ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ನಗರದ ಗೋಪಾಳ ಪ್ರದೇಶದಲ್ಲಿರುವ ‘ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ ಅನ್ನು ಜೂನ್ 23 ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರು ಹಾಗೂ ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಡಾ. ಎನ್.ಎಲ್. ನಾಯಕ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ನಾರಾಯಣ ಹೆಲ್ತ್‌ನ ಕರ್ನಾಟಕ ಕ್ಲಸ್ಟರ್ ಮತ್ತು ಕಾರ್ಪೊರೇಟ್ ಗ್ರೋತ್ ಇನಿಶಿಯೇಟಿವ್ ನಿರ್ದೇಶಕ ಡಾ. ವಿಜಯ್ ಸಿಂಗ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ್ ಶರ್ಮ ಸೇರಿದಂತೆ ಗಣ್ಯರು ಉಪಸ್ಥಿತರಿರುತ್ತಾರೆ.
Also Read>> ಶಿವಮೊಗ್ಗ | ಕುಂಸಿಯ ನಾಲ್ವರಿಗೆ 20 ವರ್ಷ ಜೈಲು ಶಿಕ್ಷೆ | ಕಾರಣವೇನು?
ನೂತನ ಕ್ಲಿನಿಕ್ ಗೋಪಾಳ ಗೌಡ ರಸ್ತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಇರುವ ಸಿ.ಎಸ್. ಆರ್ಕೇಡ್‌ನಲ್ಲಿ ಸ್ಥಾಪನೆಯಾಗಿದೆ. ಈ ಕ್ಲಿನಿಕ್‌ನಿಂದ ಗೋಪಾಳ, ಗೋಪಾಲ ಗೌಡ ಬಡಾವಣೆ, ಆಲ್ಕೊಳ, ಗಾಡಿಕೊಪ್ಪ, ಸ್ವಾಮಿ ವಿವೇಕಾನಂದ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಕೇಂದ್ರದಲ್ಲಿ ಡೇ ಕೇರ್ ಚಿಕಿತ್ಸೆ, ಎಕೋ (ECHO), ಇಸಿಜಿ (ECG), ಟಿಎಂಟಿ (TMT), ಎಕ್ಸ್-ರೇ, ಫಿಸಿಯೋಥೆರಪಿ ಸೇರಿದಂತೆ ವಿವಿಧ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಪ್ರತಿದಿನ ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಮತ್ತು ಇನ್‌ಹೌಸ್ ಫಾರ್ಮಸಿ ಸೌಲಭ್ಯಗಳೂ ಇರಲಿವೆ.
Also Read>> 1300 ಕೆರೆಗಳಲ್ಲಿ 500 ಒತ್ತುವರಿ | ಸೊರಬದಲ್ಲಿ ಗಂಭೀರ ಪರಿಸ್ಥಿತಿ | ಅನಂತ ಹೆಗಡೆ ಅಶಿಸರ
ಆಸ್ಪತ್ರೆಯ ಮೂಲಗಳ ಪ್ರಕಾರ, ಹೃದ್ರೋಗ, ಜನರಲ್ ಮೆಡಿಸಿನ್, ಎಂಡೋಕ್ರೈನಾಲಜಿ, ಆಂಕೊಲಾಜಿ, ಇಎನ್‌ಟಿ, ಪ್ರಸೂತಿ ಮತ್ತು ಸ್ತ್ರೀರೋಗ, ಗ್ಯಾಸ್ಟ್ರೋಎಂಟರಾಲಜಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಮಾಲೋಚನೆಗೆ ಲಭ್ಯರಾಗಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 91082 43454
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















