ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ Minister KJGeorge ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಯಾರು ಅರ್ಜಿ ಸಲ್ಲಿಸುವುದಿಲ್ಲವೋ ಅವರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯುವುದಿಲ್ಲ. ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದ್ದು, ಈವರೆಗೂ ಸುಮಾರು 86.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ ಎಂದಿದ್ದಾರೆ.
ಜೂನ್ ತಿಂಗಳ ಕರೆಂಟ್ ಬಿಲ್ ಜುಲೈನಲ್ಲಿ ಎಲ್ಲರಿಗೂ ಬರಲಿದೆ. ಅರ್ಜಿ ಸಲ್ಲಿಸಿ ಅರ್ಹರಾಗಿರುವ ಎಲ್ಲರಿಗೂ ಆಗಸ್ಟ್’ಗೆ ಬರುವ ಬಿಲ್ ಲೆಕ್ಕದಲ್ಲಿ ಉಚಿತ ಯೋಜನೆಯ ಪ್ರಯೋಜನ ದೊರೆಯಲಿದೆ ಎಂದರು.
Also read: ಒಡಿಶಾ ರೈಲು ದುರಂತಕ್ಕೆ ಯಾರನ್ನು ಹೊಣೆ ಮಾಡಲಾಗಿದೆ? ಇದಕ್ಕೆ ಕಾರಣವೇನು?
ಅರ್ಜಿ ಸಲ್ಲಿಕೆ ಮಾಡಲು ಇದ್ದ ಸರ್ವರ್ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಅರ್ಜಿ ಸಲ್ಲಿಸದವರು ಆದಷ್ಟು ಬೇಗ ಸಲ್ಲಿಸಿ. ಒಂದು ವೇಳೆ ಅರ್ಜಿ ಸಲ್ಲಿಸದೇ ಇದ್ದರೆ ಉಚಿತ ವಿದ್ಯುತ್ ಪ್ರಯೋಜನ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















