ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಶಿವಮೊಗ್ಗ |
ತುಮಕೂರು – ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ತುಮಕೂರು- ಊರುಕೆರೆ ಭಾಗದಲ್ಲಿ ನಾನ್ ಇಂಟರ್ ಲಾಕಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗುತ್ತಿದ್ದು, ಇನ್ನೂ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ರೈಲು ಸೇವೆಗಳನ್ನು ಅವುಗಳ ಮುಂದೆ ನೀಡಿರುವ ವಿವರದಂತೆ ರದ್ದುಗೊಳಿಸಲಾಗುವುದು/ಭಾಗಶಃ ರದ್ದುಗೊಳಿಸಲಾಗುವುದು/ಸಮಯ ಬದಲಾವಣೆ ಮಾಡಲಾಗುವುದು/ನಿಯಂತ್ರಿಸಲಾಗುವುದು ಎಂದು ತಿಳಿಸಿದೆ.
ಈ ರೈಲುಗಳ ರದ್ದತಿ:
- 56202 ಸಂಖ್ಯೆಯ ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ಸೇವೆಯನ್ನು ದಿನಾಂಕ 15.03.2026 ರಂದು ರದ್ದು
- 56281 ಸಂಖ್ಯೆಯ ಚಾಮರಾಜನಗರ – ತುಮಕೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 15.03.2026 ರಂದು ರದ್ದು
- 16567 ಸಂಖ್ಯೆಯ ತುಮಕೂರು – ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ಸೇವೆಯನ್ನು ದಿನಾಂಕ 15.03.2026 ರಂದು ರದ್ದು
- 16568 ಸಂಖ್ಯೆಯ ಶಿವಮೊಗ್ಗ ಟೌನ್ – ತುಮಕೂರು ಎಕ್ಸ್’ಪ್ರೆಸ್ ಸೇವೆಯನ್ನು ದಿನಾಂಕ 16.03.2026 ರಂದು ರದ್ದು
- 56282 ಸಂಖ್ಯೆಯ ತುಮಕೂರು – ಚಾಮರಾಜನಗರ ಪ್ಯಾಸೆಂಜರ್ ಸೇವೆಯನ್ನು ದಿನಾಂಕ 15.03.2026 ಮತ್ತು 16.03.2026 ರಂದು ರದ್ದು
- 56201 ಸಂಖ್ಯೆಯ ಚಾಮರಾಜನಗರ – ಮೈಸೂರು ಪ್ಯಾಸೆಂಜರ್ ಸೇವೆಯನ್ನು ದಿನಾಂಕ 16.03.2026 ಮತ್ತು 17.03.2026 ರಂದು ರದ್ದು
- 66569 ಸಂಖ್ಯೆಯ ಯಶವಂತಪುರ – ತುಮಕೂರು ಮೆಮು ಸೇವೆಯನ್ನು ದಿನಾಂಕ 15.03.2026 ರಂದು ರದ್ದು
- 66570 ಸಂಖ್ಯೆಯ ತುಮಕೂರು – ಯಶವಂತಪುರ ಮೆಮು ಸೇವೆಯನ್ನು ದಿನಾಂಕ 16.03.2026 ರಂದು ರದ್ದು
- 66573 ಸಂಖ್ಯೆಯ ಯಶವಂತಪುರ – ತುಮಕೂರು ಮೆಮು ಸೇವೆಯನ್ನು ದಿನಾಂಕ 16.03.2026 ರಂದು ರದ್ದು
- 66574 ಸಂಖ್ಯೆಯ ತುಮಕೂರು – ಯಶವಂತಪುರ ಮೆಮು ಸೇವೆಯನ್ನು ದಿನಾಂಕ 16.03.2026 ರಂದು ರದ್ದು
ಈ ರೈಲುಗಳ ಭಾಗಶಃ ರದ್ದತಿ
- 15.03.2026 ರಂದು 66571 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ತುಮಕೂರು ಮೆಮು ರೈಲು ಸೇವೆಯನ್ನು ಹಿರೇಹಳ್ಳಿ – ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದು
- 15.03.2026 ರಂದು 66568 ಸಂಖ್ಯೆಯ ತುಮಕೂರು – ಕೆಎಸ್’ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ತುಮಕೂರು – ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.

- 15.03.2026 ರಂದು 16568 ಸಂಖ್ಯೆಯ ಶಿವಮೊಗ್ಗ ಟೌನ್ – ತುಮಕೂರು ಎಕ್ಸ್’ಪ್ರೆಸ್ ಸೇವೆಯನ್ನು ಅರಸೀಕೆರೆ – ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
- 15.03.2026 ಮತ್ತು 16.03.2026 ರಂದು 66567 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ – ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸುವುದು.
- 15.03.2026 ಮತ್ತು 16.03.2026 ರಂದು 66572 ಸಂಖ್ಯೆಯ ತುಮಕೂರು – ಕೆಎಸ್’ಆರ್ ಬೆಂಗಳೂರು ಮೆಮು ಸೇವೆಯನ್ನು ತುಮಕೂರು – ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
- 16.03.2026 ರಂದು 20652 ಸಂಖ್ಯೆಯ ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ಸೇವೆಯನ್ನು ಅರಸೀಕೆರೆ – ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.
- 16.03.2026 ರಂದು 12725 ಸಂಖ್ಯೆಯ ಕೆಎಸ್’ಆರ್ ಬೆಂಗಳೂರು – ಧಾರವಾಡ ಎಕ್ಸ್’ಪ್ರೆಸ್ ಸೇವೆಯನ್ನು ಕೆಎಸ್’ಆರ್ ಬೆಂಗಳೂರು – ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಮತ್ತು ಈ ರೈಲು ಅಂದು ಕೆಎಸ್’ಆರ್ ಬೆಂಗಳೂರು ನಿಲ್ದಾಣದ ಬದಲಾಗಿ ಅರಸೀಕೆರೆ ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಲಿದೆ.
- 16.03.2026 ರಂದು 66565 ಸಂಖ್ಯೆಯ ಬಾಣಸವಾಡಿ – ತುಮಕೂರು ಮೆಮು ಸೇವೆಯನ್ನು ಹಿರೇಹಳ್ಳಿ – ತುಮಕೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ಹಿರೇಹಳ್ಳಿ ನಿಲ್ದಾಣದವರೆಗೆ ಮಾತ್ರ ಸಂಚರಿಸುವುದು.

- 16.03.2026ರಂದು 66561 ಸಂಖ್ಯೆಯ ತುಮಕೂರು – ಯಶವಂತಪುರ ಮೆಮು ಸೇವೆಯನ್ನು ತುಮಕೂರು – ಹಿರೇಹಳ್ಳಿ ನಡುವೆ ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲು ಅಂದು ತುಮಕೂರು ನಿಲ್ದಾಣದ ಬದಲಾಗಿ ಹಿರೇಹಳ್ಳಿ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಈ ರೈಲುಗಳ ಸಮಯ ಬದಲಾವಣೆ
- 16.03.2026 ರಂದು ಹೊರಡುವ 20689 ಸಂಖ್ಯೆಯ ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್’ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ 75 ನಿಮಿಷ ತಡವಾಗಿ ಹೊರಡಲಿದೆ.
- 16.03.2026 ರಂದು ಹೊರಡುವ 16217 ಸಂಖ್ಯೆಯ ಮೈಸೂರು – ಸಾಯಿನಗರ ಶಿರಡಿ ಎಕ್ಸ್’ಪ್ರೆಸ್ ರೈಲು ಮೈಸೂರು ನಿಲ್ದಾಣದಿಂದ ತನ್ನ ನಿಗದಿತ ನಿರ್ಗಮನ ಸಮಯಕ್ಕಿಂತ 105 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.
ಈ ರೈಲುಗಳ ನಿಯಂತ್ರಣ
- 12.03.2026 ರಂದು ಹೊರಡುವ 12650 ಸಂಖ್ಯೆಯ ಹಜರತ್ ನಿಜಾಮುದ್ದೀನ್ – ಯಶವಂತಪುರ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- 13.03.2026 ರಂದು ಹೊರಡುವ 17392 ಸಂಖ್ಯೆಯ ಸಿಂಧನೂರು – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 45 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- 13.03.2026 ರಂದು ಹೊರಡುವ 16228 ಸಂಖ್ಯೆಯ ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- 15.03.2026 ರಂದು ಹೊರಡುವ 17310 ಸಂಖ್ಯೆಯ ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 20 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
- 16.03.2026 ರಂದು ಹೊರಡುವ 20676 ಸಂಖ್ಯೆಯ ಮೈಸೂರು – ಬೆಳಗಾವಿ ಎಕ್ಸ್’ಪ್ರೆಸ್ ರೈಲನ್ನು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















