ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಕಂದಾಯ ಇಲಾಖಾ ನೌಕರರ ವಸತಿ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜ.26ರಂದು ನಡೆಯಬೇಕಿದ್ದ ಚುನಾವಣೆ ರದ್ದಾಗಿದೆ.
ಆಡಳಿತ ಮಂಡಳಿಯ ನಿರ್ದೇಶಕರ ಒಟ್ಟು 13 ಸ್ಥಾನಗಳಿಗೆ ಎ.ಕೆ. ಶಿವಮೂರ್ತಿ, ಟಿ. ಮಂಜಪ್ಪ, ಆರ್. ಹನುಮಂತಪ್ಪ, ಟಿ. ಶ್ರೀನಿವಾಸ್, ಶಾರದಮ್ಮ, ಎಸ್.ಡಿ. ಪುಷ್ಪಾ, ಕೆ.ಜಿ. ಮಂಜುನಾಥ ಶರ್ಮಾ, ಸುರೇಶ್, ಪ್ರಕಾಶ್, ಜೆ.ಎನ್. ಸಂಧ್ಯಾ, ರಾಜಪ್ಪ, ಪುಷ್ಪಾದೇವಿ, ಎಸ್.ಟಿ. ಧರ್ಮೋಜಿರಾವ್ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಎಲ್ಲ ನೂತನ ನಿರ್ದೇಶಕರನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get in Touch With Us info@kalpa.news Whatsapp: 9481252093

















