ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೈಸೂರು ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಬೆಂಗಳೂರು ನಡುವಿನ ವಿಶೇಷ ರೈಲು Mysore – Bengaluru Special Train ಸೇವೆಯನ್ನು ಕಾಯಂಗೊಳಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ.
ಈ ಹಿನ್ನೆಲೆ, ರೈಲು ಸಂಖ್ಯೆ 06269/06270 ಮೈಸೂರು – ಎಸ್‌ಎಂವಿಟಿ ಬೆಂಗಳೂರು – ಮೈಸೂರು ವಿಶೇಷ ರೈಲುಗಳನ್ನು ಇದೀಗ ರೈಲು ಸಂಖ್ಯೆ 56231/56232 ಮೈಸೂರು – ಎಸ್‌ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲುಗಳಾಗಿ ಪರಿವರ್ತಿಸಲಾಗಿದೆ.
ರೈಲು ಸಂಖ್ಯೆ 56231 ಮೈಸೂರು – ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ರೈಲು ಜೂನ್ 5, 2026ರಿಂದ ದೈನಂದಿನ ಸಂಚರಿಸಲಿದ್ದು, ರೈಲು ಸಂಖ್ಯೆ 56232 ಎಸ್‌ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲು ಜೂನ್ 6, 2026ರಿಂದ ದೈನಂದಿನವಾಗಿ ಓಡಲಿದೆ.
Also read: ದೃಷ್ಠಿ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಯುವತಿ | ಮರುದೃಷ್ಠಿ ನೀಡಿದ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ
ಈ ರೈಲುಗಳು ಈಗಿರುವ ಸಮಯಪಟ್ಟಿ, ನಿಲ್ದಾಣಗಳು, ಬೋಗಿಗಳ ಸಂಯೋಜನೆ ಹಾಗೂ ನಿರ್ವಹಣಾ ಕ್ರಮದಂತೆ ಮುಂದುವರಿಯಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















