ನ್ಯೂಯಾರ್ಕ್: ಅಮೆರಿಕಾದಲ್ಲಿರುವ ಪಾಕಿಸ್ಥಾನದ ರಾಯಭಾರಿ ಕಚೇರಿ ಮುಂಭಾಗದಲ್ಲಿ ಇಂದು ಬೆಳಗ್ಗೆ(ಸ್ಥಳೀಯ ಕಾಲಮಾನದ ಪ್ರಕಾರ) ಭಾರೀ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಗೆ ಕಾರಣವಾಗಿದ್ದು ಪುಲ್ವಾಮಾದಲ್ಲಿ ನಡೆದ ಯೋಧರ ಮೇಲಿನ ದಾಳಿ.
ಹೌದು… ಜಮ್ಮುವಿನ ಪುಲ್ವಾಮಾದಲ್ಲಿ ಪಾಕಿಸ್ಥಾನದ ಜೈಷ್ ಉಗ್ರರು ನಡೆಸಿದ ಭೀಕರ ದಾಳಿಗೆ ಭಾರತೀಯ ಸೇನೆ 42 ಯೋಧರು ವೀರಸ್ವರ್ಗ ಸೇರಿದ್ದು, ಶತ್ರು ರಾಷ್ಟ್ರದ ವಿರುದ್ಧ ಭಾರತದಾದ್ಯಂತ ಕಿಚ್ಚು ಭುಗಿಲೆದ್ದಿದೆ. ಇದೇ ಕಾರಣಕ್ಕೆ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರೂ ಸಹ ಪಾಕಿಸ್ಥಾನ ರಾಯಭಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಉಗ್ರರ ವಿರುದ್ಧ ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಖಂಡನೆ ವ್ಯಕ್ತಪಡಿಸಿದರು.
#WATCH Members of Indian community protested outside the Pakistan consulate in New York,US on 22 February, against #PulwamaTerrorAttack. pic.twitter.com/sXJCDA6jXF
— ANI (@ANI) February 23, 2019
ಪಾಕಿಸ್ಥಾನ ಸರಕು ಸಾಗಾಣೆಗಳನ್ನು ವಿಶ್ವಕ್ಕೆ ಸರಬರಾಜು ಮಾಡಬೇಕೇ ವಿನಾ ಉಗ್ರವಾದಿಗಳನ್ನಲ್ಲ. ತನ್ನ ಒಡಲಿನಲ್ಲೆ ಉಗ್ರರನ್ನು ಪೋಷಣೆ ಮಾಡುತ್ತಿರುವ ಪಾಕಿಸ್ಥಾನದ ಕೃತ್ಯ ಅತ್ಯಂತ ಖಂಡನೀಯ. ಇದು ಭಾರತಕ್ಕೆ ಮಾತ್ರವಲ್ಲದೇ, ಇಡಿಯ ವಿಶ್ವಕ್ಕೆ ತೀವ್ರ ತೊಂದರೆಯ ವಿಚಾರವಾಗಿದೆ ಎಂದು ಪಾಕ್ ವಿರುದ್ಧ ಹಾಗೂ ಉಗ್ರ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
United States: Indians in New York protest outside the Pakistan Consulate against #Pulwama terrorist attack pic.twitter.com/4eQO9PSY1X
— ANI (@ANI) February 23, 2019
Discussion about this post