ಕಲ್ಪ ಮೀಡಿಯಾ ಹೌಸ್
ಕೊರೋನಾ ಎರಡನೆಯ ಅಲೆಯ ಆರ್ಭಟದ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ಕಾಯಿಲೆ ಅಪರೂಪದ ಶಿಲೀಂಧ್ರ ಮೂಲದ ಸೋಂಕಿನಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಮಣ್ಣು, ಗೊಬ್ಬರ, ಸಸ್ಯ ಹಾಗೂ ಕೊಳೆಯುತ್ತಿರುವ ಹಣ್ಣು ತರಕಾರಿಗಳಲ್ಲಿ ಇರಬಹುದು. ಈ ಶಿಲೀಂಧ್ರ ಕಣ ಗಾಳಿಯಲ್ಲಿ ಸೇರಿಕೊಂಡು ಉಸಿರಾಡುವಾಗ ಮೂಗಿನ ಸೈನಸ್ ಮೂಲಕ ಕಣ್ಣು ಹಾಗೂ ಮೆದುಳನ್ನು ಸೇರುತ್ತದೆ. ಆಗ ಗಂಭೀರ ಪರಿಣಾಮ ಉಂಟಾಗಿ ಸೋಂಕಿತ ಭಾಗಗಳನ್ನು ಶಸ್ತ್ರ ಚಿಕಿತ್ಸೆಗೊಳಪಡಿಸಬೇಕಾಗಬಹುದು. ಇದು ಹೆಚ್ಚಾಗಿ ಕೊರೋನಾ ಪೀಡಿತ ಮಧುಮೇಹಿಗಳಲ್ಲಿ ಕಂಡುಬರುತ್ತದೆ. ಈ ಕೊರೋನಾ ರೋಗಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸ್ಟೀರಾಯ್ಡ್ ಮಾತ್ರೆಗಳನ್ನು ನೀಡುವುದರಿಂದ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು ಈ ಕಪ್ಪು ಶಿಲೀಂಧ್ರದ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ.
ಈ ಕಾಯಿಲೆಯ ಲಕ್ಷಣಗಳು:
1. ಮುಖದ ಒಂದು ಭಾಗ ಊದಿಕೊಳ್ಳುವುದು.
2. ವಿಪರೀತ ತಲೆ ನೋವು.
3. ಮೂಗು ಕಟ್ಟಿಕೊಳ್ಳುವುದು.
4. ಮೂಗಿನ ಮೇಲೆ ಅಥವಾ ಬಾಯಿಯ ಒಳಗೆ ಕಪ್ಪಾದ ಕಲೆ ಉಂಟುಗುವುದು.
5. ಹೆಚ್ಚಾದ ಜ್ವರ ಬರುವುದು.ಶ್ವಾಸಕಾಂಗದ ಸೋಂಕಿನ ಲಕ್ಷಣಗಳು:
ಕೆಮ್ಮು, ಜ್ವರ, ಎದೆ ನೋವು, ಉಬ್ಬಸ ಹಾಗೂ ಶ್ವಾಸೋಚ್ವಾಸಕ್ಕೆ ತೊಂದರೆ
ಚರ್ಮದ ಸೋಂಕಿನ ಲಕ್ಷಣಗಳು:
ಚರ್ಮದಲ್ಲಿ ದದ್ದು, ನೀರುಗುಳ್ಳೆ ಗಾಯ ಹಾಗೂ ಸೋಂಕಿತ ಭಾಗ ಕಪ್ಪಾಗುವುದು. ವಿಪರೀತ ನೋವು ಹಾಗೂ ಸೋಂಕಿತ ಭಾಗ ಊದಿಕೊಳ್ಳುವುದು.
ಪಚನಾಂಗದಲ್ಲಿ ಲಕ್ಷಣಗಳು:
ಹೊಟ್ಟೆ ನೋವು, ವಾಕರಿಕೆ, ವಾಂತಿ ಕೆಲವೊಮ್ಮೆ ರಕ್ತ ವಾಂತಿಯಾಗುವುದು. ಸೋಂಕು ಮೆದುಳನ್ನಾವರಿಸಿದಾಗ ಮಾನಸಿಕ ಅಸಮತೋಲನ ಉಂಟಾಗಿ ರೋಗಿಯು ಪ್ರಜ್ಞೆ ಕಳೆದುಕೊಳ್ಳುತ್ತಾನೆ.
ಈ ರೋಗದ ತಪಾಸಣೆಗಾಗಿ ಮೂಗಿನ ಒಳಪರೀಕ್ಷೆ(Nasal endoscopy) ಎನ್ನುವ ವಿಧಾನದಿಂದ ಕಿವಿ ಮೂಗು ಗಂಟಲು ಚಿಕಿತ್ಸೆಯ ವೈದ್ಯರು ಪರೀಕ್ಷಿಸಿ ರೋಗ ಪತ್ತೆ ಮಾಡುತ್ತಾರೆ. ಈ ಶಿಲೀಂಧ್ರ ಮೂಗಿನ ಸೈನಾಸ್‌ಗಳಲ್ಲಿ ವೃದ್ಧಿಯಾಗಿ ಶ್ವಾಸಾಂಗ ಮತ್ತು ಮೆದುಳಿಗೆ ಸೇರಿದರೆಮಾರಣಾಂತಿಕ ಖಾಯಿಲೆಯಾಗಿ ಪರಿಣಮಿಸುವುದು.
ಇದರ ಚಿಕಿತ್ಸೆಗಾಗಿ ಜೀವ ನಿರೋಧಕ ಔಷಧ Liposomal Amphotersin-B ಎನ್ನುವ ಚುಚ್ಚುಮದ್ದನ್ನು ಕೊಡಬೇಕಾಗುತ್ತದೆ. ರೋಗ ಪತ್ತೆ ಆದ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಬೇಕು. ಅಗತ್ಯವಿದ್ದಲ್ಲಿ ಕೆಲವೊಮ್ಮೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಹಾಗಾಗಿ ಈ ರೋಗದ ಚಿಕಿತ್ಸೆ ತುಂಬ ದುಬಾರಿಯಾಗಿದೆ. ಒಂದು ಬಾರಿಯ ಚುಚ್ಚುಮದ್ದಿಗೆ ಸರಿಸುಮಾರು ಏಳು ಸಾವಿರ ರೂಪಾಯಿಗಳನ್ನು ಭರಿಸಬೇಕಾಗುತ್ತದೆ. ಇಂತಹ ಚುಚ್ಚುಮದ್ದನ್ನು ದಿನಕ್ಕೆ ನಾಲ್ಕು ಬಾರಿ ಕೊಡಲಾಗುತ್ತದೆ. ಈ ಚಿಕಿತ್ಸೆಯನ್ನು 10-15 ದಿನಗಳವರೆಗೆ ನೀಡಬೇಕಾಗುವುದು. ರೋಗ ಉಲ್ಬಣ ಸ್ಥಿತಿಯಲ್ಲಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದು. ಹಾಗಾಗಿ ಸೋಂಕು ತಗುಲಿದ ಮಧುಮೇಹ ಪೀಡಿತರು ಆರಂಭದಲ್ಲೇ ಕಿವಿ ಮೂಗು ಗಂಟಲು ಸಂಬಂಧಿತ ತಜ್ಞ ವೈದ್ಯರ ಬಳಿ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆದಲ್ಲಿ ಮುಂಬರುವ ಶಸ್ತ್ರಚಿಕಿತ್ಸೆ ಅಥವಾ ಮಾರಣಾಂತಿಕ ಪರಿಸ್ಥಿತಿಯನ್ನು ತಪ್ಪಿಸಬಹುದು.
ಈ ಸೋಂಕು ರೋಗ ಪ್ರತಿ ಸಾವಿರದಲ್ಲಿ ಮೂರರಿಂದ ನಾಲ್ಕು ಜನರಿಗೆ ಬರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದರ ಮಾರಣ ಪ್ರಮಾಣ ಸೂಮಾರು ಶೇ 50ರಷ್ಟಿದೆ. ದೇಶದಲ್ಲಿ ಸಾವಿರದ ಗಡಿದಾಟಿರುವ ಈ ಸೋಂಕು ನಮಗೊಂದು ಎಚ್ಚರಿಕೆಯ ಗಂಟೆಯಂತಾಗಿದೆ. ಏಕೆಂದರೆ ಕೊರೊನಾದಿಂಧ ಪ್ರಾಥಮಿಕ ಸೋಂಕು ಉಂಟಾಗಿ ಸೆಕೆಂಡರಿ ಸೋಕಾಗಿ ಕಪ್ಪು ಶಿಲೀಂಧ್ರ ರೋಗ (Mucormycosis) ಉದ್ಬವಿಸಿ ದೃಷ್ಠಿದೋಷ ಹಾಗೂ ಸಾವಿನ ಅಪಾಯ ಹೆಚ್ಚಾಗುತ್ತಿದೆ. ಕೊರೋನಾ ವೈರಾಣು ರೂಪಾಂತಗೊಂಡು ಬಹಳ ಚುರಕಾಗಿದೆ. ಹಾಗಾಗಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಲಿವೆ.ದೆಹಲಿಗೆ ಸೀಮೀತವಾಗಿದ್ದ ಈ ಸಮಸ್ಯೆ ಪ್ರಸ್ತುತ ದಿನಗಳಲ್ಲಿ ಮಹಾರಾಷ್ಟ್ರ, ಗುಜರಾತ್, ಹರಿಯಾಣ, ಕರ್ನಾಟಕ ಸೇರಿದಂತೆ ದೇಶ ವ್ಯಾಪಿ ಹರಡುತ್ತಿದೆ. ನಮ್ಮ ರಾಜ್ಯದಲ್ಲೂ ಹಲವು ಪ್ರಕರಣಗಳು ವರದಿಯಾಗಿದ್ದು. ಮೊದಲಿಗೆ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ಕಾಣಿಸಿಕೊಂಡಿದ್ದ ಬ್ಲಾಕ್ ಫಂಗಸ್ ಸಮೂದಾಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಹಾಗಾಗಿ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆ ಮತ್ತಿತರ ಆರೋಗ್ಯ ರಕ್ಷಣಾ ವ್ಯವಸ್ಥೆ ಈ ಕಾಯಿಲೆಯನ್ನು ತೊಡೆದುಹಾಕಲು ಸಿದ್ದವಾಗಬೇಕಿದೆ.
ರಾಜ್ಯದಲ್ಲಿ ಬ್ಲಾಕ್ ಫಂಗಸ್ ಹಾವಳಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕಾರಣ ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನ ಬೌಂರಿಂಗ್ ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರ, ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ, ಮೈಸೂರಿನ ಎಂಎಂಸಿ, ಶಿವಮೊಗ್ಗದ ಸೀಮ್ಸ್, ಕಲ್ಬುರ್ಗಿಯ ಜೀಮ್ಸ್, ಹುಬ್ಬಳಿಯ ಕೀಮ್ಸ್, ಮಣಿಪಾಲದ ಕೆಎಂಸಿ ಈ ಎಲ್ಲಾ ಸಂಶೋಧನಾ ಕೇಂದ್ರಗಳನ್ನು ಪ್ರಾದೇಶಿಕ ಕಪ್ಪು ಶಿಲೀಂದ್ರ ಚಿಕಿತ್ಸಾ ಕೇಂದ್ರಗಳಾಗಿ ಸರ್ಕಾರ ಗುರುತಿಸಿದೆ. ಈ ಕೇಂದ್ರಗಳಲ್ಲಿ ಬ್ಲಾಕ್ ಫಂಗಸ್‌ನಿಂದ ಬಳಲುವರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ.
ಇತ್ತೀಚೆಗೆ ಕಪ್ಪು ಶಿಲೀಂಧ್ರದ ಕೆಲವು ಪ್ರಬೇಧಗಳನ್ನು ಗುರುತಿಸಲಾಗಿದೆ. ಇವುಗಳಿಂದ ದೇಹದ ಕೆಲವೊಂದು ಅಂಗಗಳಿಗೆ ಹಾನಿಯಾಗುತ್ತದೆ. ನ್ಯೂರೋಸೆಂಟ್ರಲ್ ಮ್ಯೂಕೋಮೈಕೋಸಿಸ್ ಇದು ಸೈನಾಸ್ ಹಾಗೂ ಮೆದುಳಿಗೆ ಸಂಬಂಧಿಸಿದ್ದು. ಅನಿಯಂತ್ರಿತ ಮಧುಮೇಹ ಹಾಗೂ ಮೂತ್ರಪಿಂಡ ಕಸಿ ಮಾಡಿಕೊಂಡವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
- ಪಲ್ಮನರಿ ಮ್ಯೂಕೋಮೈಕೋಸಿಸ್-ಶ್ವಾಸಕೋಶಕಕ್ಕೆ ಸಂಬಂಧಿಸಿದ್ದು. ಕ್ಯಾನ್ಸರ್ ಪೀಡಿತರಲ್ಲಿ ಹಾಗೂ ಅಂಗಾಂಗ ಕಸಿ ಮಾಡಿಕೊಂಡವರಲ್ಲಿ ಕಂಡುಬರುತ್ತದೆ.
- ಗ್ಯಾಸ್ಟ್ರೋಇನ್ಟಸ್ಟೈನಲ್-ಮ್ಯೂಕೋಮೈಕೋಸಿಸ್ ಜಠರ ಹಾಗೂ ಕರುಳಿನಲ್ಲಿ ಕಾಣಿಸಿಕೊಳ್ಳುತ್ತದೆ.
- ಕ್ಯೂಟೆನಿಯಸ್-ಮ್ಯೂಕೋಮೈಕೋಸಿಸ್ ಚರ್ಮದ ಸಮಸ್ಯೆಯನ್ನು ಉಂಟು ಮಾಡುತ್ತದೆ.
- ಡಿಸೆಮಿನೇಟೆಡ್-ಮ್ಯೂಕೋಮೈಕೋಸಿಸ್ ಹೃದಯ ಭಾಗ ಹಾಗೂ ಮೆದುಳಿಗೆ ತೊಂದರೆಯನ್ನುಂಟು ಮಾಡುತ್ತದೆ.
ಇವೆಲ್ಲವೂ ಅಪಾಯಕಾರಿ ಫಂಗಸ್ ಕಾಯಿಲೆಗಳು ಇದೇ ರೀತಿ ವೈಟ್ ಫಂಗಸ್ ಎಂಬ ವಿಭಿನ್ನ ರೀತಿಯ ಶಿಲೀಂಧ್ರವನ್ನು ಪಾಟ್ನಾದಲ್ಲಿ ಗುರುತಿಸಲಾಗಿದೆ. ಇದು ಬ್ಲಾಕ್ ಫಂಗಸ್‌ಗಿಂತ ಹೆಚ್ಚಿನ ಸಂಕಿರಣ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುವುದೆಂದು ಹೇಳಲಾಗಿದೆ. ಹಾಗಾಗಿ ಸಂಶೋಧನೆ ನಡೆಯುತ್ತಿದೆ.
ಈ ರೋಗದ ಮನ್ನೆಚ್ಚರಿಕಾ ಕ್ರಮಗಳು:
1. ಮಧುಮೇಹಿಗಳು ಕೊರೋನಾ ಚಿಕಿತ್ಸೆಯ ವೇಳೆ ಅನಾವಶ್ಯಕವಾಗಿ ಸ್ಟಿರಾಯ್ಡ್‌ಯುಕ್ತ ಔಪಧೋಪಚಾರ ಪಡೆಯಬಾರದು.
2. ವಿಪರೀತ ಸ್ಟಿರಾಯ್ಡ್ ಪಡೆದವರು ಗುಣಮುಖರಾಗಿ ಕೆಲವು ದಿನ ಐಸೋಲೇಷನ್‌ನಲ್ಲಿ ಇರುವುದು ಉತ್ತಮ.
3. ದೇಹಕ್ಕೆ ವ್ಯತರಿಕ್ತವೆನಿಸುವ ಸಸ್ಯ-ಗಿಡಗಳ ನಡುವೆ ಒಡಾಡುವುದು (ಉದಾ:ಪಾರ್ಥೆನಿಯಂ ನಂತಹ ಸಸ್ಯ) ಹೂವಿನ ಪರಿಮಳಗಳು, ವಾಹನ ಸಂದಣಿ ಹಾಗೂ ಧೂಳು ಮುಕ್ತ ಪರಿಸರದಲ್ಲಿ ವಾಸಿಸಬೇಕು.
4. ಮುದುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಪೌಷ್ಠಿಕ ಆಹಾರ ಸೇವನೆ.
5. ರಸ್ತೆ ಬದಿಯ ತಿಂಡಿತಿನಿಸುಗಳು ಹಾಗೂ ತಂಗಳು ಪದಾರ್ಥಗಳನ್ನು ಸೇವಿಸಬಾರದು.
6. ಮಲಗುವ ಹಾಸಿಗೆ ಮತ್ತು ಹೊದಿಕೆ ಶುಚಿಯಾಗಿರಲಿ ಒದ್ದೆ ಬಟ್ಟೆಗಳನ್ನು ಧರಿಸದಿರಿ.
7. ಬಿಸಿಯಾದ ಆಹಾರ ಹಾಗು ಕಾಯಿಸಿ ಆರಿಸಿದ ನೀರನ್ನು ಸೇವಿಸಬೇಕು.
8. ದಿನಕ್ಕೆ ಎರಡು ಬಾರಿ ಶುದ್ಧ ಬಿಸಿ ನೀರಿನಿಂದ ಹಬೆ ತಗೆದುಕೊಳ್ಳಬೇಕು.
ಕೊನೆ ಮಾತು:
ಕಾಯಿಲೆ ಲಕ್ಷಣಗಳು ಕಂಡುಬಂದ ತಕ್ಷಣ ತಜ್ಞ ವೈದರಿಂದ ತಪಾಸಣೆಗೆ ಒಳಗಾಗಿ ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಉದಾಸೀನವೇ ಮರಣಕ್ಕೆ ದಾರಿ ಮಾಡಿಕೊಡುವಂತಾಗಿದೆ. ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕಾಯಿಲೆ ಬಾರದದಂತೆ ತಡೆಗಟ್ಟುವ ಕಡೆ ಜನಸಾಮಾನ್ಯರು ಕಾರ್ಯಪ್ರವೃತ್ತರಾಗಬೇಕಿದೆ.
(ಲೇಖಕರು: ಸಿ.ಎಂ.ಓ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಪುರಲೆ ಶಿವಮೊಗ್ಗ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post