ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕಮಲಾ ನೆಹರು ಮಹಿಳಾ ಕಾಲೇಜು #Kamalanehru Womens College ಮತ್ತು ಕಸ್ತೂರಬಾ ಬಾಲಕಿಯರ ಕಾಲೇಜಿನ ನಡುವಿನ ಕನ್ಸರ್ವೆನ್ಸಿಯ #conservancy ಅಂಚಿನಲ್ಲಿರುವ ಬೆಳೆದು ನಿಂತ ಮರಗಳನ್ನು ಮಹಾನಗರ ಪಾಲಿಕೆ ಈಗಿದ್ದ ಸ್ಥಿತಿಯಲ್ಲೇ ಸಂರಕ್ಷಿಸಬೇಕೆಂದು ಪರಿಸರ ಹೋರಾಟಗಾರರು ಆಗ್ರಹಿಸಿದ್ದಾರೆ.
ಸೋಮವಾರ ಕನ್ಸರ್‌ವೆನ್ಸಿ ತೆರವು ಪರಿಶೀಲನೆಗೆ ಬಂದಿದ್ದ ಪಾಲಿಕೆ ಅಧಿಕಾರಿಗಳು ಈ ಕನ್ಸರ್‌ವೆನ್ಸಿಯನ್ನು ಮುಕ್ತಮಾಡಿ, ಇಲ್ಲಿರುವ ಮರಗಳನ್ನು ತೆಗೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಬಂದಾಗಿದ್ದ ಕನ್ಸರ್ವನ್ಸಿಯಲ್ಲಿ ಆ ಕಾಲೇಜಿನ ಎನ್.ಎಸ್.ಎಸ್. ವತಿಯಿಂದ ಹಣ್ಣು ಹಂಪಲು ಗಿಡ, ಜಾತಿ ಮರಗಳನ್ನು ನೆಟ್ಟು ಬೆಳೆಸಲಾಗಿದೆ. ಆ ಪ್ರದೇಶದಲ್ಲಿ ಹೇರಳವಾದ ಆಮ್ಲಜನಕ ಸೂಸುವಲ್ಲಿ ಈ ಮರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅಲ್ಲದೆ ಇಲ್ಲಿನ ಮರಗಳಲ್ಲಿ ಬೆಳೆಯುವ ಹಣ್ಣು ಹಂಪಲುಗಳು ತ ಬಹು ಜಾತಿಯ ಪಕ್ಷಿಗಳಿಗೆ ಆಹಾರದ ಮೂಲಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಕನ್ಸರರ್ವನ್ಸಿಯಲ್ಲಿ ಬೃಹದಾಕಾರವಾಗಿ ಬೆಳೆದ ರೇನ್ ಟ್ರೀ ಹೊರತಾಗಿ ಅಮೂಲ್ಯವಾದ ಬೆಟ್ಟದ ನೆಲ್ಲಿ, ಹಲಸು, ಸಾಲು ದೂಪ, ಗಸಗಸೆ (ಚರ‍್ರಿ), ಪೇರಳೆ ಮೊದಲಾದ ಹಣ್ಣು ಬಿಡುವ ಜಾತಿ ಮರಗಳಿವೆ. ಇವೆಲ್ಲದರ ಜೊತೆಗೆ ಉತ್ತಮ ನೆರಳನ್ನು ನೀಡುತ್ತಿರುವ ಈ ಮರಗಳನ್ನು ಕಡಿಯದೆ ಸಂರಕ್ಷಿಸಬೇಕೆಂದು ಪರಿಸರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















