ನವದೆಹಲಿ, ಅ.3: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಆಗುತ್ತಿರುವ ಅನ್ಯಾಯದ ಪ್ರಮುಖ ಸೂತ್ರದಾರ ರಾಜ್ಯದ ಪರ ವಕೀಲ ಫಾಲಿ ಎಸ್. ನಾರಿಮನ್ ಇನ್ನು ಮುಂದೆ ರಾಜ್ಯದ ಪರ ವಾದ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ನಾರಿಮನ್, ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ನನ್ನ ಮಾತು ಕೇಳುತ್ತಿಲ್ಲ. ಹೀಗಾಗಿ, ನಾನು ವಾದ ಮಾಡಲು ಬಯಸುವುದಿಲ್ಲ. ಇನ್ನು ಮುಂದೆ ಕರ್ನಾಟಕದ ಪರ ನಾನು ವಕಾಲತ್ತು ವಹಿಸುವುದಿಲ್ಲ ಎಂದಿದ್ದಾರೆ.
ಸರ್ಕಾರದ ಪರವಾಗಿ ನಾರಿಮನ್ ಮನೆಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಕಟು ಶಬ್ದಗಳಿಂದ ತಿಳಿಸಿರುವ ನಾರಿಮನ್, ಕಲಾಪದಲ್ಲಿ ಆಡಿದ ಮಾತುಗಳಿಂದ ಬೇಸರವಾಗಿದೆ. ಇನ್ನು ನಾನು ಕರ್ನಾಟಕದ ಪರ ವಾದಿಸುವುದಿಲ್ಲ. ಇನ್ನು ಮುಂದೆ ನನ್ನ ಮನೆ ಗೇಟ್ಗೆ ಬರುವುದು ಬೇಡ. ನನ್ನ ಮನೆಗೆ ಬರುವುದು ಬೇಡ ಎಂದು ಅವರಿಗೆ ಹೇಳಿ ಎಂದು ಹೇಳಿರುವುದಾಗಿ ವರದಿಯಾಗಿದೆ.
ರಾಜ್ಯದಿಂದ ಕೋಟ್ಯಾಂತರ ರೂ. ಸಂಭಾವನೆ ಪಡೆದು, ಇದುವರೆಗೂ ತಮಿಳುನಾಡಿಗೆ ಪರವಾಗಿ ಪರೋಕ್ಷವಾದ ಮಂಡಿಸಿರುವ ನಾರಿಮನ್ ಕೆಲಸಕ್ಕೆ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರೊಂದಿಗೆ ನಾರಿಮನ್ ಅವರ ಈ ಮಾತು ರಾಜ್ಯದ ಜನರನ್ನು ಕೆರಳಿಸಿದೆ.
Discussion about this post