ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೆಲವೊಂದು ವಿಚಾರ ದುಃಖ ತಂದರೂ ಅದರ ಹಿಂದೆ ಸುಖ ಇರುತ್ತದೆ. ಕೊರೋನಾ ಭಾರತವನ್ನೂ ಸೇರಿದಂತೆ ಇಡೀ ಜಗತ್ತನ್ನೇ ಮಾನಸಿಕ, ದೈಹಿಕ, ಆರ್ಥಿಕವಾಗಿ ಬರ್ಬರಗೊಳಿಸಿ ಬಿಟ್ಟಿದೆ. ಸದ್ಯಕ್ಕೆ ತಲೆ ಎತ್ತದಂತೆ ಮಾಡಿದೆ ಈ Lockdown ವ್ಯವಸ್ಥೆ ಮತ್ತು ಅದರಿಂದ ಆರ್ಥಿಕ ಸ್ಥಿತಿಯ ಹೊಡೆತ. ಇದು ಭಾರತಕ್ಕೂ ಅನ್ವಯವೇ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ ಭಾರತದ ಚೇತರಿಕೆ ಬಹಳ ವೇಗ ಪಡೆಯುತ್ತದೆ. ಅಂದರೆ ಭಾರತೀಯರಲ್ಲಿ ಇಮ್ಯುನಿಟಿ ಪವರ್ ಜಾಸ್ತಿ. ಕೇವಲ ರೋಗ ವಿಚಾರಕ್ಕೇ ಅಲ್ಲ, ಆರ್ಥಿಕ ಹೊಡೆತದಿಂದ ಚೇತರಿಕೊಳ್ಳಲೂ ಶಕ್ತಿ ಇದೆ.
ಅದು ಹೇಗೆ?
ಭಾರತದಲ್ಲಿ ಒಬ್ಬ ಇಂಜಿನಿಯರ್’ಗೆ ಸ್ವೀಪರ್ ಕೆಲಸ ಮಾಡಲೂ ಗೊತ್ತು. ಅಡುಗೆ ಮಾಡಲೂ ಗೊತ್ತು.
ಒಬ್ಬ ವೈದ್ಯರಿಗೂ ಇದೇ knowledge ಇರುತ್ತದೆ. ಇಲ್ಲಿನ ಸಕಲ ಕರ್ಮಗಳ ಜನರಿಗೂ ಅವರು ಮಾಡುವ ಕರ್ಮಗಳಲ್ಲದೆ ಬದುಕುವ ದಾರಿ ಗೊತ್ತಿದೆ. ಆದರೆ ವಿಶ್ವದ ಇತರ ಅಭಿವೃದ್ಧಿ ರಾಷ್ಟ್ರಗಳ ಜನರಿಗೆ ಅವರವರ ವೃತ್ತಿ ಕರ್ಮ ಬಿಟ್ಟರೆ ಬೇರೆ ಗೊತ್ತಿಲ್ಲ. ಭಾರತದ ಒಬ್ಬ ದೊಡ್ಡ ಹೊಟೇಲ್ ಮಾಲಿಕನಿಗೆ ಅಡುಗುಗೆ, ಪಾತ್ರೆ ತೊಳೆಯುವಿಕೆ, ಬಡಿಸುವಿಕೆಗಳೂ ಗೊತ್ತಿರುತ್ತದೆ. ಆದರೆ ವಿದೇಶಿಗಳಿಗೆ ಈ ಸ್ವರೂಪದ ಕರ್ಮ ನಿಪುಣತೆ ಗೊತ್ತಿಲ್ಲ. ಅಲ್ಲದೆ ಭಾರತವು ಭೂ ಲೋಕದ ಕರ್ಮಭೂಮಿ. ಇಲ್ಲಿನ ಸಕಲ ಕರ್ಮಗಳೂ ಉತ್ಕೃಷ್ಟವೇ.
ಇಂತಹ ಸ್ಥಿತಿಯಲ್ಲಿ ಇಡೀ ಜಗತ್ತು ಸ್ಥಬ್ಧವಾಗಿದೆ. ಮತ್ತೆ ಎಚ್ಚರವಾದಾಗ ವಿದೇಶಿಗಳು ಬೇರೆ ಬೇರೆ ಕರ್ಮಗಳಿಗೆ ಬೇರೆ ಬೇರೆ ಜನರನ್ನು ಹುಡುಕಬೇಕಾಗುತ್ತದೆ. ಭಾರತದಲ್ಲಿ ವಿಭಿನ್ನ. ಪೂಜೆ ಮಾಡುವವನು ದೇವರ ನೈವೇದ್ಯವನ್ನೂ ಮಾಡುತ್ತಾನೆ. ಅರ್ಚನೆಯೂ ಮಾಡುತ್ತಾನೆ. ಕಸ ಗುಡಿಸಿ ಶುದ್ಧೀಕರಣಕ್ಕೂ ಇಳಿಯುತ್ತಾನೆ. ನೀವು ಎಲ್ಲಾದರೂ ವಿದೇಶದಲ್ಲಿ ಸ್ವಯಂಸೇವಕರಾಗಿ ಸ್ವಚ್ಛತೆಗೆ ಇಳಿದದ್ದು ನೋಡಿದ್ದೀರಾ? ಅವರೇನಿದ್ದರೂ ಯಂತ್ರೋಪಕರಣ, ಆಳುಗಳ ಮೂಲಕವೇ ಸ್ವಚ್ಛತೆಗೆ ಇಳಿಯಬೇಕಷ್ಟೆ.
ಇಂತಹ ಚತುರರ ದೇಶವಾದ ಭಾರತವು ಮತ್ತೆ ಚೇತರಿಸಿಕೊಳ್ಳಲು ದೀರ್ಘಾವಧಿ ಬೇಡ. ಹಾಗಾಗಿ ಈ ಕೊರೋನಾ ದುರ್ಗತಿಯ ಮೊದಲು ಮೇಲೇಳುವುದೇ ಭಾರತ. ಆಗ ಯಾರೂ ಕೇಳಬೇಕಾಗಿಲ್ಲ ಭಾರತ ವಿಶ್ವಗುರು ಆಗಬಹುದೇ ಎಂದು ನೋಡ್ತಾ ಇರಿ. ದೇವಾದಿ ದೇವತೆಗಳ ಈ ಭರತ ಭೂಮಿಯಲ್ಲಿ ಎಷ್ಟು ಬೇಗ ಚೇತರಿಸಿಕೊಂಡು ಇಡೀ ಪ್ರಪಂಚಕ್ಕೇ ವಿಶ್ವಗುರು ಆಗುತ್ತದೆ ಎಂದು. ಒಂದು ವೇಳೆ ಈ ಸಮಯದಲ್ಲಿ ಕಾಂಗ್ರೆಸಿನಂತಹ ಪಕ್ಷ, ಕಮ್ಯುನಿಸ್ಟ್’ನಂತಹ ಪಕ್ಷ, ರಾಹುಲನಂತಹ ನಾಯಕರು ಇರುತ್ತಿದ್ದರೆ ಈ ಲೇಖನವನ್ನು ಬರೆಯುತ್ತಲೂ ಇರಲಿಲ್ಲ, ಬರೆದಿದ್ದರೂ ಸುಳ್ಳಾಗುತ್ತಿತ್ತು.
ಮೋದಿಯಂತಹ ತಾಳ್ಮೆ, ಸಂಯಮ, ಭಾವನೆಗಳಿಗೆ ಸ್ಪಂದನಾತ್ಮಕ ಕ್ರಿಯೆ ನೀಡುವ ಮಹಾನ್ ಗುಣ ಹೊಂದಿರುವ ನಾಯಕನಲ್ಲಿ ಪೂರ್ಣ ವಿಶ್ವಾಸ ಇಡಬಹುದು. ಶಾರ್ವರಿ ಸಂವತ್ಸರ ಹೊಸ ಬೆಳಕನ್ನು ನೀಡಲಿದೆ.
Get in Touch With Us info@kalpa.news Whatsapp: 9481252093
Discussion about this post