ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ #Keladi Shivappanayaka VV ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ನೈಸರ್ಗಿಕ ಕೃಷಿಯಲ್ಲಿ ರೋಗ ಮತ್ತು ಕೀಟಗಳ ನಿರ್ವಹಣಾ ಅಸ್ತ್ರಗಳನ್ನು ತಯಾರಿಸುವ ವಿಧಾನದ ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿತೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ನೈಸರ್ಗಿಕ ಕೃಷಿಯು ರಾಸಾಯನಿಕ ಮುಕ್ತ ಸಾಂಪ್ರದಾಯಿಕ ಕೃಷಿ ವಿಧಾನವಾಗಿದೆ. ಆಧುನಿಕ ಕೃಷಿ ಪದ್ಧತಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರಗಳು ಹಾಗೂ ಪೀಡೆನಾಶಕಗಳ ಬಳಕೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಸಸ್ಯ ಮತ್ತು ಪ್ರಾಣಿ ಸಂಕುಲಗಳು ಮಲಿನಕೊಳ್ಳುತ್ತಲಿದೆ. ಹವಾಮಾನ ವೈಪರೀತ್ಯತೆಯಿಂದಾಗಿ ಹೆಚ್ಚುತ್ತಿರುವ ಕೀಟ ಮತ್ತು ರೋಗಗಳಿಂದ ಸಸ್ಯಗಳನ್ನು ಸಂರಕ್ಷಿಸಲು ನೈಸರ್ಗಿಕ ಪರಿಕರಗಳನ್ನು ಉಪಯೋಗಿಸಿಕೊಂಡು ಕೀಟ ಮತ್ತು ರೋಗಗಳ ನಿರ್ವಹಣಾ ಅಸ್ತ್ರಗಳ ಬಗ್ಗೆ ಕೃಷಿ ವಿದ್ಯಾರ್ಥಿಗಳು ತಿಳಿಸಿದರು.
ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಾದ ವೈಶಾಲಿ ಮತ್ತು ಅವಿನಾಶ್ ರವರು ನೈಸರ್ಗಿಕ ಕೃಷಿಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಯ ಅಸ್ತ್ರಗಳಾದ ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿ ಅಸ್ತ್ರ ಹಾಗೂ ರೋಗನಿರ್ವಹಣೆಯ ಅಸ್ತ್ರಗಳಾದ ಶುಂಠಿ ಅಸ್ತ್ರ, ಹುಳಿಮಜ್ಜಿಗೆ, ಜೋಳದ ಎಲೆಯ ಕಷಾಯ ಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ಪ್ರಾತ್ಯಕ್ಷಿತವಾಗಿ ಮಾಡಿ ರೈತರಿಗೆ ತೋರಿಸಲಾಯಿತು. ನಂತರ ಈ ಅಸ್ತ್ರಗಳನ್ನು ಬೆಳೆಗೆ ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಸಿಂಪಡಿಸಬೇಕೆಂದು ತಿಳಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















