ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೈಋತ್ಯ ರೈಲ್ವೆಯು ವಿವಿಧ ನಿಲ್ದಾಣಗಳಲ್ಲಿ ಈ ಕೆಳಗಿನ ರೈಲುಗಳಿಗೆ ನೀಡಿರುವ ತಾತ್ಕಾಲಿಕ ನಿಲುಗಡೆಯನ್ನು 2026ರ ಜೂನ್ 30ರವರೆಗೂ ಮುಂದುವರೆಸಲು ನಿರ್ಧರಿಸಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ರೈಲಿನ ವಿವರಗಳು ಹೀಗಿವೆ.
1) ರೈಲು ಸಂಖ್ಯೆ 56519/56520 ಕೆಎಸ್’ಆರ್ ಬೆಂಗಳೂರು – ಹೊಸಪೇಟೆ – ಕೆಎಸ್’ಆರ್ ಬೆಂಗಳೂರು ಪ್ಯಾಸೆಂಜರ್ ದೇವನೂರಿನಲ್ಲಿ ನಿಲುಗಡೆ.
2) ರೈಲು ಸಂಖ್ಯೆ 20675/20676 ಬೆಳಗಾವಿ – ಮೈಸೂರು – ಬೆಳಗಾವಿ ಎಕ್ಸ್’ಪ್ರೆಸ್’ಗೆ ರಾಮಗಿರಿಯಲ್ಲಿ ನಿಲುಗಡೆ.
3) ರೈಲು ಸಂಖ್ಯೆ 17391/17392 ಕೆಎಸ್’ಆರ್ ಬೆಂಗಳೂರು – ಸಿಂಧನೂರು – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್’ಗೆ ರಾಮಗಿರಿ ಮತ್ತು ಚಲಗೇರಿಯಲ್ಲಿ ನಿಲುಗಡೆ.
4) ರೈಲು ಸಂಖ್ಯೆ 16587/16588 ಯಶವಂತಪುರ – ಬಿಕಾನೇರ್ – ಯಶವಂತಪುರ ಎಕ್ಸ್’ಪ್ರೆಸ್’ಗೆ ಬೀರೂರಿನಲ್ಲಿ ನಿಲುಗಡೆ.
5) ರೈಲು ಸಂಖ್ಯೆ 16239/16240 ಚಿಕ್ಕಮಗಳೂರು – ಯಶವಂತಪುರ – ಚಿಕ್ಕಮಗಳೂರು ಎಕ್ಸ್’ಪ್ರೆಸ್ ಅರಳಗುಪ್ಪೆ ಮತ್ತು ಸಂಪಿಗೆ ರೋಡ್ ನಿಲ್ದಾಣದಲ್ಲಿ ನಿಲುಗಡೆ.
6) ರೈಲು ಸಂಖ್ಯೆ 20651/20652 ಕೆಎಸ್’ಆರ್ ಬೆಂಗಳೂರು – ತಾಳಗುಪ್ಪ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ನಿಲುಗಡೆ.
7) ರೈಲು ಸಂಖ್ಯೆ 56519/56520 ಕೆಎಸ್’ಆರ್ ಬೆಂಗಳೂರು – ಹೊಸಪೇಟೆ – ಕೆಎಸ್’ಆರ್ ಬೆಂಗಳೂರು ಪ್ಯಾಸೆಂಜರ್ ಹೊಳಲ್ಕೆರೆ ಮತ್ತು ಅಮೃತಾಪುರ ನಿಲ್ದಾಣಗಳಲ್ಲಿ ನಿಲುಗಡೆ.
8) ರೈಲು ಸಂಖ್ಯೆ 16579/16580 ಯಶವಂತಪುರ – ಟೌನ್ – ಯಶವಂತಪುರ ಎಕ್ಸ್’ಪ್ರೆಸ್ ಗೆ ಚಿಕ್ಕಬಾಣಾವರದಲ್ಲಿ ನಿಲುಗಡೆ.
9) ರೈಲು ಸಂಖ್ಯೆ 16595/16596 ಕೆಎಸ್’ಆರ್ ಬೆಂಗಳೂರು – ಕಾರವಾರ – ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ಕುಣಿಗಲ್’ನಲ್ಲಿ ನಿಲುಗಡೆ.
10) ರೈಲು ಸಂಖ್ಯೆ 16228 ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ ರೈಲಿಗೆ ಮಲ್ಲೇಶ್ವರಂನಲ್ಲಿ ನಿಲುಗಡೆ.
11) ರೈಲು ಸಂಖ್ಯೆ. 16315/16316 ತಿರುವನಂತಪುರಂ ನಾರ್ತ್ – ಮೈಸೂರು – ತಿರುವನಂತಪುರಂ ನಾರ್ತ್ ಎಕ್ಸ್’ಪ್ರೆಸ್ ಮದ್ದೂರಿನಲ್ಲಿ ನಿಲುಗಡೆ.
12) ರೈಲು ಸಂಖ್ಯೆ 66553 ಕೆಎಸ್’ಆರ್ ಬೆಂಗಳೂರು – ಅಶೋಕಪುರಂ ಮೆಮು ಕೃಷ್ಣದೇವರಾಯ ನಿಲ್ದಾಣದಲ್ಲಿ ನಿಲುಗಡೆ.
13) ರೈಲು ಸಂಖ್ಯೆ 66519/66520 ಮಾರಿಕುಪ್ಪಂ – ಕೆಎಸ್’ಆರ್ ಬೆಂಗಳೂರು – ಮಾರಿಕುಪ್ಪಂ ಮೆಮು ದೇವನಗೊಂದಿ ನಿಲ್ದಾಣದಲ್ಲಿ ನಿಲುಗಡೆ.
14) ರೈಲು 16521 ಬಂಗಾರಪೇಟೆ – ಕೆಎಸ್’ಆರ್ ಬೆಂಗಳೂರು ಮೆಮು ದೇವನಗೊಂದಿ ನಿಲ್ದಾಣದಲ್ಲಿ ನಿಲುಗಡೆ.
15) ರೈಲು ಸಂಖ್ಯೆ 56927/56928 ಹುಬ್ಬಳ್ಳಿ – ಸಿಂಧನೂರು – ಹುಬ್ಬಳ್ಳಿ ಪ್ಯಾಸೆಂಜರ್ ಹಳ್ಳಿಗುಡಿ ನಿಲ್ದಾಣದಲ್ಲಿ ನಿಲುಗಡೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















