No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
  • Advertise With Us
  • Grievances
  • About Us
  • Contact Us
Monday, August 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಹರಿಹರ ಕ್ಷೇತ್ರ ಅಭಿವೃದ್ಧಿ ಕಡೆಗಣನೆ: ಇಡಿಯ ವ್ಯವಸ್ಥೆಗೆ ಬೆಂಡೆತ್ತಿದ ಪತ್ರಕರ್ತರೊಬ್ಬರ ಲೇಖನ ಓದಿ

ನಮ್ಮ ಕ್ಷೇತ್ರದ ಅಭಿವೃದ್ಧಿ!

kalpa News by kalpa News
July 1, 2019
in Small Bytes, ದಾವಣಗೆರೆ
0
ಹರಿಹರ ಕ್ಷೇತ್ರ ಅಭಿವೃದ್ಧಿ ಕಡೆಗಣನೆ: ಇಡಿಯ ವ್ಯವಸ್ಥೆಗೆ ಬೆಂಡೆತ್ತಿದ ಪತ್ರಕರ್ತರೊಬ್ಬರ ಲೇಖನ ಓದಿ
Share on FacebookShare on TwitterShare on WhatsApp

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರು. ಇವರು ತಮ್ಮ ಕ್ಷೇತ್ರದ ಎಲ್ಲ ಇಲಾಖೆಗಳು ಇವರ ಅಧಿಕಾರದಲ್ಲಿ ಬರುತ್ತವೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗುವಂತಹ ಕಾರ್ಯಕ್ರಮಗಳ ಶಂಕುಸ್ಥಾಪನೆಗಳು, ಉದ್ಘಾಟನೆ, ಗುದ್ದಲಿ ಪೂಜೆಗಳು ಅವುಗಳನ್ನಷ್ಟೇ ಮಾಡುತ್ತಾ ಕುಳಿತುಕೊಂಡರೇ ಸಾಲದು. ತಮ್ಮ ಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿ ಮಾಡಬೇಕಾದ ಗುರುತರ ಜವಾಬ್ದಾರಿಯನ್ನು ಹೊಂದಿರಬೇಕು. ಇವರ ಜೊತೆಗೆ ಮಾಜಿ ಶಾಸಕರು ವಿರೋಧ ಪಕ್ಷದವರಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಇಷ್ಟೇ ಅಲ್ಲದೆ ಕ್ಷೇತ್ರದಲ್ಲಿ ಬರುವಂತಹ ಅನೇಕ ಸಂಘ ಸಂಸ್ಥೆಗಳು ಶಾಸಕರು ಹಾಗೂ ಮಾಜಿ ಶಾಸಕರ, ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟು ಲೋಪದೋಷವಾಗದಂತೆ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿಯನ್ನು ಕ್ಷೇತ್ರದ ಸಂಘ ಸಂಸ್ಥೆಗಳು ಮೇಲೆ ಮಹತ್ತರವಾದ ಜವಾಬ್ದಾರಿ ಇರುತ್ತದೆ. ಇವೆಲ್ಲವೂ ಒಟ್ಟಿಗೆ ಹೋದಾಗ ಮಾತ್ರ ಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಸಾಧ್ಯವಾಗುತ್ತದೆ.

ಒಂದು ವಿಧಾನಸಭಾ ಕ್ಷೇತ್ರ ಎಂದಾಗ ಆ ಕ್ಷೇತ್ರದ ಕೆಲಸ ಕಾರ್ಯಗಳು ಪ್ರಾರಂಭವಾಗುವುದು ತಾಲೂಕು ಕಚೇರಿಯಿಂದ. ಈ ತಾಲೂಕು ಕಚೇರಿಯಲ್ಲಿ ದಂಡಾಧಿಕಾರಿ, ತಾಲ್ಲೂಕು ಕೇಂದ್ರದಲ್ಲಿ ಬರುವ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ಹಿಡಿತವನ್ನು ತಾಲೂಕು ದಂಡಾಧಿಕಾರಿ ಹೊಂದಿರುತ್ತ್ತಾರೆ. ಇವರು ಇವರ ಕೆಳಗೆ ಬರುವಂತಹ ಎಲ್ಲ ಇಲಾಖೆಗಳಲ್ಲೂ ಜನರಿಗೆ ಹತ್ತಿರವಾಗುವ ಸ್ನೇಹ ಪರವಾದ ವಾತಾವರಣವನ್ನು ನಿರ್ಮಾಣ ಮಾಡಿ, ಜನರ ಕೆಲಸ ಕಾರ್ಯಗಳು ಕೈಗೆ ಅತಿ ಸುಲಭವಾಗಿ ಆಗುವಂತೆ ಮಾಡುವ ಗುರುತರ ಜವಾಬ್ದಾರಿ ಹೊಂದಿರುತ್ತಾರೆ.

ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ, ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ, ತಮ್ಮ ಜಮೀನು ಆಸ್ತಿಗಳನ್ನು ಪರಭಾರೆ ಮಾಡುವ ಸಬ್’ರಿಜಿಸ್ಟರ್ ಕಚೇರಿಗಳಿಂದ, ಪಂಚಾಯತ್ ಅಭಿವೃದ್ಧಿ ಕೆಲಸಗಳನ್ನು ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿಗಳಿಂದ, ಜನರ ರಕ್ಷಣೆ ಮತ್ತು ಶಾಂತಿ ಸುವ್ಯವಸ್ಥೆಯ ಜವಾಬ್ದಾರಿ ಪೊಲೀಸ್ ಇಲಾಖೆಗಳಿಂದ, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂಥ ಗಂಭೀರ ಕಾಯಿಲೆಗಳು ಹಾಗೂ ತುರ್ತು ಸೇವೆಗಳು ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಿಂದ, ಜನನ ಮರಣ ಹಾಗೂ ಇತರ ಗ್ರಾಮೀಣ ಭಾಗದ ಸೇವೆಗಳನ್ನು ನೀಡುವ ಗ್ರಾಮ ಲೆಕ್ಕಾಧಿಕಾರಿಗಳಿಂದ, ನಗರ ಭಾಗದ ಜನರ ಕುಂದು ಕೊರತೆಗಳನ್ನು ಆಲಿಸುವ ನಗರ ಸಭೆಗಳಿಂದ, ಹೀಗೆ ನೀರು ನೈರ್ಮಲ್ಯ ವಸತಿ ಆರೋಗ್ಯ ಅರಣ್ಯ ಲೋಕೋಪಯೋಗಿ ಇಲಾಖೆಗಳು ಮತ್ತು ಭೂ ಮತ್ತು ಗಣಿ ಇಲಾಖೆ ಹೀಗೆ ಹತ್ತಾರು ಇಲಾಖೆಗಳು ಒಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.

ಇವೆಲ್ಲದರ ಮೇಲೆ ಕ್ಷೇತ್ರದ ಶಾಸಕರಿಗೆ ಸಂಪೂರ್ಣ ಹಿಡಿತವಿರುತ್ತದೆ. ಈ ಎಲ್ಲ ಇಲಾಖೆಗಳನ್ನು ಬಳಸಿಕೊಂಡು ತಮ್ಮ ಕ್ಷೇತ್ರದ ಜನತೆಗೆ ಎಲ್ಲೂ ಲೋಪದೋಷವಾಗದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಆ ಕ್ಷೇತ್ರ ಭ್ರಷ್ಟಾಚಾರ ರಹಿತ ಮಾದರಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಸಾಧ್ಯ. ಇದಕ್ಕೆ ಮಾಜಿ ಶಾಸಕರು ಸಂಘ ಸಂಸ್ಥೆಯವರು ಭ್ರಷ್ಟ ಅಧಿಕಾರಿಗಳಿಗೆ ಸಿಂಹ ಸ್ವಪ್ನವಾಗಿ ಕ್ಷೇತ್ರದಲ್ಲಿ ಆಗುವ ಕೆಲಸ ಕಾರ್ಯಗಳ ಮೇಲೆ ಹದ್ದಿನ ಕಣ್ಣಿಟ್ಟು ಕಾರ್ಯನಿರ್ವಹಿಸಬೇಕು. ಅದು ಅವರ ಜವಾಬ್ದಾರಿಯೂ ಹೌದು. ಆಗ ಜನರು ತಾವು ಕಟ್ಟಿದ ತೆರಿಗೆ ಹಣ ನಮ್ಮ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಬಳಸಿದ್ದಾರೆ ಎಂದು ಹೆಮ್ಮೆ ಪಡುತ್ತಾರೆ.

ಆದರೆ ಹರಿಹರ ಕ್ಷೇತ್ರದಲ್ಲಿ ಮಾತ್ರ ಈಗ ಹಾಗೆ ಆಗುತ್ತಿಲ್ಲ ಅಲ್ಲವೇ?

ಹರಿಹರ ಕ್ಷೇತ್ರದ ಜನಪ್ರಿಯ ಶಾಸಕರೇ, ತಾಲೂಕು ದಂಡಾಧಿಕಾರಿಗಳೇ, ಮಾಜಿ ಶಾಸಕರೇ, ಚುನಾವಣೆಗಳು ನಡೆದು ಒಂದೂವರೆ ವರ್ಷದ ಅವಧಿಯಲ್ಲಿ ನಿಮ್ಮ ಕ್ಷೇತ್ರಗಳನ್ನು ಮರೆತು ಬಿಟ್ಟರೆ? ನೀವು ನಿಮ್ಮ ಮತದಾರರಿಗೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳು ನಿಮಗೆ ನೆನಪಿಲ್ಲವೆ? ನಿಮ್ಮ ಕ್ಷೇತ್ರಗಳು ಅಭಿವೃದ್ಧಿಯಾಗುವ ಆಸೆ ನಿಮಗಿಲ್ಲವೇ? ಹಾಗಿದ್ದ ಮೇಲೆ ನಿಮ್ಮ ಕ್ಷೇತ್ರದಲ್ಲಿ ಏಕೆ ಭ್ರಷ್ಟಾಚಾರ ತಾಂಡವಾಡುತ್ತಿದೆ? ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಿಜವಾಗಲೂ ನಿಮ್ಮ ಕ್ಷೇತ್ರದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ನಿಮ್ಮ ಕ್ಷೇತ್ರದ ಜನತೆಗೆ ಉತ್ತಮವಾದ ಚಿಕಿತ್ಸೆ ಸಿಗುತ್ತಿದೆಯೇ? ತಾಲೂಕು ಕಚೇರಿಯಲ್ಲಿ ಮಧ್ಯವರ್ತಿ ಕೆಲಸ ಮಾಡುತ್ತಿದ್ದಾರೆ ಎಂದು ಹದಿನಾರು ಜನರ ಮೇಲೆ ಕೇಸು ದಾಖಲಿಸಿದ ಮೇಲೆ ಅಲ್ಲಿ ಭ್ರಷ್ಟಾಚಾರ ನಿಂತಿದೆಯೇ?

ರೈತ ಈ ದೇಶದ ಬೆನ್ನೆಲುಬು ಅವನಿಗೆ ನಿಮ್ಮ ಕ್ಷೇತ್ರದ ಕೃಷಿ ಇಲಾಖೆಯಿಂದ ಕಳಪೆ ಬೀಜ ಪೂರೈಕೆ ಆಗುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಲೋಕೋಪಯೋಗಿ ಇಲಾಖೆ ಹಾಗೂ ಅಭಿಯಂತರ ಇಲಾಖೆಗಳಿಂದ ಕೇವಲ ಒಂದು ಒಂದೂವರೆ ತಿಂಗಳಲ್ಲಿ ಸಿಸಿ ರಸ್ತೆಗಳು ತಮ್ಮ ಗುಣಮಟ್ಟಗಳನ್ನು ಕಳೆದುಕೊಂಡು ಹಾಳಾಗುತ್ತಿರುವುದು ನಿಮ್ಮ ಗಮನಕ್ಕೆ ಇದುವರೆಗೂ ಬಂದಿಲ್ಲವೇ? ಮಧ್ಯ ಕರ್ನಾಟಕದ ಹೃದಯ ಭಾಗವಾಗಿರುವ ಹರಿಹರದ ನಗರಸಭೆಯ ಮುಂಭಾಗದಲ್ಲಿ ನಗರಸಭೆ ಎಂಬ ನಾಮಫಲಕವೇ ಇಲ್ಲ ಇದನ್ನು ನೀವು ಗಮನಿಸಿಲ್ಲವೇ? ಹರಪನಹಳ್ಳಿ ಸರ್ಕಲ್’ನಿಂದ ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ ರಾತ್ರಿಯ ಹೊತ್ತು ಬೀದಿದೀಪಗಳೇ ಉರಿಯುತ್ತಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಸಬ್ ರಿಜಿಸ್ಟಾರ್ ಕಚೇರಿ ಲಂಚದ ಹಾವಳಿ ಮಿತಿ ಮೀರಿದ್ದರೂ ಜನರು ಪರದಾಡುತ್ತಿರುವ ದೃಶ್ಯ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಶಿಶು ಅಭಿವೃದ್ಧಿ ಇಲಾಖೆಯಿಂದ ಮಕ್ಕಳು ಮಾತೆಯರಿಗೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥಗಳು ಅಂಗನವಾಡಿ ಶಿಕ್ಷಕಿಯರ ಮನೆಯಲ್ಲಿ ದಾಸ್ತಾನು ಆಗಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಿಮ್ಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಜನಸಾಮಾನ್ಯರಿಗೆ ಹಣದ ಆಸೆಗೆ ನಕಲಿ ಅಂಕಪಟ್ಟಿ ನೀಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಹೀಗೆ ಹತ್ತಾರು ಇಲಾಖೆಗಳಿಂದ ನಿಮ್ಮ ಕ್ಷೇತ್ರದ ಮತದಾರರಿಗೆ ತೊಂದರೆಯಾಗುತ್ತಿದ್ದರೂ ನೀವು ಏಕೆ ಸುಮ್ಮನಿದ್ದೀರಿ!

ಮಾಜಿ ಶಾಸಕರೇ ನೀವು ನಿಮ್ಮ ಕ್ಷೇತ್ರದಲ್ಲಿ ವಿರೋಧ ಪಕ್ಷದವರಂತೆ ಕಾರ್ಯ ನಿರ್ವಹಿಸಿ ನಿಮ್ಮ ಮತದಾರರಿಗೆ ನ್ಯಾಯ ಒದಗಿಸುವ ಆಸೆ ನಿಮಗಿಲ್ಲವೇ? ಕೇವಲ ಚುನಾವಣೆ ಸಂದರ್ಭದಲ್ಲಿ ಮತದಾರರ ಮನೆಗೆ ಹೋಗಿ ಮತವನ್ನು ಭಿಕ್ಷೆ ಬೇಡುವ ಬದಲು ಅಭಿವೃದ್ಧಿ ಪರ ಚಿಂತೆ ಮಾಡಿ ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ. ನಿಮ್ಮ ಕ್ಷೇತ್ರದ ಜನತೆಯ ಕೆಲಸ ಕಾರ್ಯಗಳನ್ನು ಕಚೇರಿಗಳಿಂದ ಸುಲಭವಾಗಿ ಸಿಗುವಂತಹ ವಾತಾವರಣ ನಿರ್ಮಾಣ ಮಾಡಿ. ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಕ್ಷೇತ್ರದ ಎಲ್ಲ ಇಲಾಖೆ ಅಧಿಕಾರಿಗಳು, ಕ್ಷೇತ್ರದ ಮಾಜಿ ಶಾಸಕರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾಹಿತಿಗಳು, ವರ್ತಕರು, ಮಾಧ್ಯಮ ಮಿತ್ರರು ಎಲ್ಲರನ್ನೂ ಒಂದು ಕಡೆ ಸೇರಿಸಿ ತುರ್ತು ಸಭೆ ಕರೆದು ಕ್ಷೇತ್ರದ ಅಭಿವೃದ್ಧಿಯ ವಿಚಾರದ ಸೂಚನೆಗಳನ್ನು ಪಡೆದು ಮುಂದುವರೆಯಬಹುದು ಅಲ್ಲವೇ.

ಇದು ಕೇವಲ ನನ್ನ ಅನಿಸಿಕೆ. ಇದರಿಂದ ಯಾರೂ ಬೇಸರ ಪಡೆದುಕೊಳ್ಳಬೇಡಿ. ಇದು ಕ್ಷೇತ್ರದ ಅಭಿವೃದ್ಧಿಯ ಕನಸಿನ ಬರವಣಿಗೆ ಅಷ್ಟೇ. ನಮಗೆ ನಮ್ಮ ಕ್ಷೇತ್ರ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಬರವಣಿಗೆ ಮಾಡಿದ್ದೇನೆ. ಈ ನನ್ನ ಬರವಣಿಗೆಯಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ.

ಇಂತಿ ನಿಮ್ಮ: ಪ್ರಕಾಶ್ ಮಂದಾರ್, ಪತ್ರಕರ್ತರು

Tags: Assembly constituencyBayalu Seeme NewsDavanagereDevelopment worksElectionHariharaKannada Newsಅಭಿವೃದ್ಧಿಚುನಾವಣೆವಿಧಾನಸಭಾ ಕ್ಷೇತ್ರಹರಿಹರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಆಷಾಢಮಾಸವೆಂದರೆ ವಿರಹಿಗಳ ಮಾಸವಲ್ಲ, ಭಕ್ತಿಯ ಸದವಕಾಶ

Next Post

ಬೆಂಗಳೂರು: ಸಂಸ್ಕೃತ-ಸಂಸ್ಕೃತಿ-ಸಂಸ್ಕಾರ ಕಲಿಯಲು ನಿಮಗಿದೋ ಅಮೂಲ್ಯ ಅವಕಾಶ

kalpa News

kalpa News

Next Post
ಬೆಂಗಳೂರು: ಸಂಸ್ಕೃತ-ಸಂಸ್ಕೃತಿ-ಸಂಸ್ಕಾರ ಕಲಿಯಲು ನಿಮಗಿದೋ ಅಮೂಲ್ಯ ಅವಕಾಶ

ಬೆಂಗಳೂರು: ಸಂಸ್ಕೃತ-ಸಂಸ್ಕೃತಿ-ಸಂಸ್ಕಾರ ಕಲಿಯಲು ನಿಮಗಿದೋ ಅಮೂಲ್ಯ ಅವಕಾಶ

Leave a Reply Cancel reply

Your email address will not be published. Required fields are marked *

No Result
View All Result
Olectra Deploys 4,000 Electric Buses in India Milestone
English Articles

Olectra Creates History | First Company in India to Deploy 4,000 Electric Buses

by kalpa News
July 31, 2026
0

ಕಲ್ಪ ಮೀಡಿಯಾ ಹೌಸ್  |  Mumbai  | Olectra Greentech Limited (OGL), India’s leading electric mobility company, has achieved a historic milestone...

Read moreDetails
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL