ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಲಾಕ್ ಡೌನ್ ನಾಲ್ಕನೆಯ ಹಂತ ಆರಂಭವಾದ ಬೆನ್ನಲ್ಲೇ ರಾಜ್ಯದಲ್ಲಿ ನಿಗದಿತ ಬಸ್ ಸಂಚಾರವನ್ನು ಸರ್ಕಾರ ಇಂದಿನಿಂದ ಆರಂಭಿಸುತ್ತಿದ್ದು, ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ಎಲ್ಲ ಬಸ್’ಗಳ ಟಿಕೇಟ್ ಸೋಲ್ಡ್ ಔಟ್ ಆಗಿದೆ.
ಹೌದು… ಶಿವಮೊಗ್ಗದಿಂದ ಬೆಂಗಳೂರಿಗೆ ಇಂದಿನಿಂದ ರಿಸರ್ವೇಶನ್ ಅಡಿಯಲ್ಲಿ ಒಟ್ಟು ಆರು ಬಸ್’ಗಳು ಸಂಚರಿಸಲಿದ್ದು, ಈ ಎಲ್ಲ ಬಸ್’ಗಳ ಟಿಕೇಟ್ ಸೋಲ್ಡ್ ಔಟ್ ಆಗಿದೆ. ಇಂದು ಮಾತ್ರವಲ್ಲ ನಾಳೆ ಸಂಚರಿಸುವ ಆರು ಬಸ್’ಗಳ ಟಿಕೇಟ್ ಸಹ ಈಗಾಗಲೇ ಸೋಲ್ಡ್ ಔಟ್ ಆಗಿದೆ.
ಇನ್ನು, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುವ ಆರು ಬಸ್’ಗಳಲ್ಲಿ ಒಂದು ಬಸ್ ಟಿಕೇಟ್’ಗಳು ಮಾತ್ರ ಸೋಲ್ಡ್ ಔಟ್ ಆಗಿದ್ದು, ಇನ್ನುಳಿದ ಐದು ಬಸ್’ಗಳಲ್ಲಿ ಟಿಕೇಟ್ ದೊರೆಯುತ್ತಿದೆ. ಇದನ್ನು ಗಮನಿಸಿದಾಗ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುವವರ ಸಂಖ್ಯೆಗಿಂತಲೂ, ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವವರ ಸಂಖ್ಯೆಯೇ ಅಧಿಕವಾಗಿದೆ.
ಕೆಎಸ್’ಆರ್’ಟಿಸಿಯ ರಿಸರ್ವೇಶನ್ ಬಸ್’ಗಳಲ್ಲಿ ಇಂದು ಹಾಗೂ ನಾಳೆಯ ಟಿಕೇಟ್’ಗಳು ಸೋಲ್ಡ್ ಔಟ್ ಆಗಿದ್ದರೂ ಮೇ 21ರಿಂದ ಟಿಕೇಟ್’ಗಳು ಲಭ್ಯವಿದ್ದು, ಅಗತ್ಯವಿರುವ ಪ್ರಯಾಣಿಕರು https://ksrtc.in/oprs-web/ ಮೂಲಕ ಬುಕ್ ಮಾಡಿಕೊಳ್ಳಬಹುದು.
ವಿವಿಧ ಊರುಗಳಿಗೆ ಬಸ್ ಸಂಚಾರ: ಪ್ರಯಾಣಿಕರಲ್ಲಿ ಹರ್ಷ
ಇನ್ನು, ಶಿವಮೊಗ್ಗದಿಂದ ವಿವಿಧ ಊರುಗಳಿಗೆ ನಿಗದಿತ ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು, ಪ್ರಯಾಣಿಕರಲ್ಲಿ ಹರ್ಷ ಮೂಡಿದೆ.
ಇಂದು ಮುಂಜಾನೆಯಿಂದ ಹಲವು ನಗರಗಳಿಗೆ ಬಸ್ ಸಂಚಾರ ಆರಂಭವಾಗಿದ್ದು, ರಾಜ್ಯ ಸರ್ಕಾರದ ನಿರ್ದೇಶನದಂತೆ ಒಂದು ಬಸ್’ನಲ್ಲಿ ಗರಿಷ್ಠ 30 ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೇ, ಪ್ರಯಾಣಿಕರಿಗೆ ಥರ್ಮಲ್ ಟೆಸ್ಟ್ ಮಾಡುತ್ತಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
Get in Touch With Us info@kalpa.news Whatsapp: 9481252093
















