ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಕೆಲವು ಪ್ರಮುಖ ಎಕ್ಸ್’ಪ್ರೆಸ್ ರೈಲುಗಳ ಸಂಖ್ಯೆಯನ್ನು ಮರುನಾಮಕರಣ ಮಾಡಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.
ಈ ಹೊಸ ಬದಲಾವಣೆಗಳು 2026ರ ಫೆಬ್ರವರಿ ತಿಂಗಳಿನಿಂದ ಜಾರಿಗೆ ಬರಲಿದ್ದು, ವಿವರಗಳು ಇಂತಿವೆ.
- ಯಶವಂತಪುರ-ಶಿವಮೊಗ್ಗ ಟೌನ್ ದೈನಂದಿನ ಇಂಟರ್’ಸಿಟಿ ಎಕ್ಸ್’ಪ್ರೆಸ್ (16579) ಫೆಬ್ರವರಿ 19 ರಿಂದ ಹೊಸ ಸಂಖ್ಯೆ 20689 ರೊಂದಿಗೆ ಹಾಗೂ ಶಿವಮೊಗ್ಗ ಟೌನ್-ಯಶವಂತಪುರ (16580) ರೈಲು ಫೆಬ್ರವರಿ 20 ರಿಂದ ಹೊಸ ಸಂಖ್ಯೆ 20690 ರೊಂದಿಗೆ ಸಂಚರಿಸಲಿವೆ.

- ಬೆಳಗಾವಿ-ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ದೈನಂದಿನ ಎಕ್ಸ್’ಪ್ರೆಸ್ (17325) ರೈಲು ಫೆಬ್ರವರಿ 20, 2026 ರಿಂದ ಹೊಸ ಸಂಖ್ಯೆ 20675 ರೊಂದಿಗೆ ಸಂಚರಿಸಲಿದೆ. ಹಾಗೆಯೇ ಮೈಸೂರು-ಬೆಳಗಾವಿ (17326) ರೈಲು ಫೆಬ್ರವರಿ 19 ರಿಂದ ಹೊಸ ಸಂಖ್ಯೆ 20676 ರಲ್ಲಿ ಕಾರ್ಯಾಚರಣೆ ನಡೆಸಲಿದೆ.
- ಗಾಂಧಿಧಾಮ-ಕೆಎಸ್’ಆರ್ ಬೆಂಗಳೂರು ಸಾಪ್ತಾಹಿಕ ಎಕ್ಸ್’ಪ್ರೆಸ್ (16505) ರೈಲು ಫೆಬ್ರವರಿ 24 ರಿಂದ ಜಾರಿಗೆ ಬರುವಂತೆ 20685 ಸಂಖ್ಯೆಯಡಿ ಚಲಿಸಲಿದೆ. ಕೆಎಸ್’ಆರ್ ಬೆಂಗಳೂರು-ಗಾಂಧಿಧಾಮ (16506) ರೈಲು ಫೆಬ್ರವರಿ 21 ರಿಂದ 20686 ಸಂಖ್ಯೆಯನ್ನು ಹೊಂದಿರಲಿದೆ.
- ಜೋಧ್’ಪುರ-ಕೆಎಸ್’ಆರ್ ಬೆಂಗಳೂರು (16507) ರೈಲು ಫೆಬ್ರವರಿ 26 ರಿಂದ 20693 ಸಂಖ್ಯೆಯೊಂದಿಗೆ ಮತ್ತು ಕೆಎಸ್’ಆರ್ ಬೆಂಗಳೂರು-ಜೋಧ್’ಪುರ (16508) ರೈಲು ಫೆಬ್ರವರಿ 23 ರಿಂದ ಜಾರಿಗೆ ಬರುವಂತೆ 20694 ಹೊಸ ಸಂಖ್ಯೆಯೊಂದಿಗೆ ಸಂಚರಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















