Read - < 1 minute
ಚೆನ್ನೈ, ಸೆ.7: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ನೀಡಿರುವ ನಿರ್ದೇಶನ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಯಾಕಂದ್ರೆ ರಾಜ್ಯದ ಜನರಿಗೇ ಕುಡಿಲಿಕ್ಕೆ ನೀರಿಲ್ಲ. ಹಾಗಾಗಿ ಹನಿ ನೀರೂ ಬಿಡಲ್ಲ ಅಂತಾ ಜನ ಪಟ್ಟು ಹಿಡಿದಿದ್ದಾರೆ.
ಆದರೆ ಸುಪ್ರೀಂ ನೀಡಿರುವ ನಿರ್ದೇಶನದಂತೆ ಆ ನೀರೂ ಕಡಿಮೆ ಆಯಿತು. ಹಾಗಾಗಿ ಇನ್ನೂ ಹೆಚ್ಚಿನ ನೀರು ಕೇಳುವಂತೆ ತಮಿಳುನಾಡು ಸರ್ಕಾರವನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಒತ್ತಾಯಿಸಿದ್ದಾರೆ.
ಸುಪ್ರೀಂ ಕೋರ್ಟ್ ಕೇವಲ 15 ಸಾವಿರ ಕ್ಯೂಸೆಕ್ ನೀರನ್ನು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಆ ನೀರು ತಮಿಳುನಾಡಿಗೆ ಸಾಕಾಗಲ್ಲ. ಇನ್ನಷ್ಟು ನೀರು ಬಿಡುವಂತೆ ಸರ್ಕಾರ ಆಗ್ರಹಿಸಬೇಕಿದೆ ಎಂದು ಕರುಣಾನಿಧಿ ಹೇಳಿದ್ದಾರೆ.
ಕರ್ನಾಟಕದಲ್ಲೇ ನೀರಿಲ್ಲ. ಹಾಗಾಗಿ ಸುಪ್ರೀಂ ತೀರ್ಪು ವಿರೋಧಿಸಿ ರೈತರು ಬೀದಿಗಿಳಿದಿದ್ದಾರೆ. ಈ ಮಧ್ಯೆ ಡಿಎಂಕೆ ಹೆಚ್ಚು ಪ್ರಮಾಣದ ನೀರು ಬಿಡುವಂತೆ ಆಗ್ರಹಿಸುತ್ತಿರುವುದು ಕರ್ನಾಟಕದ ರೈತರಲ್ಲಿ ಮತ್ತಷ್ಟು ಆಕ್ರೋಶ ತರಿಸಿದೆ.
ಸುಪ್ರೀಂ ಪ್ರಕಾರ ತಮಿಳುನಾಡಿಗೆ ಕೇವಲ 13 ಟಿಎಂಸಿ ನೀರು ಮಾತ್ರ ಸಿಗಲಿದೆ. ಆದರೆ ತಮಿಳುನಾಡಿಗೆ 200 ಟಿಎಂಸಿ ನೀರಿನ ಅವಶ್ಯಕತೆ ಇದೆ. ಅದಕ್ಕಾಗಿ ಆಡಳಿತಾರೂಢ ಎಐಎಡಿಎಂಕೆ ಮತ್ತೆ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ಕರುಣಾನಿಧಿ ಆಗ್ರಹಿಸಿದ್ದಾರೆ.
ಪ್ರತಿದಿನ 15,000 ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಪ್ರತಿಭಟನೆ ಜೋರಾಗಿದೆ.
Discussion about this post