No Result
View All Result
PESITM hosts Mock CET 2026 to Strengthen KCET Preparation
English Articles

PESITM hosts Mock CET 2026 to Strengthen KCET Preparation

by ಕಲ್ಪ ನ್ಯೂಸ್
March 31, 2026
0

Kalpa Media House  |  Shivamogga  | PES Institute of Technology and Management #PESITM conducted Mock CET 2026 on March 30...

Read moreDetails
India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

India’s Trauma Care Push Gets a Boost as HOSMAT Launches Golden Hour Network At First-Of-Its-Kind Trauma Conclave

March 30, 2026
SWR to run special trains for Good Friday, Easter rush

SWR to run special trains for Good Friday, Easter rush

March 30, 2026
ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಪ್ರವೀಣ್ ಅಧಿಕಾರ ಸ್ವೀಕಾರ

South Western Railway | Praveen Takes Charge as Hubballi Divisional Public Relations Officer

March 28, 2026
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?

Critical Condition Turned Around with Timely Medical Intervention

March 27, 2026
  • Advertise With Us
  • Grievances
  • About Us
  • Contact Us
Thursday, April 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ವಿದ್ಯಾವಂತರಾದ ನಾವು ಏಕಿಷ್ಟು ಕ್ರೂರಿಗಳಾಗುತ್ತಿದ್ದೇವೆ? ಒಂದು ಕ್ಷಣ ನಿಮ್ಮಲ್ಲಿಯೇ ಈ ಪ್ರಶ್ನೆ ಕೇಳಿಕೊಳ್ಳಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 10, 2020
in Special Articles, Small Bytes
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅಮ್ಮಾ ಎಂಬ ಆ ಎರಡು ಅಕ್ಷರಕ್ಕೆ ಎಷ್ಟೊಂದು ಶಕ್ತಿ ಇದೆ ಅಲ್ವಾ… ಅಮ್ಮಾ ಎಂದರೆ ಪ್ರೀತಿಯ ಕಡಲು, ಮಮತೆಯ ಗಣಿ, ವಾತ್ಸಲ್ಯದ ತೊಟ್ಟಿಲು, ಜೀವನದ ದಿ ಬೆಸ್ಟ್‌ ಗಿಫ್ಟ್‌. ಅಮ್ಮನನ್ನು ವರ್ಣಿಸಲು ಯಾವ ಪದಮಾಣಿಕ್ಯದಿಂದಲೂ ಸಾಧ್ಯವಿಲ್ಲ. ತಾಯಿಯ ಪ್ರೀತಿಯನ್ನು ಅಳತೆ ಮಾಡಲು ಯಾವ ಮಾಪಕದಿಂದಲೂ ಆಗದು. ಅಮ್ಮನ ಪ್ರೀತಿಗೆ ಧನ್ಯವಾದ ಹೇಳಲು ದಿನದ ಅಗತ್ಯವಿಲ್ಲ. ಆದರೆ ತಾಯಿಂದಿರಿಗೆ ಎಂದೇ ಒಂದು ವಿಶೇಷ ದಿನವಿದೆ. ಅದುವೇ ವಿಶ್ವ ಅಮ್ಮಂದಿರ ದಿನ.

ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರವನ್ನು ವಿಶ್ವ ತಾಯಂದಿರ ದಿನ ಎಂಬುದಾಗಿ ಆಚರಿಸಲಾಗುತ್ತದೆ. ತಾಯಂದಿರ ದಿನವು ಮೊದಲು 1908ರಲ್ಲಿ ಅಮೆರಿಕಾದಲ್ಲಿ ಆರಂಭವಾಯಿತು. ಅಮೆರಿಕಾದ ಶಾಂತಿ ಕಾರ್ಯಕರ್ತೆಯಾಗಿದ್ದ ಅನಾ ಜಾರ್ವಿಸ್ ತನ್ನ ತಾಯಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದರು. ಆದರೆ ಅವರ ತಾಯಿ 1905ರಲ್ಲಿ ಮರಣ ಹೊಂದಿದರು. ತನ್ನ ತಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಅನಾ, ಮೇ ತಿಂಗಳ ಎರಡನೇ ಭಾನುವಾರವನ್ನು ಆಯ್ದುಕೊಂಡರು. ಬಳಿಕ ಆ ದಿನವನ್ನು ತಾಯಂದಿರ ದಿನವಾಗಿ ಆಚರಣೆ ಮಾಡಲು ಶುರು ಮಾಡಿದರು.

ಮೇ 9, 1914ರಂದು ಅಮೆರಿಕಾದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಪ್ರತಿ ವರ್ಷ ಮೇ ಎರಡನೇ ವಾರವನ್ನು ತಾಯಂದಿರ ದಿನವಾಗಿ ಆಚರಿಸಬೇಕು ಎಂಬ ಕಾನೂನನ್ನು ಜಾರಿಗೆ ತಂದರು. ಈ ಕಾನೂನು ಜಾರಿಗೆ ಬಂದ ನಂತರ ಅಮೆರಿಕಾ ರಾಷ್ಟ್ರದಾದ್ಯಂತ ತಾಯಂದಿರ ದಿನವನ್ನು ಆಚರಣೆ ಮಾಡಲಾಯಿತು. ನಂತರದಲ್ಲಿ ಭಾರತ ಸೇರಿದಂತೆ ಇನ್ನಿತರ ಹಲವಾರು ರಾಷ್ಟ್ರಗಳು ತಾಯಂದಿರ ದಿನವನ್ನು ಆಚರಿಸಲು ಮುಂದಾದವು.

ತಾಯಿಗೆ ನಮನ ಸಲ್ಲಿಸಲು ಯಾವ ದಿನದ ಅಗತ್ಯವೂ ಇಲ್ಲ. ಆದರೆ, ತಾಯಿಗಾಗಿ ಒಂದು ದಿನವನ್ನು ಮೀಸಲಿಟ್ಟು ತಾಯಿಗೆ ವಿಶೇಷವಾದ ಗೌರವವನ್ನು ಸಲ್ಲಿಸಲಾಗುತ್ತದೆ. ಲಂಡನ್‌ನಲ್ಲಿ ತಾಯಂದಿರ ದಿನವನ್ನು ಮಾರ್ಚ್ ತಿಂಗಳ ನಾಲ್ಕನೇ ಭಾನುವಾರದಂದು ಆಚರಿಸಲಾಗುತ್ತದೆ. ಗ್ರೀಸ್ ದೇಶದಲ್ಲಿ ಫೆಬ್ರವರಿ 2ರಂದು ಆಚರಿಸಲಾಗುತ್ತದೆ. ಈ ವರ್ಷ ಭಾರತದಲ್ಲಿ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಿ ತಾಯಂದಿರಿಗೆ ಗೌರವ ಸಲ್ಲಿಸಲಾಗುತ್ತದೆ.

ತಾಯಿಗೆ ಅದೆಷ್ಟೋ ಆಸೆಗಳಿರುತ್ತವೆ. ಆದರೆ ಆಕೆ ಅವನ್ನೆಲ್ಲಾ ಬದಿಗಿಟ್ಟು ಮಕ್ಕಳೇ ಸರ್ವಸ್ವ ಎಂದು ಬದುಕುತ್ತಾಳೆ. ಒಳ್ಳೆಯ ಮನಸ್ಸಿನಿಂದ ಒಬ್ಬ ಸ್ನೇಹಿತೆಯಾಗಿ, ಶಿಕ್ಷಕಿಯಾಗಿ, ಎಲ್ಲಾ ರೀತಿಯಲ್ಲೂ ತನ್ನ ಮಕ್ಕಳ ಮನದಲ್ಲಿ ಪ್ರೀತಿ ಸೇರಿದಂತೆ ಉದಾತ್ತ ಗುಣಗಳನ್ನು ಬೆಳೆಸುತ್ತಾಳೆ. ಆದರೆ ಮಕ್ಕಳು ಬೆಳೆಯುತ್ತಾ ಹೋದಂತೆ ತನ್ನದೇ ಆದ ಅಸ್ಥಿತ್ವಕ್ಕಾಗಿ ಹೋರಾಟ ಮಾಡುತ್ತಾರೆ. ಇದರ ನಡುವೆ ತನ್ನ ತಂದೆ ತಾಯಿಯನ್ನೇ ಮರೆತು ಬಿಡುತ್ತಾರೆ. ಹೆತ್ತವರನ್ನು ಕಡೆಗಣಿಸಿ ಬಿಡುತ್ತಾರೆ. ಕೊನೆಗೆ ವೃದ್ಧಾಶ್ರಮಕ್ಕೆ ಸೇರಿಸಿ ಬಿಡುತ್ತಾರೆ. ತಾಯಿ ಜೀವ ಎಲ್ಲವನ್ನೂ ಕ್ಷಮಿಸಿ ಬಿಡುತ್ತಾಳೆ. ಅದಕ್ಕೆ ಕಾರಣವಿಷ್ಟೇ ತನ್ನ ಕರುಳಿನ ಕುಡಿ ಎಂಬುದು.

ವಿದ್ಯಾವಂತರಾದ ನಾವು ಏಕಿಷ್ಟು ಕ್ರೂರಿಗಳಾಗುತ್ತಿದ್ದೇವೆ…? ಎಂಬುದ ಒಂದು ಕ್ಷಣ ಯೋಚಿಸಿ. ಇಂದು ಹೆಚ್ಚುತ್ತಿರುವ ವೃದ್ಧಾಶ್ರಮಗಳಿಗೆ ಯಾರು ಕಾರಣ ಎಂಬುದನ್ನು ಆಲೋಚಿಸಿ. ಜನ್ಮ ಮಾತ್ರವಲ್ಲ ಬದುಕನ್ನೇ ನೀಡಿದ ತಂದೆ ತಾಯಿಯನ್ನು ಕಡೆಗಣಿಸುವುದು ಎಷ್ಟರ ಮಟ್ಟಿಗೆ ಸರಿ? ಇಂದಿನ ಚಿಗುರೆಲೆ ನಾಳೆಯ ಹಣ್ಣೆಲೆ ಅಲ್ಲವೇ… ನಮಗೂ ನಾಳೆ ಅಂಥದ್ದೇ ಸ್ಥಿತಿ ಬಾರದು ಎಂದೇನಿಲ್ಲ. ಹಾಗಾಗಿ ತಂದೆ ತಾಯಿಯನ್ನು ಕಡೆಗಣಿಸದೆ ಪ್ರೀತಿಯಿಂದ ಒಗ್ಗೂಡಿ ಬಾಳಬೇಕು. ‘‘ತಾಯಿಗಿಂತ ಬಂಧುವಿಲ್ಲ. ಉಪ್ಪಿಗಿಂತ ರುಚಿಯಿಲ್ಲ’’ ಎಂಬ ಗಾದೆ ಮಾತೇ ಇದೆ. ದೊರೆತ ನಿಸ್ವಾರ್ಥ ಬಂಧುವಾದ ತಾಯಿಯ ಪ್ರೀತಿಗೆ ಚಿರಋಣಿಗಳಾಗಿರೋಣ.

ನಮ್ಮ ರಾಷ್ಟ್ರವನ್ನು ಕಾಯುತ್ತಿರುವ ಕೆಚ್ಚೆದೆಯ ವೀರ ಯೋಧರ ತಾಯಂದಿರಿಗೆ, ಇಂದಿನ ಪರಿಸ್ಥಿತಿಯಲ್ಲಿ ಕೊರೋನಾ ವಿರುದ್ಧ ತಮ್ಮ ಮಕ್ಕಳನ್ನು ದೂರವಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ತಾಯಂದಿರಿಗೆ, ಅದೇ ರೀತಿ ಮಕ್ಕಳೇ ಸರ್ವಸ್ವ ಎಂದು ಬದುಕುತ್ತಿರುವ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.


ದ್ವಿತೀಯ ಪತ್ರಿಕೋದ್ಯಮ
ವಿವೇಕಾನಂದ ಪದವಿ ಕಾಲೇಜು, ಪುತ್ತೂರು

Get in Touch With Us info@kalpa.news Whatsapp: 9481252093

Tags: AmericaKannadaNewsWebsiteLatestNewsKannadaMothers Dayಅಮೆರಿಕಾಅಮ್ಮಾಪುತ್ತೂರುವಿಶ್ವ ತಾಯಂದಿರ ದಿನಸೌಜನ್ಯ ಬಿ.ಎಂ. ಕೆಯ್ಯೂರು
Share202Tweet123Send
Previous Post

ತಬ್ಲಿಘಿ ಗಿಫ್ಟ್‌’ಗೆ ಬೆಚ್ಚಿಬಿದ್ದ ಶಿವಮೊಗ್ಗ: 9 ಮಂದಿಗೋಸ್ಕರ 18 ಲಕ್ಷ ಜನರಿಗೆ ಟೆನ್ಷನ್ ಯಾಕೆ?

Next Post

ಕೋವಿಡ್19 ಕುರಿತಂತೆ ಮೇ 12ರಂದು ಎಲ್ಲ ಸಿಎಂಗಳ ಜೊತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್‌

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಲಾಕ್ ಡೌನ್ ವಿಸ್ತರಣೆ ಬಹುತೇಕ ಖಚಿತ: ಪ್ರತಿಪಕ್ಷಗಳ ಒಪ್ಪಿಗೆ

ಕೋವಿಡ್19 ಕುರಿತಂತೆ ಮೇ 12ರಂದು ಎಲ್ಲ ಸಿಎಂಗಳ ಜೊತೆ ಪ್ರಧಾನಿ ವೀಡಿಯೋ ಕಾನ್ಫರೆನ್ಸ್‌

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸೇರಿದ ವಿಶ್ವಕಪ್ ವಿಜೇತ ನಾಯಕಿ ನಿಕಿ ಪ್ರಸಾದ್!

April 1, 2026
ಬೆಂಗಳೂರು ಎಫ್‌ಸಿ ತಂಡಕ್ಕೆ ಸಾವಿಯೊ ಮೆಡೈರಾ ಸೇರ್ಪಡೆ

ಬೆಂಗಳೂರು ಎಫ್‌ಸಿ ತಂಡಕ್ಕೆ ಸಾವಿಯೊ ಮೆಡೈರಾ ಸೇರ್ಪಡೆ

April 1, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಬೆಂಗಳೂರು-ಹುಬ್ಬಳ್ಳಿ, ಬೀದರ್, ಮುಂಬೈ ಸೇರಿ 28 ರೈಲುಗಳ ಸಂಚಾರದಲ್ಲಿ ವ್ಯತ್ಯಯ

April 1, 2026
ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ

ಕೋಟಕ್ ಮಹೀಂದ್ರಾ ಬ್ಯಾಂಕ್ ನಾಯಕತ್ವ ಬದಲಾವಣೆ | ಸಿಇಓ ಆಗಿ ಸೂರಜ್ ರಾಜಪ್ಪನ್ ನೇಮಕ

April 1, 2026
SWR to run special trains for Good Friday, Easter rush

ತಿರುಚ್ಚಿರಾಪಳ್ಳಿ-ಬೆಂಗಳೂರು ನಡುವೆ ವಿಶೇಷ ಎಕ್ಸ್’ಪ್ರೆಸ್ ರೈಲು | ಇಲ್ಲಿದೆ ಡೀಟೇಲ್ಸ್

April 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL