Saturday, June 14, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ಭಾರತ-ರಷ್ಯಾ ನಡುವೆ 16 ಮಹತ್ವದ ಒಪ್ಪಂದಗಳಿಗೆ ಸಹಿ

October 15, 2016
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 2 minutes
ಗೋವಾ, ಅ.15: ರಷ್ಯಾ ಹಾಗೂ ಭಾರತದ ನಡುವೆ ರಕ್ಷಣೆ, ಶಿಕ್ಷಣ ಸೇರಿಂದತೆ ವಿವಿಧ ಕ್ಷೇತ್ರತ್ರಗಳ 16 ಒಪ್ಪಂದಗಳಿಗೆ ಶನಿವಾರ ಉಭಯ ದೇಶಗಳು ಸಹಿ ಮಾಡಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆ ವೇಳೆ ಒಪ್ಪಂದಗಳಿಗೆ ಅಂಕಿತ ನೀಡಲಾಗಿದ್ದು, ಉಭಯ ನಾಯಕರು ಸಹಿ ಹಾಕಿದ್ದಾರೆ.
* 2 ದೇಶಗಳ ನಡುವೆ  ಎಸ್ -400 ವಾಯು ರಕ್ಷಣಾತ್ಮಕ ವ್ಯವಸ್ಥೆ ಹಾಗೂ 1,135ನೇ ಸರಣಿಯ ಯುದ್ಧ ನೌಕೆಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲು ಒಪ್ಪಂದ.
* 200 ಕಮೊವ್ ಹೆಲಿಕಾಪ್ಟರ್ ಗಳ ಸರಣಿಯ ಕೆಎ – 226 ಟಿ ಹೆಲಿಕಾಪ್ಟರ್ಗಳ ಜಂಟಿಯಾಗಿ ನಿರ್ಮಿಸಲು 1 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ.
* 1 ಬಿಲಿಯನ್ ಡಾಲರ್  ಹೂಡಿಕೆ ಸಂಬಂಧ  ಒಪ್ಪಂದ.
* ಹರಿಯಾಣ, ಆಂಧ್ರ ಪ್ರದೇಶ ಸೇರಿದಂತೆ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಹಾಗೂ ಕೆಲ ನಗರಗಳ ನಡುವೆ ಸಂಪರ್ಕ ಸಾಧನದ ಸಂಬಂಧ ಒಪ್ಪಂದ.
*ಭಾರತ ಹಾಗೂ ರಶ್ಯಾ ನಡುವೆ ಜಂಟಿ ಅನಿಲ  ನಿರ್ಮಾಣಕ್ಕೆ ಒಪ್ಪಂದ.
*ಪ್ರತ್ಯೇಕ ಒಪ್ಪಂದವೊಂದರ ಪ್ರಕಾರ, ರಷ್ಯಾ ಸರ್ಕಾರಿ ಸ್ವಾಮ್ಯದ ಇಂಧನ ದೈತ್ಯ ರಾಸ್ನೆಫ್ಟ್  ತೈಲ ಕಂಪನಿ ಮತ್ತು  ಟ್ರಾಫಿಗುರಾ, ಖಾಸಗಿ ಹೂಡಿಕೆದಾರರ  ಯುನೈಟೆಡ್ ಕ್ಯಾಪಿಟಲ್ ಪಾರ್ಟನರ್ ಗುಂಪುಗಳು ಎಸ್ಸಾರ್ ತೈಲ ಕಂಪನಿಯ ಶೇ.98 ಷೇರುಗಳ ಖರೀದಿ ಒಪ್ಪಂದ (10.9 ಬಿಲಿಯನ್ ಡಾಲರ್ ಮೊತ್ತದ ಷೇರು).
* ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಶಿಕ್ಷಣ, ಹಾಗೂ ತರಬೇತಿಗೆ ಒಎನ್ಜಿಸಿ ವಿದೇಶ್ ಜತೆಗೆ ರಾಸ್ನೆಪ್ಟ್ ಒಪ್ಪಂದ
* 2 ದೇಶಗಳ ನಡುವೆ ರೈಲ್ವೆ ಅಭಿವೃದ್ಧಿ ಹಾಗೂ ಸಿಕಂದರಾಬಾದ್-ನಾಗ್ಪುರ ನಡುವಿನ ರೈಲುಗಳ ವೇಗ ಹೆಚ್ಚಿಸಲು ಸಹಕಾರ ಒಪ್ಪಂದ
* ಭಾರತದ ಇಸ್ರೋ ಹಾಗೂ ರಶ್ಯಾದ ಅಂತರಿಕ್ಷ ಸಂಸ್ಥೆ ಸಹಯೋಗದೊಂದಿಗೆ ಕಾರ್ಯನಿರ್ವಹಣೆ
* ಭಾರತ ಹಾಗೂ ರಷ್ಯಾ ನಡುವೆ ದ್ವಿಪಕ್ಷೀಯ ಹಾಗೂ ಆರ್ಥಿಕ ಸಹಕಾರ ಒಪ್ಪಂದ
*ರಷ್ಯಾ – ಭಾರತ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷಗಳ ಆಚರಣೆಯಾಗಿದ್ದು, ಇದೇ ವೇಳೆ ಮಾರ್ಗಸೂಚಿ ಘೋಷಣೆ
*ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ 2 ದೇಶಗಳ ನಡುವೆ ಸಹಕಾರ. ರಷ್ಯಾ ಹಾಗೂ ಭಾರತ ಹಳೆಯ ಮಿತ್ರರಾಗಿದ್ದು, 2 ದೇಶಗಳ ಸಾಮರ್ಥ್ಯ ದ ವೃದ್ಧಿಗೆ ಸೌಹಾರ್ಧಯುತವಾದ ಸಂಬಂಧವನ್ನು ಮುಂದುವರಿಸುವುದು.
ಭಯೋತ್ಪಾದಕರು, ಅವರ ಬೆಂಬಲಿಗರತ್ತ ಶೂನ್ಯ ಸಹನೆ ಅಗತ್ಯ : ಮೋದಿ – ಪುಟಿನ್
ಭಯೋತ್ಪಾದಕರು ಮತ್ತು ಅವರ ಬೆಂಬಲಗರ ಬಗ್ಗೆ `ಶೂನ್ಯ ಸಹನೆ’ ಯ ಅಗತ್ಯವಿದೆ ಎಂದು ಭಾರತ ಮತ್ತು ರಷ್ಯಾ ಶನಿವಾರ ದೃಢವಾಗಿ ಹೇಳಿವೆ. ಇದಕ್ಕೆ ಮೊದಲು ಪಾಕಿಸ್ಥಾನದಿಂದ ಉಗಮಿಸುವಂತದ್ದೂ ಸೇರಿದಂತೆ ಭಯೋತ್ಪಾದನೆ  ಬಗ್ಗೆ ತಾವು ನಡೆಸಿದ ಮಾತುಕತೆ ವೇಳೆ ಉರಿ ದಾಳಿಯನ್ನು ರಷ್ಯಾ ಸ್ಪಷ್ಟವಾಗಿ ಖಂಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಪ್ರಶಂಸೆಯನ್ನು ರಶ್ಯಾದ ಅಧ್ಯಕ್ಷ ವ್ಲಾರಿಮಿರ್ ಪುಟಿನ್ ಗೆ ತಿಳಿಸಿದ್ದರು.
ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬೇಕಾದ ಅಗತ್ಯದ ಬಗ್ಗೆ ರಶ್ಯಾದ ಸುಸ್ಪಷ್ಟ  ನಿಲುವು ನಮ್ಮ ನಿಲುವನ್ನೇ ಪ್ರತಿಫಲಿಸುತ್ತದೆ. ನಮ್ಮ ಇಡೀ ಪ್ರದೇಶಕ್ಕೆ ಬೆದರಿಕೆ ಒಡ್ಡುತ್ತಿರುವ ಗಡಿಯಾಚೆಯ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಕೈಗೊಂಡಿರುವ ಕ್ರಮಗಳನ್ನು ರಶ್ಯಾ ಅರ್ಥಮಾಡಿಕೊಂಡು ಬೆಂಬಲಿಸಿರುವುದನ್ನು ನಾವು ಬಹುವಾಗಿ ಪ್ರಶಂಸಿಸುತ್ತೇವೆ. ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿಷಯದಲ್ಲಿ ಶೂನ್ಯ ಸಹನೆಯ ಅಗತ್ಯವನ್ನು ನಾವಿಬ್ಬರೂ ದೃಢವಾಗಿ ಸಾರಿದ್ದೇವೆ’ ಎಂದು ಇಲ್ಲಿ ತಮ್ಮ ವಾರ್ಷಿಕ ಶೃಂಗಸಭೆಯ ನಂತರ ಪುಟಿನ್ ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮೋದಿ ಹೇಳಿದರು.
ಮಾತುಕತೆ ವೇಳೆ ಪಾಕಿಸ್ಥಾನದಿಂದ ಉಗಮಿಸುವ ಗಡಿಯಾಚೆಯ ಭಯೋತ್ಪಾದನೆ ವಿಷಯ ಪ್ರಸ್ತಾಪವಾಯಿತೆ ಎಂದು ಕೇಳಿದಾಗ, ಉರಿ ದಾಳಿ ಮತ್ತು ಭಯೋತ್ಪಾದಕ ದಾಳಿಗೆ ಪಾಕಿಸ್ಥಾನ ಬೆಂಬಲ ನೀಡಿರುವ ವಿಚಾರ ಚರ್ಚೆಯಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿದರು.
ಭಯೋತ್ಪಾದನೆ ಹಿಂದಿನ ಚಾಲನಾ ಶಕ್ತಿಗಳ ಬಗ್ಗೆ ಪ್ರಧಾನಿ ಏರ್ಪಡಿಸಿರುವ ಭೋಜನ ಕೂಟದಲ್ಲಿ ಮೋದಿ ಮತ್ತು ಪುಟಿನ್ ನಡುವೆ ಇನ್ನೂ ವಿವರವಾಗಿ ಚರ್ಚೆ ನಡೆಯಲಿದೆ ಎಂದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ನಿಕವಟಾಗಿ ಸಹಕರಿಸುತ್ತಿವೆ ಎಂದು ಪುಟಿನ್ ಹೇಳಿದರು.
ಭಾರತದೊಂದಿಗೆ ವಿಶೇಷ ಮತ್ತು ಸ್ವತಂತ್ರ ವ್ಯೂಹಾತ್ಮಕ ಪಾಲುದಾರಿಕೆಗೆ ರಶ್ಯಾದ ಬದ್ಧತೆ ಮುಂದುವರಿಯುವುದೆಂದು ಅಧ್ಯಕ್ಷ ಪುಟಿನ್ ಮರು ದೃಢೀಕರಿಸಿದರಲ್ಲದೆ ಭಯೋತ್ಪಾದನೆ ವಿರುದ್ಧದ ಸಮರದಂತಹ ವಿಷಯಗಳಲ್ಲಿ ಉಭಯ ದೇಶಗಳ ಸಮಾನ ನಿಲುವುಗಳನ್ನು ಬೊಟ್ಟು ಮಾಡಿದರು. ಉರಿಯಲ್ಲಿನ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ರಷ್ಯಾ ಸ್ಪಷ್ಟವಾಗಿ ಖಂಡಿಸಿರುವುದಕ್ಕೆ ಭಾರತ ತನ್ನ ಪ್ರಶಂಸೆಯನ್ನು ಸೂಚಿಸಿತು ಎಂದು ಮಾತುಕತೆ ನಂತರ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸರಕಾರಿ ನೀತಿಯ ವಿಷಯವಾಗಿ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮತ್ತು ಕಾರ್ಯಗತಗೊಳಿಸುವ ದೇಶವಾದ ಪಾಕಿಸ್ಥಾನದೊಂದಿಗೆ ರಷ್ಯಾ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿರುವುದಕ್ಕೆ ತನ್ನ ವಿರೋಧವನ್ನು ತಿಳಿಯಪಡಿಸಿದ ಭಾರತವು ರಷ್ಯಾ ತನ್ನ ಹಿತಾಸಕ್ತಿಗಳನ್ನು ಅರಿತುಕೊಳ್ಳುತ್ತಿರುವುದರ ಬಗ್ಗೆ ತನಗೆ ಸಂತೃಪ್ತಿಯಾಗಿದೆ ಎಂದೂ ಭಾರತ ಹೇಳಿದೆ.
ಭಾರತದ ಹಿತಾಸಕ್ತಿಯನ್ನು ರಷ್ಯಾ ತಿಳಿದುಕೊಂಡಿರುವುದಕ್ಕೆ ನಮಗೆ ತೃಪ್ತಿಯಾಗಿದೆ. ಭಾರತದ ಹಿತಾಸಕ್ತಿಗೆ ವಿರುದ್ದವಾಗಿ ಯಾವುದನ್ನು ಅವರು ಎಂದಿಗೂ ಮಾಡಬಲಾರರು. ಈ ವಿಷಯದಲ್ಲಿ ಮನಸ್ಸುಗಳು ಬಲವಾಗಿ ಬೆಸೆದಿವೆ ಎಂದು ನಾನು ಭಾವಿಸುತ್ತೇನೆ ಎಂದು ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹೇಳಿದರು. ಇತ್ತೀಚೆಗೆ ನಡೆದ ಪಾಕ್ – ರಷ್ಯಾ ಜಂಟಿ ಮಿಲಿಟರಿ ಸಮರಾಭ್ಯಾಸ ಬಗ್ಗೆ ಭಾರತದ ಕಳವಳಕ್ಕೆ ರಷ್ಯಾದ ಪ್ರತಿಕ್ರಿಯೆ ಬಗ್ಗೆ ಅವರನ್ನು ಕೇಳಲಾಗಿತ್ತು.
ಎಲ್ಲಾ ರೂಪದ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದ ಮೋದಿ ಮತ್ತು ಪುಟಿನ್, ಅವರ ನಿಗ್ರಹಕ್ಕೆ ಸಮಗ್ರ ಅಂತರ್ರಾಷ್ಟ್ರೀಯ ಸಹಭಾಗಿತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದರೆಂದು ಜಂಟಿ ಹೇಳಿಕೆ ತಿಳಿಸಿದೆ.
Previous Post

ಉಡುಪಿ ಪೇಜಾವರ ಮಠದ ವೆಬ್ ಸೈಟ್ ಪಾಕಿಸ್ಥಾನದಿದ ಹ್ಯಾಕ್ ?

Next Post

ಅಮೆರಿಕಾ ಸಂಶೋಧಕ ಪ್ರಯತ್ನದ ಫಲ ಎಚ್ಐವಿ ಚಿಕಿತ್ಸೆಗೆ ಔಷಧಿ ಲಭ್ಯ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಮೆರಿಕಾ ಸಂಶೋಧಕ ಪ್ರಯತ್ನದ ಫಲ ಎಚ್ಐವಿ ಚಿಕಿತ್ಸೆಗೆ ಔಷಧಿ ಲಭ್ಯ?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತ ಹಿಂದೆಂದಿಗಿಂತಲೂ ಶಕ್ತಿಯುತ | ಸಂಸದ ರಾಘವೇಂದ್ರ ಹರ್ಷ

June 14, 2025

ಕ್ಯಾನ್ಸರ್ ಬಾದಿತ ಮಕ್ಕಳಿಗೆ ಸರ್ಕಾರದಿಂದಲೇ ಚಿಕಿತ್ಸೆಗೆ ಸಹಕಾರ: ಮಧು ಬಂಗಾರಪ್ಪ

June 14, 2025

ಸಧೃಡ ಭಾರತದ ನಿರ್ಮಾಣಕ್ಕೆ ನ್ಯಾಯಯುತ ಸಂಪನ್ಮೂಲ ಹಂಚಿಕೆ ಅತ್ಯಗತ್ಯ: ಸಿಎಂ

June 14, 2025

ಕೊಪ್ಪಳ | ನವವೃಂದಾವನ ಶ್ರೀರಘುವರ್ಯತೀರ್ಥರ ಅದ್ದೂರಿ ಆರಾಧನೆ | ಮೂರು ದಿನ ವಿದ್ವಾಂಸರ ಪ್ರವಚನ

June 14, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಮೋದಿಯವರ ಬಲಿಷ್ಠ ನಾಯಕತ್ವದಲ್ಲಿ ಭಾರತ ಹಿಂದೆಂದಿಗಿಂತಲೂ ಶಕ್ತಿಯುತ | ಸಂಸದ ರಾಘವೇಂದ್ರ ಹರ್ಷ

June 14, 2025

ಕ್ಯಾನ್ಸರ್ ಬಾದಿತ ಮಕ್ಕಳಿಗೆ ಸರ್ಕಾರದಿಂದಲೇ ಚಿಕಿತ್ಸೆಗೆ ಸಹಕಾರ: ಮಧು ಬಂಗಾರಪ್ಪ

June 14, 2025

ಸಧೃಡ ಭಾರತದ ನಿರ್ಮಾಣಕ್ಕೆ ನ್ಯಾಯಯುತ ಸಂಪನ್ಮೂಲ ಹಂಚಿಕೆ ಅತ್ಯಗತ್ಯ: ಸಿಎಂ

June 14, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!