Thursday, July 31, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

‘ಸಿರಿವಂತೆ’ಯ ಶ್ರೀಮಂತ ಬ್ರಹ್ಮ ರಥೋತ್ಸವಕ್ಕೆ ಸಕಲವೂ ಸಿದ್ಧ

ಮಾತುಗಾರಿಕೆ ಎಂಬ ವಿಶಿಷ್ಠ ಆಚರಣೆ! ಈ ಬಗ್ಗೆ ನೀವು ತಿಳಿಯಲೇಬೇಕು

May 15, 2022
in Special Articles, ಸಾಗರ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಿಂದ ನಾಲ್ಕು ಕಿಮೀ ದೂರದ ಹೆದ್ದಾರಿಯಲ್ಲಿರುವ ಒಂದು ಐತಿಹಾಸಿಕ ಸ್ಥಳ ಸಿರಿವಂತೆ. ಪೌರಾಣಿಕ ಹಾಗೂ ಸಾಂಸ್ಕೃತಿಕ ಪ್ರಸಿದ್ಧಿ ಹೊಂದಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತ್ರಿಪುರಾಂತಕೇಶ್ವರ ಇಲ್ಲಿಯ ದೇವರು. ಹೆಸರಿಗೆ ತಕ್ಕಂತೆ ಪ್ರಾಕೃತಿಕ-ಸಾಂಸ್ಕೃತಿಕ-ಧಾರ್ಮಿಕ ಶ್ರೀಮಂತಿಕೆಯುಳ್ಳ ಶಕ್ತಿ ಸ್ಥಳವಿದು.

ಈ ದೇವಸ್ಥಾನವು ಸುಮಾರು ಹನ್ನೆರಡನೆಯ ಶತಮಾನದಲ್ಲಿ ಅಂದಿನ ಪಾಳೇಗಾರರಿಂದ ನಿರ್ಮಾಣವಾಗಿ 300 ವರ್ಷಗಳ ಕಾಲ ಭಕ್ತಾದಿಗಳ ಪಾಲಿಗೆ ಪುಣ್ಯನೆಲೆ ಅದಾಗಿತ್ತು. ನಂತರದ ದಿನಗಳಲ್ಲಿ ಕಾರಣಾಂತರಿಂದ ಅನಾಥ ಸ್ಥಿತಿಗೆ ತಲುಪಿದರೂ ಆ ನೆಲದ ದಿವ್ಯ ಶಕ್ತಿ ಜೀವಂತವಾಗಿದ್ದು ಅಂಕುರಗೊಳ್ಳಲು ಹವಣಿಸುತ್ತಿತ್ತು. ಸಮಯ ಸಂದರ್ಭಗಳು ಕೂಡಿ ಬಂದಾಗ ಮತ್ತೊಮ್ಮೆ ಆ ಗತಕಾಲದ ವೈಭವ ಮರುಕಳಿಸಿ ಸೀಮೆ ದೇವಸ್ಥಾನವಾಗಿ ಪ್ರಸಿದ್ಧಿಹೊಂದಿರುವುದು ಸ್ಥಳ ಮಹಿಮೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ವೈಶಾಖ ಶುದ್ಧ ಪೂರ್ಣಿಮೆ ಅಂದರೆ ಮೇ ೧೬ರ ನಾಳೆ ಬ್ರಹ್ಮರಥೋತ್ಸವ ಅತ್ಯಂತ ಸಂಭ್ರಮದಿಂದ ನಡೆಯುತ್ತದೆ.
ಪಾಂಚರಾತ್ರಾಗಮದ ರೀತಿಯಲ್ಲಿ ನಡೆಯುವ ಮೂರು ದಿವಸದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿಯ ವಿಶೇಷ. ವಿಶಿಷ್ಠವಾಗಿ ನಿರ್ಮಿಸಿದ ಯಾಗಶಾಲೆಯಲ್ಲಿ ಕಂಕಣಧಾರರು ಮುಖ್ಯ ತಾಂತ್ರಿಕರೊಡಗೂಡಿ ಅಗ್ನಿ ಜನನ, ಬೀಜವಾಪನ, ಕೌತುಕಬಂಧನ, ಅಷ್ಟಾವಧಾನ ಸೇವೆ, ಭೇರಿತಾಡನ, ಶಿಬಿಕ ಯಂತ್ರೋತ್ಸವ ಹಾಗೂ ಮಹಾಬಲಿ ಕಾರ್ಯಕ್ರಮಗಳು ಇಡೀ ದೇಗುಲಕ್ಕೆ ಒಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುತ್ತದೆ.

Also Read: ರಥದ ಚಕ್ರದಡಿ ಸಿಲುಕಿ ಯುವಕ ಸಾವು

ಉತ್ಸವಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ, ಸಂಘಟನೆಯ ಸಂವರ್ಧನೆಗೆ ಕಾರಣವಾಗುತ್ತವೆ ಎನ್ನುವುದಕ್ಕೆ ಈ ರಥೋತ್ಸವ ಒಂದು ನಿದರ್ಶನ. ಕಾಷ್ಠ ಶಿಲ್ಪಗಳಿಂದ ಕೂಡಿದ ಈ ರಥ, ಉತ್ಸವದ ಸಂದರ್ಭದಲ್ಲಿ ಪರಿಶಿಷ್ಠ ಜಾತಿ ಮತ್ತು ಒಕ್ಕಲಿಗರಿಂದ ವಿಶೇಷವಾಗಿ ಅಲಂಕಾರಗೊಳ್ಳುತ್ತದೆ.
ಉತ್ಸವ ಮೂರ್ತಿಯ ರಥಾರೋಹಣದ ನಂತರ ಅದರ ಒಂದೊಂದು ಗಾಲಿಗಳಿಗೆ ಅಲ್ಲಿಯ ಮಡಿವಾಳರು, ದೀವರು ತೆಂಗಿನಕಾಯನ್ನು ಕೊಟ್ಟು ಚಾಲನೆಗೆ ಅವಕಾಶ ಮಾಡಿಕೊಡುತ್ತಾರೆ. ಹೀಗೆ ಯಾವುದೇ ಒಂದು ಜಾತಿಗೆ ಸೀಮಿತಗೊಳ್ಳದೆ ಹತ್ತು ಹಲವು ಜಾತಿಗಳು ಸೇರಿ ಒಂದು ಸಮಗ್ರ ನೋಟದೊಂದಿಗೆ ಸಾಮಾಜಿಕ ನ್ಯಾಯಕ್ಕೆ ಕುಂದು ಬಾರದಂತೆ ತೇರನ್ನೆಳೆಯುವ ಸಂಭ್ರಮದಲ್ಲಿ ಎಲ್ಲಾ ಭಕ್ತರು ಒಟ್ಟಾಗಿ ಸೇರುತ್ತಾರೆ. ದೇವರಿಗೆ ನವಧಾನ್ಯವನ್ನು ಬೀರುತ್ತಾ ಭೂ ಸಂಪತ್ತು, ವ್ಯಾಪಾರ ವ್ಯವಹಾರ, ಕೌಟುಂಬಿಕ ನೆಮ್ಮದಿ ಮುಂತಾದವುಗಳನ್ನು ಈಡೇರಿಸಲು ಆ ಕರುಣಾಜನಕನನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.
ಮಾತುಗಾರಿಕೆ
ರಥೋತ್ಸವದ ಮಾರನೆಯ ದಿನ ಕುಂಕುಮೋತ್ಸವ ನಡೆದು ಸಂಜೆ ಮಾತುಗಾರಿಕೆ ಎನ್ನುವ ಒಂದು ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯುತ್ತದೆ. ಕಥನ-ಕವನ ರೂಪದಲ್ಲಿರುವ ಈ ಪ್ರಸಂಗ ಜಾನಪದ ಶೈಲಿಯಲ್ಲಿದ್ದು, ಪೌರಾಣಿಕ ಹಿನ್ನೆಲೆಯುಳ್ಳ ಒಂದು ಸುಂದರವಾದ ಕಥೆ ಬಿಚ್ಚಿಕೊಳ್ಳುತ್ತದೆ.

ಶಿವ ಪಾರ್ವತಿಯರು ಶಯನೋತ್ಸವದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಮಂದರ ಪರ್ವತದಲ್ಲಿರುವ ಋಷಿಗಳು ಕೈಲಾಸಕ್ಕೆ ಬಂದು, ರಾಕ್ಷಸರ ಹಾವಳಿಯಿಂದ ತಮಗಾದ ಕಷ್ಟವನ್ನು ಹೋಗಲಾಡಿಸಲು ಶಿವನ ಮೊರೆ ಹೋಗುತ್ತಾರೆ, ಶಿವ ಪಾರ್ವತಿಗೆ ತಿಳಿಯದಂತೆ ಎದ್ದು ಹೋಗಿ ಲೋಕ ಕಲ್ಯಾಣಕ್ಕಾಗಿ ಋಷಿಗಳ ಸಂಕಷ್ಟವನ್ನು ಪರಿಹರಿಸಿದ ಭಕ್ತ ವತ್ಸಲನಾಗುತ್ತಾನೆ.
ಇತ್ತ ಪಾರ್ವತಿ ಎಚ್ಚೆತ್ತು ನೋಡಿದಾಗ ಶಿವ ಇಲ್ಲದಿರುವುದು ಅವಳ ಕೋಪಕ್ಕೆ ಕಾರಣವಾಗುತ್ತದೆ. ತನಗೆ ತಿಳಿಸದೆ ಹೋದ ಸಿಟ್ಟಿಗಾಗಿ ಬಾಗಿಲನ್ನು ಭದ್ರವಾಗಿ ಹಾಕಿ ಹುಸಿಮನಸ್ಸನ್ನು ತೋರಿಸುತ್ತಾ ಚಡಪಡಿಸುತ್ತಾಳೆ. ಶಿವ ತಿರುಗಿ ಬಂದು ಬಾಗಿಲು ಬಡಿಯುತ್ತಾ, ಎಷ್ಟೇ ಬೇಡಿಕೊಂಡರೂ ಬಾಗಿಲು ತೆರೆಯುವುದಿಲ್ಲ. ಆ ಸಂದರ್ಭದಲ್ಲಿ ಅವಳನ್ನು ಸಮಾಧಾನ ಪಡಿಸಲು ಶಿವ ಕೊಡುವ ಕಾರಣಗಳು, ಅದಕ್ಕೆ ಪ್ರತ್ಯುತ್ತರವಾಗಿ ಪಾರ್ವತಿಯ ಮಾತುಗಳು ವ್ಯಂಗ್ಯ ಹಾಗೂ ಹಾಸ್ಯದಿಂದೊಡಗೂಡಿ ಪ್ರೇಕ್ಷಕರಿಗೆ ರಂಜನೆಯನ್ನು ಒದಗಿಸುತ್ತದೆ. ಹೀಗೆ ಇವರಿಬ್ಬರ ಮಧ್ಯೆ ನಡೆಯುವ ಸ್ವಾರಸ್ಯಕರ ಸಂಭಾಷಣೆಯೇ ಈ ಮಾತುಗಾರಿಕೆ.
ಶಿವನ ಪರವಾಗಿ ಹಾಗೂ ಪಾರ್ವತಿಯ ಪರವಾಗಿ ಎರಡು ಗುಂಪು ಮಾಡಿಕೊಂಡು, ಹಾಡಿಗೆ ತಕ್ಕಂತೆ ಸಾಂದರ್ಭಿಕವಾಗಿ ಹೇಳುವ ಆಶು ಸಂಭಾಷಣೆ ಪಾತ್ರಧಾರಿಗಳ ನೈಪುಣ್ಯತೆಯನ್ನು ಎತ್ತಿ ತೋರಿಸುತ್ತದೆ. ಶಿವ ಪಾರ್ವತಿಯ ಪಾತ್ರಧಾರಿಗಳು ಆ ಪಾತ್ರಗಳಿಗೆ ಜೀವತುಂಬಿ, ಸನ್ನಿವೇಶ ಪ್ರಜ್ಞೆಯಿಂದ ಕಥೆಗೊಂದು ಕಳೆಕಟ್ಟಿ ಕಲಾಭಿಮಾನಿಗಳ ಕುತುಹೂಲವನ್ನು ಹೆಚ್ಚಿಸುತ್ತಾರೆ. ಇದು ಒಂದರ್ಥದಲ್ಲಿ ನಮ್ಮ ಯಕ್ಷಗಾನ ಹಾಗು ತಾಳಮದ್ದಳೆಯ ಪ್ರಸಂಗವನ್ನು ನೆನಪಿಸುತ್ತದೆ. ವೇಷ ಕಟ್ಟದಿದ್ದರೂ ಹಿಮ್ಮೇಳ-ಮುಮ್ಮೇಳಗಳನ್ನು ಹೊಂದಿ ಕಲಾಭಿಮಾನಿಗಳಿಗೆ ರಸದೌತಣವನ್ನು ನೀಡುವ ಒಂದು ಅಪೂರ್ವ ಕಾರ್ಯಕ್ರಮವಾಗಿ ಜನಮನದಲ್ಲಿ ಉಳಿದಿದೆ.

Also Read: ನಮ್ಮೆಲ್ಲಾ ದೇವಾಲಯಗಳನ್ನು ಕಾನೂನಾತ್ಮಕವಾಗಿಯೇ ಹಿಂಪಡೆಯುತ್ತೇವೆ: ಈಶ್ವರಪ್ಪ ವಿಶ್ವಾಸ

ರಥೋತ್ಸವದ ಮಾರನೆಯ ದಿವಸ ಅಂದರೆ ಕುಂಕುಮೋತ್ಸವದ ದಿನ ಹತ್ತಿರದಲ್ಲಿರುವ ನದಿಯಲ್ಲಿ ಉತ್ಸವ ಮೂರ್ತಿಯೊಂದಿಗೆ ಕಂಕಣಧಾರಿಗಳು ತಾಂತ್ರಿಕರು ಸ್ನಾನವನ್ನು ಮಾಡಿ ನಂತರ ದೇಗುಲಕ್ಕೆ ಬಂದು ಓಕುಳಿಯಾಡಿ ಅಷ್ಟಾಂಗ ಸೇವೆಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳವನ್ನು ಹಾಡುತ್ತಾರೆ. ಅಂದೇ ಸಾಯಂಕಾಲ ಯಾವುದಾದರು ಒಂದು ಪೌರಾಣಿಕ ಯಕ್ಷಗಾನವನ್ನು ಹಮ್ಮಿಕೊಂಡು ಬೆಳಗಿನವರೆಗೂ ಅದು ನಡೆಯುತ್ತದೆ. ಕೊನೆಯ ದಿನ ಸಂಪ್ರೋಕ್ಷಣ್ಯದಲ್ಲಿ ಅಂಕುರಪ್ರಸಾದದ ವಿನಿಯೋಗದೊಂದಿಗೆ ರಥೋತ್ಸವ ನೆಲೆ ನಿಲ್ಲುತ್ತದೆ.

ಲೇಖನ: ನಾರಾಯಣ ಭಟ್ ಹುಳೇಗಾರು
(ಹವ್ಯಾಸಿ ಲೇಖಕರು)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: JogaKannada News WebsiteLatest News KannadaLocal NewsMalnad NewsRathotsavaSagaraSirivanteTripurantakeshwaraಉತ್ಸವಕುಂಕುಮೋತ್ಸವತ್ರಿಪುರಾಂತಕೇಶ್ವರರಥೋತ್ಸವಶಿವಮೊಗ್ಗಸಾಗರಸಿರಿವಂತೆ
Previous Post

ರಥದ ಚಕ್ರದಡಿ ಸಿಲುಕಿ ಯುವಕ ಸಾವು

Next Post

ಗುಡ್ ನ್ಯೂಸ್: ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಯೋಜನೆ ಪುನರಾರಂಭ – ಸಿಎಂ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
File Photo

ಗುಡ್ ನ್ಯೂಸ್: ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಯೋಜನೆ ಪುನರಾರಂಭ - ಸಿಎಂ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

July 31, 2025

ಸಮಾಜಮುಖಿ ಪತ್ರಿಕೋದ್ಯಮ ಕಣ್ಮರೆ: ಹಿರಿಯ ಪತ್ರಕರ್ತ ತ್ಯಾಗರಾಜ್ ವಿಷಾದ

July 31, 2025
Representational Image

ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ: ಈಶ್ವರಪ್ಪ

July 31, 2025

ಉದಯ ರತ್ನಕುಮಾರ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ

July 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

July 31, 2025

ಸಮಾಜಮುಖಿ ಪತ್ರಿಕೋದ್ಯಮ ಕಣ್ಮರೆ: ಹಿರಿಯ ಪತ್ರಕರ್ತ ತ್ಯಾಗರಾಜ್ ವಿಷಾದ

July 31, 2025
Representational Image

ಸಮಾಜಮುಖಿ ಕೆಲಸಗಳು ವ್ಯಕ್ತಿಯ ಉದ್ಯಮವನ್ನು ಕೂಡ ಬೆಳೆಸುತ್ತದೆ: ಈಶ್ವರಪ್ಪ

July 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!