ಅಹ್ಮದಾಬಾದ್: ಕೇರಳ ಕರಾವಳಿಗೆ ಮುಂಗಾರು ಮಾರುತಗಳು ಅಪ್ಪಳಿಸಿದ ಬೆನ್ನಲ್ಲೇ ಗುಜರಾತ್ ಕರಾವಳಿ ತೀರಕ್ಕೆ ವಾಯು ಚಂಡ ಮಾರುತದ ಭೀತಿ ಎದುರಾಗಿದ್ದು, ಆತಂಕ ಮೂಡಿಸಿದೆ.
ಹವಾಮಾನ ಇಲಾಖೆಯ ವರದಿಯಂತೆ ನಾಳೆ ಅಂದರೆ ಗುರುವಾರ ಗುಜರಾತ್ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದ್ದು, ಭಾರೀ ಹಾನಿ ಸೃಷ್ಠಿಸುವ ಭೀತಿ ಎದುರಾಗಿದೆ.
ವರದಿಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಗುಜರಾತ್ ಸರ್ಕಾರ, ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ತೀರದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯ ಆರಂಭಿಸಿದ್ದು, ಇಡಿಯ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ, ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಎಂತಹುದ್ದೇ ಸನ್ನಿವೇಶ ಎದುರಿಸಲು ಸಿದ್ದತೆ ನಡೆಸಲಾಗಿದೆ.
ವಾಯು ಚಂಡಮಾರುತ ಗುಜರಾತ್’ನ ವೆರವಲ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎನ್ನಲಾಗಿದೆ. ಕರಾವಳಿ ತೀರ ಹತ್ತಿರಾವಾಗುತ್ತಿದ್ದಂತೆಯೇ ವಾಯು ಚಂಡಮಾರುತದ ವೇಗ 17 ಕಿಮೀ ಹೆಚ್ಚಾಗಿದ್ದು ಕರಾವಳಿ ತೀರಕ್ಕೆ ಆಗಮಿಸುವಷ್ಟರ ಹೊತ್ತಿಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ.
ಗುರುವಾರ ಬೆಳಗ್ಗೆ ವಾಯು ಚಂಡಮಾರುತ 135ರಿಂದ 140 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಹೇಳಲಾಗಿದೆ.
Discussion about this post