸ್ಥೆಯ ಬೂಟು ಮತ್ತು ಚಪ್ಪಲಿಗಳನ್ನು ಖರೀದಿಸಲು ಅಪೇಕ್ಷಿಸುತ್ತಾರೆ. ಈ ರೀತಿ ಆದಾಗ ನಮ್ಮ ದೇಶದವರಿಗೆ ಮತ್ತು ಕುಲಕಸುಬುಗಳನ್ನು ನಡೆಸುವವರಿಗೆ ಲಾಭವೂ ಇಲ್ಲ ಕೆಲಸವೂ ಇಲ್ಲದ ಹಾಗಾಗುತ್ತದೆ. ನಮ್ಮವರು ತಯಾರಿಸುವುದನ್ನು ಪಾಶ್ಚಾತ್ಯರ ವಸ್ತುಗಳಿಗೆ ಮೊರೆ ಹೋಗಿ ನಮ್ಮತನವನ್ನೇ ಮಾರಿಕೊಂಡಂತಾಗಿದೆ.
ನಾವೇನು ಮಾಡಬಹುದು ಎಂದು ಯೋಚಿಸಿದಾಗ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಖರೀದಿಸಿ, ಅವರಿಗೆ ಬೆಂಬಲಿಸುವುದು ನಮ್ಮ ಕರ್ತವ್ಯ.
ನಾವು ನಮ್ಮ ದೇಶದಲ್ಲಿ ತಯಾರಾದಂತಹ ವಸ್ತುಗಳನ್ನೇ ಖರೀದಿಸಬೇಕು. ಕುಲಕಸುಬುಗಳನ್ನು ನಡೆಸುವವರಿಗೆ ಅಥವಾ ನಡೆಸಿಕೊಂಡು ಬಂದವರು ಆ ವಿದ್ಯೆಯನ್ನು ತಪ್ಪದೇ ತಮ್ಮ ಮಕ್ಕಳಿಗೆ ಹೇಳಿಕೊಡಬೇಕು.(ಇದು ಸಹ ನಾಶವಾಗಲು ಒಂದು ಕಾರಣ). ತಮ್ಮ ಮಕ್ಕಳನ್ನು ಬೇರೆ ವಿದ್ಯೆಯನ್ನು ಓದಲು ಕಳಿಸಿ, ಇದನ್ನು ಕಲಿಸಲು ಮರೆತುಬಿಡುತ್ತಾರೆ. ಹೀಗೆ ಖಂಡಿತ ಆಗಬಾರದು ಆಗ ಕುಲಕಸುಬುಗಳು ಸ್ವಲ್ಪ ಮಟ್ಟಿಗೆ ಬೆಳೆಯುತ್ತದೆ.
ನಮ್ಮತನ, ನಮ್ಮ ದೇಸೀ ಸಂಸ್ಕೃತಿ, ಕುಲಕಸುಬುಗಳನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ನಮ್ಮ ಜವಾಬ್ದಾರಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post