ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಂಸ್ಕೃತಿಕ ಪರಿಸರ ಇಂದಿಗೆ ಅಗತ್ಯವಾಗಿದೆ. ಕಷ್ಟಪಟ್ಟು ಹಿರಿಯರು ಕಟ್ಟಿದ ಈ ನಾಡನ್ನು ಇಂದಿನ ಯುವಶಕ್ತಿ ಉಳಿಸಬೇಕಿದೆ. ಪಠ್ಯೇತರ ಚಟುವಟಿಕೆಗಳ ಮೂಲಕ ನಿಮ್ಮ ಮನೋಬಲ ಹೆಚ್ಚಿಸಿಕೊಳ್ಳಬೇಕೆಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2026-27 ನೇ ಸಾಲಿನ ಪಠ್ಯೇತರ ಚಟುವಟಿಕೆಗಳನ್ನು ಕುವೆಂಪು ರಂಗಮAದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳಿವೆ. ಅದನ್ನು ಸರಿಯಾಗಿ ಬಳಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕೆಂದರು. ವಿಧಾನ ಪರಿಷತ್ತು ಶಾಸಕರಾದ ಡಿ.ಎಸ್ ಅರುಣ್ ಮಾತನಾಡಿ ಇವತ್ತು ವಿದ್ಯಾರ್ಥಿಗಳಿಗೆ ಎಲ್ಲಾ ಅವಕಾಶಗಳಿವೆ. ಜೀವನದಲ್ಲಿ ಉತ್ತಮ ಕ್ಷಣ ಎಂದರೆ ಅದು ಕಾಲೇಜು ಜೀವನ. ಇಂದಿನ ಯುವಜನತೆಗೆ ಸದುದ್ದೇಶ, ಉತ್ತಮ ಆಸಕ್ತಿ ಮತ್ತು ಮಾರ್ಗದರ್ಶನ ಅವಶ್ಯಕತೆಯಿದೆ. ತಂತ್ರಜ್ಞಾನದದಲ್ಲಿ ಎಷ್ಟೇ ಮುಂದುವರಿದಿದ್ದರೂ ಭಾವನಾತ್ಮಕ ಸಂಬAಧವನ್ನು ಉಳಿಸಿಕೊಂಡು ಹೋಗುವುದು ಮುಖ್ಯ. ಮೊಬೈಲ್ ನಿಂದ ಮುಕ್ತರಾಗಿ ಜೀವನದ ಉನ್ನತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಿರಿ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿಯ ಪ್ರಾಧ್ಯಾಪಕರಾದ ಜಿ. ಪ್ರಶಾಂತ ನಾಯಕ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಓದುವುದು ಸಂಭ್ರಮದ ವಿಷಯವಾಗಿದೆ. ಇವತ್ತು ಮಾತು ಮತ್ತು ಸಂಬಂಧಗಳು ಕಳೆದುಕೊಳ್ಳುತ್ತಿವೆ. ನಮ್ಮನ್ನು ನಾವು ಅರ್ಥಮಾಡಿಕೊಳ್ಳದೇ ಹೋದರೆ ಇನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ವರ್ತಮಾನದ ಬದುಕು ಮೊಬೈಲ್ ಮತ್ತು ಕೃತಕ ಬುದ್ಧಿಮತ್ತೆ ಮೇಲೆ ನಿಂತಿಲ್ಲ. ನಿನ್ನವರ ಜೊತೆ ಮತ್ತು ನಿನ್ನ ಜೊತೆ ನೀನು ಹೇಗೆ ಇದ್ದೀಯ ಅನ್ನೋದರ ಮೇಲೆ ನಿಂತಿದೆ ಎಂದರು.
ಇಂದು ನಾವೆಲ್ಲರೂ ಮನುಷ್ಯರಾಗುವುದು ಬಹಳ ಮುಖ್ಯ. ಅಂಕಗಳು ಪ್ರತಿಭೆಗೆ ಮಾನದಂಡವಲ್ಲ. ಸಾಹಿತ್ಯ ಮತ್ತು ಸಂಸ್ಕೃತಿಗಳು ನಮ್ಮ ವ್ಯಕ್ತಿತ್ವವನ್ನು ಚೆಂದಗಾಣಿಸುತ್ತವೆ. ಸೋಲಿನಿಂದ ಭಯಗೊಳ್ಳದೆ ಸ್ವಾವಲಂಬನೆಯ ಬದುಕಿನ ಕಡೆಗೆ ಹೆಜ್ಜೆಯಿಡಿರಿ ಎಂದರು.
Also read>> ಮನೆಮನೆಗಳಲ್ಲಿ ‘ಚಿಕ್ಕಮೇಳ’ದವರಿಂದ ಯಕ್ಷಗಾನ ಪ್ರದರ್ಶನ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಬಸವರಾಜಪ್ಪ ಕೆ.ವಿ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ವಿವಿಧ ಸಮಿತಿಗಳ ಸಂಚಾಲಕರು ಉಪಸ್ಥಿತಿ ಇದ್ದರು. ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಮೋಹನ ಎಸ್.ಕೆ ಪ್ರಾಸ್ತಾವಿಕ ಮಾತನಾಡಿದರು.ಕುಕು. ಮಾನ್ಯ ಪ್ರಾರ್ಥಿಸಿ, ಗೀತಾಂಜಲಿ ಸ್ವಾಗತಿಸಿ, ಕು. ಮಾಯವತಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








