ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ.ಎಸ್ಸಿ (ಹಾನರ್ಸ್) ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು “ಅಡಿಕೆ ತೋಟಗಳಲ್ಲಿ ಶಂಖುಹುಳುಗಳ ಗುರುತು, ಹಾನಿ ಮತ್ತು ನಿಯಂತ್ರಣ ವಿಧಾನಗಳು” ಎಂಬ ವಿಷಯದ ಕುರಿತು ರೈತರಿಗೆ ಜಾಗೃತಿ ಕಾರ್ಯಕ್ರಮ ಹಾಗೂ ವಿಧಾನ ಪ್ರದರ್ಶನವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೊದಲು ಶಂಖುಹುಳುಗಳ ಲಕ್ಷಣಗಳು ಮತ್ತು ಅವು ತೋಟಕ್ಕೆ ಉಂಟುಮಾಡುವ ಹಾನಿ ಕುರಿತು ವಿವರಿಸಿದರು.
ಅಡಿಕೆ ತೋಟಗಳಲ್ಲಿ ಶಂಖುಹುಳುಗಳು ಸಾಮಾನ್ಯವಾಗಿ ಮಣ್ಣಿನ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದು ಮಳೆಗಾಲದಲ್ಲಿ ಇದರ ಹಾವಳಿ ಅಡಿಕೆ ತೋಟದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಮತ್ತು ತೋಟದ ಉತ್ಪಾದಕತೆಗೆ ನೇರ ನಷ್ಟ ತರಿಸುವುದು ಇವೆಲ್ಲವನ್ನು ವಿದ್ಯಾರ್ಥಿಗಳು ಚಿತ್ರ–ನಿದರ್ಶನಗಳ ಮೂಲಕ ರೈತರಿಗೆ ತಿಳಿಸಿದರು.
ನಂತರ ಶಂಖುಹುಳುಗಳ ನಿರ್ವಹಣೆ ಮತ್ತು ಪರಿಣಾಮಕಾರಿ ನಿಯಂತ್ರಣ ವಿಧಾನಗಳು ಕುರಿತು ನೇರವಾಗಿ ವಿಷ ಪಾಷಾಣವನ್ನು ಪ್ರದರ್ಶನ ಮಾಡಿ ತೋರಿಸಲಾಯಿತು.
ವಿದ್ಯಾರ್ಥಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಅಡಿಕೆ ತೋಟಗಳಲ್ಲಿ ನಿಯಂತ್ರಣ ಸಾಧಿಸುವ ಮನೆಮದ್ದುಗಳಂತಹ ವಿಧಾನಗಳು ಕೂಡ ಪರಿಣಾಮಕಾರಿ ಎನ್ನುವುದನ್ನು ರೈತರಿಗೆ ತೋರಿಸಿದರು.
ವಿದ್ಯಾರ್ಥಿಗಳು ತೋಟದಲ್ಲಿ ಸುಲಭವಾಗಿ ಲಭ್ಯವಾಗುವ ಸಾಮಗ್ರಿಗಳನ್ನು ಬಳಸುವುದರಿಂದ ಅಂದರೆ ಭತ್ತದ ತೌಡು ಮಂಡಕ್ಕಿ, ಬೆಲ್ಲ, ಇದರ ಜೊತೆಗೆ ಒಂದು ಔಷದ ಮಿಶ್ರಣ ಮಾಡಿ ತಯಾರಿಸಿದ ವಿಷ ಪಾಷಾಣ ರೈತರಿಗೆ ಹೆಚ್ಚುವರಿ ವೆಚ್ಚ ಬಾರದಂತೆ ಅಡಿಕೆ ತೋಟಗಳ ಶಂಖುಹುಳು ಹಾವಳಿ ನಿಯಂತ್ರಣ ಸಾಧ್ಯ ಎಂದು ಒತ್ತಿ ಹೇಳಿದರು.
ಕಾರ್ಯಕ್ರಮಕ್ಕೆ ಕಲ್ಮನೆ ಗ್ರಾಮದ ಅನೇಕ ಅಡಿಕೆ ಬೆಳೆಗರಾದ ರೈತರು ಭಾಗವಹಿಸಿ, ವಿದ್ಯಾರ್ಥಿಗಳ ಪ್ರದರ್ಶನವನ್ನು ಮೆಚ್ಚಿಕೊಂಡರು. ರೈತರಿಗೆ ನೇರ ಉಪಯುಕ್ತವಾದ ಜ್ಞಾನ ನೀಡಿರುವುದಕ್ಕಾಗಿ ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರೈತರಾದ ಕುಮಾರಣ್ಣ, ಶಿವಮಾದಯ್ಯ, ಭೀಮನಗೌಡ್ರು ಮತ್ತು ಇತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















