ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಕಾರಣವಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಸಂಬಂಧಿದ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ.
Also Read: ಸಿಎಂ ಸ್ವಕ್ಷೇತ್ರದ ಥಿಯೇಟರ್’ನಲ್ಲಿ ಕೆಜಿಎಫ್-2 ಚಿತ್ರ ಪ್ರದರ್ಶನದ ವೇಳೆ ವ್ಯಕ್ತಿಯ ಮೇಲೆ ಗುಂಡಿನ ದಾಳಿ
ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯ ಪತ್ರದ ಪೊರ್ಜರಿಗೆ ಸಂಭಂದಿಸಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ವಿಧಾನಸೌಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಂಡಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವಾಲಯ ಟಿಪ್ಪಣಿ ಬಿಡುಗಡೆ ಮಾಡಿದ್ದು, ವಿವರವಾದ ಸ್ಪಷ್ಟೀಕರಣ ನೀಡಿದೆ.
Also Read: ದರ್ಗಾ ನವೀಕರಣದ ವೇಳೆ ದೇವಾಲಯದ ಕುರುಹು ಪತ್ತೆ? ಕಾಮಗಾರಿಗೆ ತಹಶೀಲ್ದಾರ್ ಬ್ರೇಕ್?
ಬೆಳಗಾವಿ ತಾಲೂಕಿನ ಹಿಂಡಲಗ ಗ್ರಾಮದಲ್ಲಿ ರಸ್ತೆ ಕಾಮಗಾರಿಗಳ ನಿರ್ವಹಣೆ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಿಳಾಸಿಸಿ 2021ರ ಫೆ.15ರಂದು ಬೆಳಗಾವಿ ಜಿಪಂ ಅಧ್ಯಕ್ಷೆ ಆಶಾ ಪ್ರಶಾಂತ್ ರಾವ್ ಐಹೊಳೆ ಅವರು ನೀಡಿರುವ ಪತ್ರವನ್ನು ಉಲ್ಲೇಖಿಸಿ ಸದರಿ ಪತ್ರದ ಮೇಲೆ ಹಸಿರು ಶಾಹಿಯಲ್ಲಿ ಆದೇಶದ ಪ್ರತಿಗಳನ್ನು 2021ರ ಫೆ.೫ರಂದು ನೀಡಲಾಗುವುದು ಎಂದು ಕೊನೆಯ ಪುಟದಲ್ಲಿ ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು ಇಲಾಖೆಯಿಂದ ಸ್ಪಷ್ಟೀಕರಣ ನೀಡುತ್ತೇವೆ ಎಂದಿದೆ.
ಆಶಾ ಅವರು ನೀಡಿರುವ ಪತ್ರ ಇ-ಆಫೀಸ್’ನಲ್ಲಿ 2021ರ ಫೆ.17ರಂದು ಸ್ವೀಕೃತಿಯಾಗಿದ್ದು, ಪತ್ರದಲ್ಲಿನ ಸಂಖ್ಯೆ ಬೇರೊಂದು ಪತ್ರಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಉಲ್ಲೇಖಿನ ಪತ್ರದ ಮೇಲೆ ಹಸಿರು ಶಾಹಿಯಲ್ಲಿ ನಮೂದಿಸಿರುವುದು ನಮ್ಮ ಕಚೇರಿಯಿಂದ ಯಾವುದೇ ಅಧಿಕಾರಿಯಾಗಲೀ ಅಥವಾ ಸಿಬ್ಬಂದಿಯಾಗಲಿ ಬರೆದಿವುದು ಆಗಿರುವುದಿಲ್ಲ. ವಾಸ್ತವವಾಗಿ ಇಲಾಖೆಯಲ್ಲಿ ಸ್ವೀಕೃತಗೊಂಡ ಪತ್ರಗಳ ಮೇಲೆ ಮೊಹರು ಹಾಕಿರುವ ಪತ್ರಗಳು ಅರ್ಜಿದಾರರ ಪ್ರತಿಯಾಗಿದ್ದು, ಇದರ ಮೇಲೆ ಕಚೇರಿಯ ಟಿಪ್ಪಣಿಗಳಾಗಲಿ/ಷರಾಗಳಾಗಲಿ ನಮೂದಿಸುವುದಿಲ್ಲ. ಹಸಿರು ಶಾಹಿಯಲ್ಲಿ ನಮೂದಿಸಿರುವ ಷರಾ ಫೋರ್ಜರಿಯಾಗಿರುತ್ತದೆ ಎಂದಿದೆ.
Also Read: ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಎಷ್ಟು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ?
ಈ ರೀತಿ ಷರಾ ಮೂಲಕ ಅನುಮೋದನೆ ಆದೇಶ ನೀಡುವುದು ನಿಯಮ ಬಾಹಿರವಾಗಿದೆ. ವಾಸ್ತವವಾಗಿ ಸ್ವೀಕೃತಗೊಂಡ ಪ್ರಸ್ತಾವನೆಗಳನ್ನು ಕ್ರೋಢೀಕರಿಸಿ ಅನುದಾನ ಲಭ್ಯತೆಯ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನ ಪಡೆದುಕೊಂಡು ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿ, ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದೆ.
ಆದರೆ, ಈ ಅರ್ಜಿಯು ಸ್ವೀಕೃತವಾಗಿದ್ದರೂ ಸಹ ಅನುಮೋದನೆ ಕೊರತೆಯಿಂದ ಪರಿಗಣಿಸದೇ ಬಾಕಿ ಇರಿಸಲಾಗಿದೆ.
ಈ ಪ್ರಕರಣದಲ್ಲಿ ಯಾರೋ ಫೋರ್ಜರಿ ಮಾಡಿ ಉಲ್ಲೇಖಿತ ಪತ್ರದ ಮೇಲೆ ಹಸಿರು ಶಾಹಿಯಲ್ಲಿ ಆದೇಶದ ಪ್ರತಿಗಳನ್ನು 2021ರ ಮಾರ್ಚ್ ೫ರಂದು ನೀಡಲಾಗುವುದು ಹಾಗೂ ಕೊನೆಯ ಪುಟದಲ್ಲಿ ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು ನಮೂದಾಗಿರುತ್ತದೆ. ಹೀಗಾಗಿ, ಈ ಕುರಿತಂತೆ ತನಿಖೆ ನಡೆಸುವಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post