ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಜಿ ಆಸ್ಪತ್ರೆಗಳ ಸಮೂಹವು ಮಲೆನಾಡಿನ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಇಡುತ್ತಿದ್ದು ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಪೇಪರ್ ಲೆಸ್ (ಕಾಗದ ಮುಕ್ತ) #PaperlessHospital ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದ್ದು, ಎಲ್ಲ ಸೇವೆಗಳು ಇನ್ನು ಮುಂದೆ ಡಿಜಲೀಕರಣದ ಮೂಲಕ ನಡೆಯಲಿವೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್ ಡಾ. ಧನಂಜಯ ಸರ್ಜಿ #DrDhananjayaSarji ಮಾಹಿತಿ ನೀಡಿದರು.
ಶನಿವಾರ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ನೆರೆ-ಹೊರೆಯ ಯಾವುದೇ ಜಿಲ್ಲೆಯ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ಶಿವಮೊಗ್ಗ #Shivamogga ಜಿಲ್ಲೆಯಲ್ಲಿ ಮೊದಲ ಬಾರಿಗೆ ಪೇಪರ್ ಲೆಸ್ ಆಸ್ಪತ್ರೆಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಆಸ್ಪತ್ರೆಗೆ ಬರುವ ಒಳ ರೋಗಿಯ ನೊಂದಣಿಯಿಂದ ಹಿಡಿದು ಔಷಧ ವಿತರಣೆವರೆಗೂ ಸಂಪೂರ್ಣ ಕಾಗದ ರಹಿತವಾಗಿ ಎಲ್ಲವನ್ನು ಆನ್ ಲೈನ್ #Online ಮೂಲಕ ಒದಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಸರ್ಜಿ ಆಸ್ಪತ್ರೆಗಳ ಸಮೂಹದ ಎಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.
ಭಾರತದಲ್ಲಿ ಒಂದು ವರ್ಷಕ್ಕೆ 40.5 ಕೋಟಿ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ. ಅಂದಾಜಿನ ಪ್ರಕಾರ ಪ್ರತಿ 2 ಸೆಕೆಂಡ್ ಗೆ 1 ಮರ ಪೇಪರ್ ಉತ್ಪಾದನೆ ಸಲುವಾಗಿ ಕಟಾವು ಆಗುತ್ತಿದೆ. ಒಂದು ಟನ್ ಪೇಪರ್ ತಯಾರಿಕೆಗೆ 24 ಮರಗಳನ್ನು ಕಡಿಯಬೇಕಾಗುತ್ತದೆ, ಒಂದು ಟನ್ ನಲ್ಲಿ 2 ಲಕ್ಷ A4 ಶೀಟ್ ಗಳನ್ನು ಉತ್ಪಾದಿಸಲಾಗುತ್ತದೆ. ನಮ್ಮ ಆಸ್ಪತ್ರೆಗೆ 6 .50 ಲಕ್ಷ B4 ಶೀಟ್ ಬಳಸಲಾಗುತ್ತಿತ್ತು. ಇದರ ಪ್ರಕಾರ ನಾವು ವರ್ಷಕ್ಕೆ ಈ ಒಂದು ಆಸ್ಪತ್ರೆಯಿಂದ 76 ಮರಗಳನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.

ಭಾರತದಲ್ಲಿ ಅತಿ ಹೆಚ್ಚು ಪೇಪರ್ ಬಳಸುವ ಕ್ಷೇತ್ರಗಳ ಪೈಕಿ ಆರೋಗ್ಯ ಕ್ಷೇತ್ರವು 5 ನೇ ಸ್ಥಾನದಲ್ಲಿದೆ. ಪೇಪರ್ ಉತ್ಪಾದನೆಗೆ ಮರ ಒಂದೇ ಅಲ್ಲ, ನೀರನ್ನು ಕೂಡ ಅತಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಗುತ್ತದೆ. 1 A4 ಅಳತೆಯ ಪೇಪರ್ ತಯಾರಿಸಲು ಸುಮಾರು 10 ರಿಂದ 20 ಲೀಟರ್ ನೀರು ಬಳಕೆಯಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಒಂದು ಲೀಟರ್ ಗಿಂತ ಹೆಚ್ಚಿನ ನೀರು ರಾಸಾಯನಿಕಗಳಿಂದ ಮಲೀನವಾಗಿ ನದಿಗಳಿಗೆ ಸೇರುತ್ತಿದೆ. ನಮ್ಮ ಸಂಸ್ಥೆಯಿಂದ 21 ಲಕ್ಷ ಲೀಟರ್ ನೀರು ಮಲಿನಗೊಳ್ಳುವುದನ್ನು ತಪ್ಪಿಸಿದಂತಾಗುತ್ತದೆ ಹಾಗೂ 8750 ಕೆ.ಜಿ. ಕಾರ್ಬನ್ ಡೈಯಾಕ್ಸೈಡ್ ನಿಂದ ಆಗುವ ವಾಯುಮಾಲಿನ್ಯವನ್ನು ತಡೆದಂತಾಗುತ್ತದೆ ಎಂದರು.
ಅನ್ ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಅಕ್ಷಯ್ ನಾಯಕ್ ಮಾತನಾಡಿ, ನಮ್ಮ ಸಂಸ್ಥೆಯಿಂದ ತಾಂತ್ರಿಕವಾಗಿ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು, ನಮ್ಮದೇ ಆದ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸಿದ್ದು, ಡಿ ಸ್ಕ್ರೈಬ್ ಪೇಪರ್ ಲೆಸ್ ಐಪಿಡಿ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿಗೆ ಸರ್ಜಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಇದು ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಆಸ್ಪತ್ರೆಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.

1) 1 ಮರಕ್ಕೆ 1 ವರ್ಷಕ್ಕೆ 10 ಜನಕ್ಕೆ ಆಕ್ಸಿಸನ್ ನೀಡುತ್ತದೆ. ಸರ್ಜಿ ಆಸ್ಪತ್ರೆಯಲ್ಲಿ ಕಾಗದ ಮುಕ್ತ ಮಾಡಿರುವುದರಿಂದ 1 ವರ್ಷಕ್ಕೆ 250 ಮರಗಳನ್ನು ಉಳಿಸಿದಂತಾಗುತ್ತದೆ, ಹಾಗೆಯೇ 2500 ಜನಕ್ಕೆ ಆಕ್ಸಿಸನ್ ಒದಗಿಸಿದಂತಾಗುತ್ತದೆ.
2) ಮೊದಲು ದಾಖಲಾತಿಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಟ್ಟು ಬರುವುದು ಹಾಗೂ ಅಲ್ಲಿಂದ ವಾಪಸು ಸಂಬಂಧಪಟ್ಟ ವೈದ್ಯರಿಗೆ ತೋರಿಸುವುದಕ್ಕೆ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಬಿಲ್ಲಿಂಗ್ ವಿಭಾಗ ಅಥವಾ ಎಂ ಆರ್ ಡಿ, ಪ್ರಯೋಗಾಲಯ ಹೀಗೆ ಪ್ರತಿಯೊಂದು ವಿಭಾಗಕ್ಕೆ ಅಲೆದಾಡುವ ಸಮಯ ಕಡಿಮೆ ಆಗಿದೆ.
3) ಇದರಿಂದ ಶುಶ್ರೂಷಕಿಯರು ಹೆಚ್ಚಿನ ಸಮಯವನ್ನು ರೋಗಿಗಳ ಆರೈಕೆಗೆ ಮೀಸಲಿಡಲು ಸಾಧ್ಯವಾಗಿದ್ದು, ಅನಗತ್ಯ ಅಲೆದಾಟವನ್ನು ತಡೆಯಲಾಗಿದೆ.
4) ಏಕ ಕಾಲದಲ್ಲಿ 4 ರಿಂದ 5 ಜನ ವಿವರಗಳನ್ನು ದಾಖಲಿಸಬಹುದು ಹಾಗೂ ವೀಕ್ಷಣೆ ಮಾಡಬಹುದು.
5) ರೋಗಿಯ ಡಿಸ್ಚಾರ್ಜ್ ವೇಳೆ ಬಿಲ್ಲಿಂಗ್ ವಿಭಾಗ ಅಥವಾ ಲ್ಯಾಬ್ ನಲ್ಲಿ ಯಾವುದಾದರೂ ಬಾಕಿ ಇರುವುದನ್ನು ಗಮನಿಸಬೇಕಾಗಿರುತ್ತದೆ, ಇಲ್ಲವೇ ಡಿಸ್ಚಾರ್ಜ್ ಸಮ್ಮರಿಯನ್ನೂ ನೋಡಬೇಕಾಗಿರುತ್ತದೆ.
6) ಇನ್ನು ದಾದಿಯರೂ ಕೂಡ ಏನಾದರೂ ಲೋಪದೋಷಗಳಿದ್ದರೆ ನೋಡಬೇಕಾಗಿರುತ್ತದೆ, ಇವೆಲ್ಲವನ್ನೂ ಒಂದೇ ಫೈಲ್ ನಲ್ಲಿ ಬರೆಯುತ್ತಾ ಇದ್ದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಹಾಗಾಗಿ ಈ ಎಲ್ಲ ಕಾರ್ಯಗಳು ಏಕಕಾಲದಲ್ಲಿ ಪೂರ್ಣಗೊಳ್ಳುವುದರಿಂದ ರೋಗಿಯನ್ನು ಕಾಯಿಸದೇ ಡಿಸ್ಚಾರ್ಜ್ ಮಾಡಿ ಬಹುಬೇಗ ಕಳಿಸಬಹುದು.

8) ರೋಗಿಗಳ ಜೊತೆಗೆ ಬಂದವರಿಗೆ ರಿಪೋರ್ಟ್ ತೆಗೆದುಕೊಂಡು ಬರುವುದಾಗಲಿ ಹೋಗಬೇಕಿಲ್ಲ, ಆ ಆತಂಕ, ಗಾಬರಿ, ಗಡಿಬಿಡಿ ಅವರಿಗೆ ಇರುವುದಿಲ್ಲ. ಎಲ್ಲ ರಿಪೋರ್ಟ್ ಗಳೂ ಟ್ಯಾಬ್ ಮೂಲಕ ಆಯಾ ವಿಭಾಗಕ್ಕೆ ರವಾನೆ ಆಗಿರುತ್ತದೆ.
9) ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಬಂಧಿಸಿದ ಸುಮಾರು 30- 40 ಪುಟಗಳ ಕಡತಗಳನ್ನು ಮೂರು ವರ್ಷ ಕಡ್ಡಾಯವಾಗಿಡಬೇಕೆಂಬ ನಿಯಮವಿದೆ, ಅಷ್ಟು ವರ್ಷಗಳ ಕಾಲ ಕೊಠಡಿಯಲ್ಲಿಟ್ಟಾಗ ಇಲಿಗಳಿಂದ, ಇಲ್ಲವೇ ನೀರಿನಿಂದ ಅಥವಾ ಬೆಂಕಿ ಅವಘಡದಿಂಧ ಸುಟ್ಟು ಹೋಗಬಹುದಾದ ಸಾಧ್ಯತೆ ಇತ್ತು, ಇದೀಗ ಎಲ್ಲ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸ್ಟೋರೇಜ್ ಮಾಡಿಡಬಹುದು, ಒಂದು ವೇಳೆ ಫೈಲ್ ಗಳಾಗಿದ್ದರೆ ಕಳವು ಆಗುವ ಸಾಧ್ಯತೆಯೂ ಇರುತ್ತಿತ್ತು, ಈಗ ಯಾವುದೇ ತೊಂದರೆಗಳು ಆಗುವುದಿಲ್ಲ, ಡೇಟಾ ಸಂರಕ್ಷಣೆ ಮಾಡಿಡಲಾಗುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ನಿರ್ದೇಶಕಿಯಾದ ನಮಿತಾ ಸರ್ಜಿ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ಎಸ್.ವೀರಯ್ಯ, ವೈದ್ಯಕೀಯ ಅಧೀಕ್ಷಕರಾದ ಡಾ.ವಿಜಯ ಕುಮಾರ ಮಾಯೇರ, ಅನ್ ರಿಡಲ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾದ ಅಕ್ಷಯ್ ನಾಯಕ್, ಬಿ.ಎಸ್.ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post