Read - < 1 minute
ಗುಂಟೂರು, ಅ.೨೫: ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಭಾರಿ ಕುಳವೊಂದು ಸಿಲುಕಿದೆ. ಆರ್‌ಟಿಒ ಅಧಿಕಾರಿ ಫ್ಲಾಟ್‌ನಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ವಶವಾಗಿದೆ.
ಆರ್‌ಟಿಒ ಅಧಿಕಾರಿ ಪೂರ್ಣಚಂದ್ರರಾವ್‌ಗೆ ಸೇರಿದ ಸುಮಾರು ೭ ಫ್ಲಾಟ್ ಮನೆ ಹಾಗೂ ಕಚೇರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು ೬೦ ಕೆಜಿ ತೂಕದ ಬೆಳ್ಳಿ ವಸ್ತುಗಳು, ೧ ಕೆಜಿ ತೂಕದಷ್ಟು ಚಿನ್ನಾಭರಣಗಳು ಹಾಗೂ ೨೦ ಲಕ್ಷ ನಗದು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ವರದಿಯ ಪ್ರಕಾರ ಪೂರ್ಣಚಂದ್ರ ರಾವ್ ಅವರಿಗೆ ಒಟ್ಟು ೭ ಫ್ಲಾಟ್ ಹಾಗೂ ೧ ಮನೆ ಇದ್ದು, ಈ ಪೈಕಿ ಮನೆಯ ಮೇಲೆ ಮಾತ್ರ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯೊಂದರಲ್ಲೇ ಇಷ್ಟು ಭಾರಿ ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ನಗದ ಪತ್ತೆಯಾಗಿದೆ. ಎಲ್ಲ ೭ ಫ್ಲಾಟ್‌ಗಳ ಮೇಲೆ ದಾಳಿ ನಡೆಸಿದರೆ ಮತ್ತಷ್ಟು ಆಸ್ತಿ ಪತ್ತೆಯಾಗಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಪೂರ್ಣಚಂದ್ರ ಕಳೆದ ೩೪ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.
೧೯೮೧ರಲ್ಲಿ ಮೊಟಾರ್ ವಾಹನ ಇನ್ಸ್‌ಪೆಕ್ಟರ್ ಆಗಿ ಆಯ್ಕೆಯಾಗಿದ್ದರು. ಬಳಿಕ ಒಂಗೋಲು, ನೆಲ್ಲೂರಿನಲ್ಲಿ ಸೇವೆ ಸಲ್ಲಿಸಿದ್ದರು. ಗುಂಟೂರಿನಲ್ಲಿ ಪೂರ್ಣ ಚಂದ್ರ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ವಿನುಕೊಂಡಾದಲ್ಲಿ ಏಳು ಅಪಾರ್ಟ್‌ಮೆಂಟ್ ಹಾಗೂ ೨ ಮನೆ, ಗುಂಟೂರು ಜಿಲ್ಲೆಯಲ್ಲಿ ೨ ಮನೆ ಹಾಗೂ ಹೈದರಾಬಾದ್ ಹಾಗೂ ವಿಜಯವಾಡದಲ್ಲಿ ತಲಾ ಒಂದು ಮನೆಗಳನ್ನು ಹೊಂದಿದ್ದಾರೆ. ಈ ಎಲ್ಲ ಆಸ್ತಿಗಳ ಮೌಲ್ಯವೇ ಸುಮಾರು ೨೫ ಕೋಟಿಗೂ ಅಧಿಕವಾಗಿದೆ ಎನ್ನಲಾಗುತ್ತಿದೆ.
Discussion about this post