ಇಂದು ನಾಗರ ಪಂಚಮಿ. ನಾಗದೇವರಿಗೆ ಹಾಲು ಅಭಿಷೇಕದ ಸಂಭ್ರಮ. ಭಕ್ತರಿಗೆ ಇದು ಸಂಭ್ರಮ. ದುರ್ಬುದ್ಧಿಗಳಿಗೆ ಬಡಮಕ್ಕಳ ಕಾಳಜಿಯ ನೆಪವೊಡ್ಡಿ ವಿರೋಧಿಸುವುದಷ್ಟೆ. ನಾಗನಿಗೆ ಕ್ಷೀರಾಭಿಷೇಕದ ಫಲವೇ 370, 35A ವಿಧಿಗಳಿಗೆ ಎಳ್ಳು ನೀರು.
ದುಷ್ಟರಲ್ಲೂ, ಸಜ್ಜನರಲ್ಲೂ ವ್ಯವಸ್ಥಿತ ಸಂಚುಗಳಿವೆ. ಆದರೆ ದುಷ್ಟರ ಸಂಚಿಗೆ ನೈತಿಕ ದೈವ ಬಲವಿಲ್ಲ. ಸಜ್ಜನರ ಕರ್ಮಕ್ಕೆ ನೈತಿಕವಾಗಿ ಪೂರ್ಣ ದೈವ ಬಲವಿದೆ.
ಮೊದಲ ಹಂತ?
ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿರುವ ಉಗ್ರರಾಗಲೀ, ಉಗ್ರರ ಬೆಂಬಲಕ್ಕೆ ನಿಂತ ನಾಯಕರಾಗಲೀ, ಇವರನ್ನು ಬೆಂಬಲಿಸುವ ಸ್ವಯಂಘೋಷಿತ ಪ್ರಗತಿಪರ ಸಾಹಿತಿಗಳು ಯಾರೇ ಆಗಿರಲಿ ಅವರನ್ನು ಬಂಧಿಸುವ ಕಾನೂನನ್ನು ಕೇಂದ್ರ ಸರಕಾರ ಜಾರಿ ಮಾಡಿತು.
ಎರಡನೆಯ ಹಂತ:
ಎರಡನೆಯ ಹಂತಕ್ಕೆ ಬರೋಣ. ಗಡಿಯಾಚೆಗಿನ ಭಾರತಕ್ಕೆ ನುಸುಳುವ ಸಂಚಿನಲ್ಲಿದ್ದ ಭಯೋತ್ಪಾದಕರನ್ನು ತಾತ್ಕಾಲಿಕವಾಗಿ ಸರ್ಜಿಕಲ್ ಮೂಲಕ ದೂರ ಓಡಿಸಲಾಯಿತು. ಕಾಶ್ಮೀರದ ಗೋಮುಖ ವ್ಯಾಘ್ರಗಳನ್ನು, ದುರುಳ ವ್ಯಾಘ್ರಗಳನ್ನು ಗೃಹ ಬಂಧನದಲ್ಲಿ ಇಡಲಾಯಿತು.
ಮೂರನೆಯ ಹಂತ:
370, 35A ಶಾಸನವನ್ನು ರದ್ದುಗೊಳಿಸಿದ್ದು ರಣಾಂಗಣವಾಯ್ತು. ಸಮರ ಸನ್ನದ್ಧರಾಗಿದ್ದೇವೆ ಎಂಬ ಸೂಚನೆ.
ಸ್ವಚ್ಛತಾ ಅಭಿಯಾನ:
ಇವೆಲ್ಲದಕ್ಕೂ ಮೊದಲು ಸ್ವಚ್ಛತಾ ಅಭಿಯಾನ. ಇದರಲ್ಲಿ ಕಸಗಳೂ, ಅನೇಕ ಮಾನವ ಕಸಗಳ ಮುಕ್ತ ರಾಷ್ಟ್ರವನ್ನಾಗಿಸುವ ಗುರಿ ಇತ್ತು. ಸಜ್ಜನ ಮುಸ್ಲಿಂ ಮಹಿಳೆಯರಿಗೆ ದುಷ್ಟರ ದರಿದ್ರ ತ್ರಿತಲಾಖ್ ಕಾನೂನಿನಿಂದ ಮುಕ್ತ. ಅದು ಇಂದು ಕಾಶ್ಮೀರದಲ್ಲಿ ಸಮಾರೋಪಗೊಂಡಿದೆ. ಸಮಾರೋಪಗೊಂಡೂ ಆಯ್ತು.
2014ರಲ್ಲಿ ನನ್ನ ಇಂಟರ್’ವ್ಯೂ ಸ್ಪಂದನ ಚಾನಲ್’ನಲ್ಲಿ ಮೋದಿಯವರ ಪ್ರಮಾಣವಚನ ಕಾಲದಲ್ಲೇ ಆಯ್ತು. ಈ ಸಲವೂ ಪಬ್ಲಿಕ್ ಟಿವಿಯಲ್ಲಿ ಪ್ರಮಾಣ ವಚನ ಲಗ್ನದ ಬಗ್ಗೆ ಇಂಟರ್’ವ್ಯೂ ಮಾಡಿದಾಗ ನಾನು ಜರಾಸಂಧ ವಧೆಯ ಉದಾಹರಣೆ ನೀಡಿದ್ದೆ. ಘೋಷಣೆ ಇಲ್ಲದೆ, ಮುಸ್ಸಂಜೆ, ಹಿಂಬಾಗಿಲಿನ ಮೂಲಕ ಶ್ರೀಕೃಷ್ಣನು ಅರ್ಜುನ ಮತ್ತು ಭೀಮಸೇನರೊಡನೆ ಆಗಮಿಸಿ ಮರಣ ಘಂಟೆಯನ್ನು ಬಾರಿಸಿದರು. ಜರಾಸಂಧನು ಎರಡು ಸೀಳಾಗಿ ಇಹಲೋಕ ತ್ಯಜಿಸಿ. ಈಗ ನನ್ನನ್ನು ನಾನೇ ಅಭಿನಂಧಿಸಿಕೊಳ್ಳುವ ದಿನ ಇದಾಗಿದೆ. ಅಂದರೆ ಆತ್ಮ ಪ್ರಶಂಸೆಯಲ್ಲ. ಸಂತಸದಿಂದ ನನ್ನ ಲೆಕ್ಕಾಚಾರ(Logic) ಸರಿಯಾಗಿದೆ ಎಂಬುದು ನನ್ನ ಸಂತೋಷವಷ್ಟೇ.
ಮುಂದೆ ಇನ್ನೊಂದು ಶಾಸನ ಬರಲಿದೆ. ಅದುವೇ ಏಕರೂಪ ಶಾಸನ. ಅದು ಬಂದರೆ ನಮಗೆ ಗಂಜಿ ಕೊಡದಿದ್ದರೂ ಪರವಾಗಿಲ್ಲ. ನಾವೇ ಸಂಪಾದಿಸಿಕೊಂಡು, ರಕ್ಷಣೆ ಮಾಡಿಕೊಂಡು ಬೇಯಿಸಿಕೊಂಡು ಗಂಜಿ ಊಟ ಮಾಡಿಕೊಳ್ತೇವೆ. ನನ್ನ ಜೀವಿತಾವಧಿಯಲ್ಲಿ ಆ ದರಿದ್ರ ಶಾಸನ ಮಣ್ಣಾಗುವುದನ್ನು ನೋಡಿದೆನಲ್ಲ. ಅದುವೇ ಪಂಚಾಮೃತ ಪಾನ ನನಗೆ.
ಜೈ ಹಿಂದ್… ಸರ್ವರಿಗೂ ಶುಭವಾಗಲಿ.
ಸಜ್ಜನಾ ಸಂತು ನಿರ್ಭಯಾ ಎಂಬ ನನ್ನ ನಿತ್ಯ ಮಂತ್ರಕ್ಕೆ ದೇವರು ಅನುಗ್ರಹ ಮಾಡಲಿ ಎಂದು ದೇವರಿಗೆ ಸಾಷ್ಟಾಂಗ ಪ್ರಣಾಮಗಳು.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post